ಆ್ಯಪ್ನಗರ

ಸೂರ್ಯಾಸ್ತದ ಬಳಿಕ ಗೋವಾ ಬೀಚ್‌ಗೆ ನಿಷೇಧ

ಗೋವಾದ ಬೀಚ್‌ಗಳಲ್ಲಿ ಸೂರ್ಯಾಸ್ತದ ನಂತರ ಪ್ರವಾಸಿಗರು ಸಮುದ್ರಕ್ಕಿಳಿಯುವುದು ಹಾಗೂ ಸಮುದ್ರ ಸ್ನಾನ ಮಾಡಲು ನಿರ್ಬಂಧ ಹೇರಲಾಗಿದೆ...

PTI 13 Sep 2017, 11:27 am

ಪಣಜಿ: ಗೋವಾದ ಬೀಚ್‌ಗಳಲ್ಲಿ ಸೂರ್ಯಾಸ್ತದ ನಂತರ ಪ್ರವಾಸಿಗರು ಸಮುದ್ರಕ್ಕಿಳಿಯುವುದು ಹಾಗೂ ಸಮುದ್ರ ಸ್ನಾನ ಮಾಡಲು ನಿರ್ಬಂಧ ಹೇರಲಾಗಿದೆ. ಮುಖ್ಯಮಂತ್ರಿ ಮನೋಹರ್‌ ಪರಿಕರ್‌ ಅವರ ಅಧ್ಯಕ್ಷ ತೆಯಲ್ಲಿ ಪರ್ವರಿಯ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

Vijaya Karnataka Web entering beach after sun set is banned
ಸೂರ್ಯಾಸ್ತದ ಬಳಿಕ ಗೋವಾ ಬೀಚ್‌ಗೆ ನಿಷೇಧ


ಇದರಿಂದಾಗಿ ದೇಶ ವಿದೇಶಗಳಿಂದ ಮೋಜು ಮಸ್ತಿಗಾಗಿಯೇ ಗೋವಾಕ್ಕೆ ಆಗಮಿಸುತ್ತಿದ್ದ ಪ್ರವಾಸಿಗರಿಗೆ ಕೊಂಚ ನಿರಾಸೆ ಮೂಡಿಸಿದೆ. ಕಿನಾರಿ ಸುರಕ್ಷಾ ಸಮಿತಿ ಸ್ಥಾಪಿಸಿ 15 ದಿನಗಳಿಗೊಮ್ಮೆ ಈ ಕುರಿತ ವರದಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಪ್ರವಾಸಿಗರು ಬೀಚ್‌ಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅಡುಗೆ, ಸ್ನಾನ ಮಾಡುವುದಕ್ಕೂ ನಿಷೇಧ ಹೇರಲಾಗಿದೆ.

ಗೋವಾದಲ್ಲಿ ಸಮುದ್ರ ಸ್ನಾನಕ್ಕೆ ತೆರಳುವ ಪ್ರವಾಸಿಗರು ಸಾವಿಗೀಡಾಗುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ