ಆ್ಯಪ್ನಗರ

ಹಿಂದೂ ಬಾಲಕಿಯರಿಬ್ಬರಿಗೆ ನ್ಯಾಯ ಒದಗಿಸಲು ಆಗ್ರಹ

ಬಲವಂತದ ಮತಾಂತರಕ್ಕೆ ಒಳಗಾಗಿದ್ದ ರವೀನಾ(13) ಮತ್ತು ರೀನಾ(15) ಬಾಲಕಿಯರನ್ನು ಅವರ ಪೋಷಕರಿಗೆ ಒಪ್ಪಿಸುವಲ್ಲಿ ತುರ್ತು ಕ್ರಮ ಕೈಗೊಳ್ಳಿ ಎಂದು ಸಚಿವೆ ಸುಷ್ಮಾ ಸ್ವರಾಜ್‌ ಅವರು ಪಾಕಿಸ್ತಾನ ಸರಕಾರಕ್ಕೆ ಆಗ್ರಹಿಸಿದ್ದಾರೆ.

Vijaya Karnataka 27 Mar 2019, 5:00 am
ಹೊಸದಿಲ್ಲಿ: ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದಲ್ಲಿ ಬಲವಂತದ ಮತಾಂತರಕ್ಕೆ ಒಳಗಾಗಿದ್ದ ಹಿಂದೂ ಬಾಲಕಿಯರಿಬ್ಬರಿಗೆ ನ್ಯಾಯ ಒದಗಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಅವರು ಪಾಕಿಸ್ತಾನ ಸರಕಾರಕ್ಕೆ ಆಗ್ರಹಿಸಿದ್ದಾರೆ.
Vijaya Karnataka Web sushma-swaraj-with-yousuf-abdullah-alawi-bin_5c251176-49b5-11e7-88f6-6a3facb665a5


ಸಿಂಧ್‌ ಪ್ರಾಂತ್ಯದ ಗೊಟ್ಕಿ ಜಿಲ್ಲೆಯ ಡಾರ್ಕಿ ಪಟ್ಟಣದಲ್ಲಿ ಹೋಳಿ ಹಬ್ಬದ ಸಂಜೆ ರವೀನಾ(13) ಮತ್ತು ರೀನಾ(15) ಎಂಬ ಸಹೋದರಿಯರನ್ನು ಗುಂಪೊಂದು ಅಪಹರಿಸಿತ್ತು. ಮೌಲ್ವಿಯೊಬ್ಬರು ಇಬ್ಬರನ್ನೂ ಇಸ್ಲಾಂಗೆ ಮತಾಂತರಿಸಿ ಮುಸ್ಲಿಂ ಯುವಕರ ಜತೆ ಅವರ ಮದುವೆ ಮಾಡಿಸಿದ ವಿಡಿಯೊ ವೈರಲ್‌ ಆಗಿತ್ತು. ಇದರ ಬೆನ್ನಲ್ಲೇ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದರು.

ಪೊಲೀಸರಿಂದ ಬಾಲಕಿಯರ ರಕ್ಷಣೆಯಾಗಿದೆ. ಆದರೆ ಪಾಕ್‌ ಕೋರ್ಟ್‌ ಹೇಳಿದಂತೆ ಅವರಿಗೆ ಹೆಚ್ಚಿನ ರಕ್ಷಣೆಯ ಅಗತ್ಯವಿದೆ ಎಂದಿರುವ ಸುಷ್ಮಾ, ''ಈ ಇಬ್ಬರೂ ಬಾಲಕಿಯರನ್ನು ಅವರ ಪೋಷಕರಿಗೆ ಒಪ್ಪಿಸುವಲ್ಲಿ ತುರ್ತು ಕ್ರಮ ಕೈಗೊಳ್ಳಿ,'' ಎಂದು ಅಲ್ಲಿನ ಸರಕಾರವನ್ನು ಆಗ್ರಹಿಸಿದ್ದಾರೆ. ಅಲ್ಲದೇ ಘಟನೆ ಕುರಿತು ವರದಿ ಸಲ್ಲಿಸುವಂತೆ ಇಸ್ಲಾಮಾಬಾದ್‌ನಲ್ಲಿರುವ ರಾಯಭಾರ ಕಚೇರಿಗೆ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ