ಆ್ಯಪ್ನಗರ

ಬಸ್‌ ಡಿಪೋ ಕಟ್ಟಡ ಚಾವಣಿ ಕುಸಿದು 9 ಮಂದಿ ದುರ್ಮರಣ

ನಾಲ್ಕು ದಶಕಕ್ಕೂ ಹೆಚ್ಚು ವರ್ಷದ ಕಟ್ಟಡ ಕುಸಿತಗೊಂಡಿದೆ.

TNN 20 Oct 2017, 11:49 am
ನಾಗಪಟ್ಟಿಣಂ: ಸುಮಾರು ನಾಲ್ಕು ದಶಕ ಹಳೆಯದಾದ ತಮಿಳುನಾಡು ಸಾರಿಗೆ ಇಲಾಖೆಯ ಕಟ್ಟಡದ ಮೇಲ್ಚಾವಣಿ ಕುಸಿದು 9 ಮಂದಿ ಮೃತಪಟ್ಟಿದ್ದಾರೆ.
Vijaya Karnataka Web eight die as portion of bus depot roof collapses in tamil nadu
ಬಸ್‌ ಡಿಪೋ ಕಟ್ಟಡ ಚಾವಣಿ ಕುಸಿದು 9 ಮಂದಿ ದುರ್ಮರಣ


ನಾಗಪಟ್ಟಿಣಂನ ಪೊರಯಾರ್‌ನ ಬಸ್‌ ಡಿಪೋದಲ್ಲಿರುವ ಕಟ್ಟಡದ ಮೇಲ್ಚಾವಣಿ ಕುಸಿದ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ.

ರಾತ್ರಿ ಪಾಳಿ ಮುಗಿಸಿ ಕಟ್ಟಡದಲ್ಲಿಯೇ ಕೆಲವು ಚಾಲಕರು, ನಿರ್ವಾಹಕರು ಮಲಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುಕ್ರವಾರ ಬೆಳಗಿನ ಜಾವ ಮೇಲ್ಚಾವಣಿ ಕುಸಿಯಿತು. ಚಾಲಕರು, ನಿರ್ವಾಹಕರು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಗಾಯಗೊಂಡವರನ್ನು ಮೈಲಾದುತುರೈ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಟ್ಟಡ ಕುಸಿದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ 7.5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ, ಗಾಯಗೊಂಡವರಿಗೆ 1.5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

Eight die as portion of bus depot roof collapses in Tamil Nadu

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ