ಆ್ಯಪ್ನಗರ

ಜಡ್ಜ್‌ಗಳ ಬಡ್ತಿಗೆ ಆದಾಯ ನಿರ್ಬಂಧ ಸಡಿಲಿಸಲು ಕೊಲಿಜಿಯಂ ನಿರ್ಧಾರ

ಹತ್ತು ವಕೀಲರಿಗೆ ನ್ಯಾಯಮೂರ್ತಿ ಸ್ಥಾನಕ್ಕೆ ಪದೋನ್ನತಿ ನೀಡಿರುವ ಕೊಲಿಜಿಯಂ, ಅವರಲ್ಲಿ ಹಲವರ ಕನಿಷ್ಠ ಆದಾಯ 7 ಲಕ್ಷ ರೂ.ಗಳಿಗಿಂತಲೂ ಕಡಿಮೆ ಇರುವುದಾಗಿ ತಿಳಿಸಿದೆ.

Vijaya Karnataka 16 Feb 2019, 5:00 am
ಹೊಸದಿಲ್ಲಿ: ಹೈಕೋರ್ಟ್‌ ನ್ಯಾಯಮೂರ್ತಿಗಳ ಸ್ಥಾನಕ್ಕೆ ಪದೋನ್ನತಿ ನೀಡುವ ವಿಷಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಕನಿಷ್ಠ ಆದಾಯ ಮಿತಿ ವಿಷಯದಲ್ಲಿ ಇದ್ದ ನಿರ್ಬಂಧದಲ್ಲಿ ಸಡಿಲಿಕೆ ಮಾಡಲಾಗಿದೆ.
Vijaya Karnataka Web supreme


ಸದ್ಯ ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಪದೋನ್ನತಿ ಬಯಸುವ ಅಭ್ಯರ್ಥಿಗಳ ಕನಿಷ್ಠ ಆದಾಯ ಮಿತಿ 7 ಲಕ್ಷ ರೂ. ಇರಬೇಕು ಎನ್ನುವ ನಿರ್ಬಂಧ ಇದೆ. ಸರಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸುವ ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿ ಸ್ಥಾನಕ್ಕೆ ಪರಿಗಣಿಸುವಾಗ ಈ ನಿರ್ಬಂಧದಿಂದ ಸ್ವಲ್ಪಮಟ್ಟಿನ ವಿನಾಯಿತಿ ನೀಡಲು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌, ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಎಸ್‌.ಎ.ಬೋಬ್ಡೆ ಒಳಗೊಂಡ ಕೊಲಿಜಿಯಂ ಸಭೆ ನಿರ್ಧರಿಸಿದೆ.

ಇದೇ ವೇಳೆ, ಹತ್ತು ವಕೀಲರಿಗೆ ನ್ಯಾಯಮೂರ್ತಿ ಸ್ಥಾನಕ್ಕೆ ಪದೋನ್ನತಿ ನೀಡಿರುವ ಕೊಲಿಜಿಯಂ, ಅವರಲ್ಲಿ ಹಲವರ ಕನಿಷ್ಠ ಆದಾಯ 7 ಲಕ್ಷ ರೂ.ಗಳಿಗಿಂತಲೂ ಕಡಿಮೆ ಇರುವುದಾಗಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ