ಆ್ಯಪ್ನಗರ

'ಪಪ್ಪು' ಪದ ಬಳಸಬೇಡಿ: ಚುನಾವಣಾ ಆಯೋಗ

ಗುಜರಾತ್‌ನಲ್ಲಿ ಚುನಾವಣಾ ಕಾವು ಏರುತ್ತಲೇ ಇದ್ದು, ಇದೀಗ ರಾಹುಲ್‌ ಗಾಂಧಿಯವರಿಗೆ ವಿರೋಧಿಗಳಿಟ್ಟ 'ಪಪ್ಪು' ಪದವನ್ನು ಚುನಾವಣಾ ಜಾಹಿರಾತುಗಳಲ್ಲಿ ಬಳಸದಂತೆ ಗುಜರಾತ್‌ ಚುನವಣಾ ಆಯೋಗ ಬಿಜೆಪಿಗೆ ಆದೇಶಿಸಿದೆ.

THE ECONOMIC TIMES 15 Nov 2017, 10:12 am
ಅಹ್ಮದಾಬಾದ್‌: ಗುಜರಾತ್‌ನಲ್ಲಿ ಚುನಾವಣಾ ಕಾವು ಏರುತ್ತಲೇ ಇದ್ದು, ಇದೀಗ ರಾಹುಲ್‌ ಗಾಂಧಿಯವರಿಗೆ ವಿರೋಧಿಗಳಿಟ್ಟ 'ಪಪ್ಪು' ಪದವನ್ನು ಚುನಾವಣಾ ಜಾಹಿರಾತುಗಳಲ್ಲಿ ಬಳಸದಂತೆ ಗುಜರಾತ್‌ ಚುನಾವಣಾ ಆಯೋಗ ಬಿಜೆಪಿಗೆ ಆದೇಶಿಸಿದೆ.
Vijaya Karnataka Web election commission bars gujarat bjp from using pappu in electronic advertisement
'ಪಪ್ಪು' ಪದ ಬಳಸಬೇಡಿ: ಚುನಾವಣಾ ಆಯೋಗ


ಸಾಮಾಜಿಕ ಜಾಲತಾಣದಲ್ಲಿ 'ಪಪ್ಪು' ಎಂಬ ಪದವನ್ನು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿಗೆ ಗೇಲಿ ಮಾಡಲು ಬಳಕೆಯಾಗುತ್ತಿತ್ತು. ಇದರ ಬೆನ್ನಲ್ಲಿ ರಾಹುಲ್‌ರನ್ನು 'ಪಪ್ಪು' ಎಂದು ಉಲ್ಲೇಖಿಸಿದ ಜಾಹೀರಾತೊಂದನ್ನು ಬಿಜೆಪಿಯು ಬಿಡುಗಡೆ ಮಾಡಲು ಆಯೋಗದ ಬಳಿ ಕೇಳಿಕೊಂಡಿತ್ತು. ಈ ಜಾಹೀರಾತಿನಲ್ಲಿ ಪಪ್ಪು ಪದ ಬಳಕೆಯಾದ ಹಿನ್ನೆಲೆಯಲ್ಲಿ ಜಾಹೀರಾತನ್ನು ಸ್ಥಗಿತಗೊಳಿಸಲು ಆಯೋಗ ಆದೇಶಿಸಿದೆ.

ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಜಾಹೀರಾತು ಬಿಡುಗಡೆಗೂ ಮುನ್ನ ಆಯೋಗಕ್ಕೆ ಸಲ್ಲಿಸಿ ಅವರ ಒಪ್ಪಿಗೆ ಪಡೆಯ ಬೇಕು. ಆದರೆ ಬಿಜೆಪಿ ಸಲ್ಲಿದ ಜಾಹೀರಾತಿನಲ್ಲಿ ಪಪ್ಪು ಪದ ಬಳಕೆ ಮಾಡಿದ್ದು, ಈ ಪದ ಅವಹೇಳನಕಾರಿ ಎಂದು ಆಯೋಗ ಆರೋಪಿಸಿ ಈ ಪದಕ್ಕೆ ಕತ್ತರಿ ಪ್ರಯೋಗ ಮಾಡುವಂತೆ ಆದೇಶಿಸಿರುವುದಾಗಿ ಬಿಜೆಪಿ ಮೂಲಗಳು ಹೇಳಿವೆ.

ಪಕ್ಷವು ಈ ಪದವನ್ನು ತೆಗದು ಹಾಕಲು ನಿರ್ಧರಿಸಿದ್ದು ಇದರ ಬದಲು ಬೇರೆಯದೇ ಹೊಸ ಸ್ಕ್ರಿಪ್ಟ್‌ ಬಳಸುವುದಾಗಿ ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ