ಆ್ಯಪ್ನಗರ

ಸದನಕ್ಕೆ ಗೈರಾಗುವ ಸಂಸದರಿಗೆ ಬಿಸಿ ಮುಟ್ಟಿಸಿದ ಅಮಿತ್‌ ಶಾ

ವಿಧೇಯಕಗಳನ್ನು ಮತಕ್ಕೆ ಹಾಕಿದಾಗ ಪ್ರತಿಪಕ್ಷಗಳು ಮತ ವಿಭಜನೆಗೆ ಒತ್ತಾಯಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ.

PTI 31 Jul 2019, 5:00 am
ಹೊಸದಿಲ್ಲಿ: ವಿಧೇಯಕಗಳನ್ನು ಮತಕ್ಕೆ ಹಾಕಿದಾಗ ಪ್ರತಿಪಕ್ಷಗಳು ಮತ ವಿಭಜನೆಗೆ ಒತ್ತಾಯಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಪಕ್ಷದ ಎಲ್ಲ ಸಂಸದರು ಸಂಸತ್‌ ಕಲಾಪದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಸೂಚಿಸಿದ್ದಾರೆ.
Vijaya Karnataka Web ensure presence in parliament to back bills with maximum numbers shah to bjp mps
ಸದನಕ್ಕೆ ಗೈರಾಗುವ ಸಂಸದರಿಗೆ ಬಿಸಿ ಮುಟ್ಟಿಸಿದ ಅಮಿತ್‌ ಶಾ

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಕಲಾಪದಲ್ಲಿ ಸದಸ್ಯರ ಗೈರು ಹಾಜರಿಯನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಸೋಮವಾರ ಲೋಕಸಭೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕವು 260-48 ಮತಗಳ ಅಂತರದಿಂದ ಅಂಗೀಕಾರವಾಗಿದ್ದನ್ನು ಪ್ರಸ್ತಾಪಿಸಿದ ಅವರು, ''ಬಿಜೆಪಿ ಸಂಸದರ ಸಂಖ್ಯೆಯೇ 303 ಇದೆ. ಹೀಗಿರುವಾಗ ವಿಧೇಯಕದ ಪರವಾಗಿ 260 ಬಿದ್ದಿದೆ. ಅಂದರೆ ನಮ್ಮ ಪಕ್ಷದ ಹೆಚ್ಚಿನ ಸಂಸದರು ಗೈರಾಗಿದ್ದನ್ನು ಇದು ಸೂಚಿಸುತ್ತದೆ. ಭವಿಷ್ಯದಲ್ಲಿ ವಿಧೇಯಕಗಳನ್ನು ಮತಕ್ಕೆ ಹಾಕಿದಾಗ ಮತಗಳ ಅಂತರ ಇನ್ನೂ ಹೆಚ್ಚಿರಬೇಕು,'' ಎಂದು ಹೇಳಿದರು.
ಆಗಸ್ಟ್‌ 3 ಹಾಗೂ 4ರಂದು ಪಕ್ಷದ ಸಂಸದರಿಗೆ ಹಮ್ಮಿಕೊಂಡಿರುವ ಪುನರ್‌ಮನನ ಕಾರ್ಯಾಗಾರದಲ್ಲಿ ಎಲ್ಲ ಸಂಸದರೂ ಕಡ್ಡಾಯವಾಗಿ ಹಾಜರಾಗಲೇಬೇಕು. ಸಂಸದೀಯ ನಿಯಮಗಳು, ಸಂಸದೀಯ ವರ್ತನೆ ಕರಿತು ಮಾಹಿತಿ ನೀಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕಾರ್ಯಾಗಾರ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶಾ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರೂ ಸಭೆಯಲ್ಲಿ ಭಾಗವಹಿಸಿದ್ದರಾದರೂ, ಸಭೆ ಉದ್ದೇಶಿಸಿ ಮಾತನಾಡಲಿಲ್ಲ.
ಸುದ್ದಿಗಾರರಿಗೆ ಸಭೆಯ ವಿವರ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರು, ಹಾಲಿ ಅಧಿವೇಶನದಲ್ಲಿ ಈವರೆಗೆ 15 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಆರು ವಿಧೇಯಕಗಳು ರಾಜ್ಯಸಭೆಯ ಒಪ್ಪಿಗೆ ಪಡೆಯುವುದು ಬಾಕಿ ಇದೆ. ಇನ್ನೂ 11 ವಿಧೇಯಕಗಳನ್ನು ಉಭಯ ಸದನಗಳಲ್ಲಿ ಮಂಡಿಸಬೇಕಿದೆ. ಹೀಗಾಗಿ ಪಕ್ಷದ ಎಲ್ಲ ಸಂಸದರ ಹಾಜರಾಗಿ ಅಗತ್ಯ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ