ಆ್ಯಪ್ನಗರ

ದಾಳಿಗೆ ಬಳಸಲಾದ ಯುದ್ಧ ವಿಮಾನ, ಪರಿಕರಗಳು

ಡಸಾಲ್ಟ್‌ ಮಿರಾಜ್‌ 2000, ಸಿಂಗಲ್‌ ಎಂಜಿನ್‌ ಹೊಂದಿರುವ, ನಾಲ್ಕನೇ ತಲೆಮಾರಿನ ಯುದ್ಧ ವಿಮಾನ. ಬಹುಕಾರ್ಯಗಳನ್ನು ಒಮ್ಮೆಲೇ ನಿಭಾಯಿಸಬಲ್ಲದು. ರಫೇಲ್‌ ತಯಾರಿಸಲಿರುವ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯಿಂದ 1982ರಲ್ಲಿ ಖರೀದಿಸಲಾಗಿದೆ. ಗ್ವಾಲಿಯರ್‌ ವಾಯು ನೆಲೆ ಮೂಲಕ ಕಾರ್ಯಾಚರಣೆ ನಡೆಸುತ್ತವೆ. ಹಿಮಾಲಯ ಪ್ರದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದೆ.

Vijaya Karnataka 27 Feb 2019, 9:21 am
ಗುಪ್ತಚರ ಮಾಹಿತಿ ಆಧರಿಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ವಾಯುಪಡೆ ನಡೆಸಿದ ವಾಯುದಾಳಿಯಲ್ಲಿ ಅತ್ಯುತ್ತಮ ಯುದ್ಧವಿಮಾನಗಳು ಮತ್ತು ಯುದ್ಧೋಪಕರಣಗಳನ್ನು ಬಳಸಿದೆ. ಆ ಬಗ್ಗೆ ಕಿರುಮಾಹಿತಿ
Vijaya Karnataka Web Air Strike


1. ಡಸಾಲ್ಟ್‌ ಮಿರಾಜ್‌ 2000: ಸಿಂಗಲ್‌ ಎಂಜಿನ್‌ ಹೊಂದಿರುವ, ನಾಲ್ಕನೇ ತಲೆಮಾರಿನ ಯುದ್ಧ ವಿಮಾನ. ಬಹುಕಾರ್ಯಗಳನ್ನು ಒಮ್ಮೆಲೇ ನಿಭಾಯಿಸಬಲ್ಲದು. ರಫೇಲ್‌ ತಯಾರಿಸಲಿರುವ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯಿಂದ 1982ರಲ್ಲಿ ಖರೀದಿಸಲಾಗಿದೆ. ಗ್ವಾಲಿಯರ್‌ ವಾಯು ನೆಲೆ ಮೂಲಕ ಕಾರ್ಯಾಚರಣೆ ನಡೆಸುತ್ತವೆ. ಹಿಮಾಲಯ ಪ್ರದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಹೊಂದಿದೆ.

2. ಡಿಆರ್‌ಡಿಒ ನೇತ್ರಾ: ಇದು ವಾಯುಪಡೆಯ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವ್ಯವಸ್ಥೆ (ಎಇಡಬ್ಲ್ಯೂ ಅಂಡ್‌ ಸಿಎಸ್‌). ಭಾರತೀಯ ವಾಯುಪಡೆಯು ಈ ವ್ಯವಸ್ಥೆಯನ್ನು 'ಐ ಇನ್‌ ದಿ ಸ್ಕೈ' ಎಂದೇ ಕರೆಯುತ್ತದೆ. ಭಟಿಂಡಾ ವಾಯುನೆಲೆಯಲ್ಲಿನ ಎಂಬ್ರಾಯರ್‌ ಇಆರ್‌ಜೆ 145 ಯುದ್ಧವಿಮಾನಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ವಿದ್ಯುತ್ಕಾಂತೀಯ ತರಂಗಗಳ ಮೂಲಕ ಗುರಿಯನ್ನು ತಲುಪಬಲ್ಲ ರೇಡಾರ್‌ಗಳೊಂದಿಗೆ ದಾಳಿಗೆ ಬಳಸಲಾದ ಮಿರಾಜ್‌ 2000ನಲ್ಲಿ ಅಳವಡಿಸಿ ನೇತ್ರಾ ಎಇಡಬ್ಲ್ಯೂ ಅಂಡ್‌ ಸಿಎಸ್‌ ಜತೆ ಸಂಪರ್ಕ ಕಲ್ಪಿಸಲಾಗಿತ್ತು.

3. ಇಲ್ಯುಷಿನ್-78: ಇಂಧನ ಮರುಪೂರಣ ಮಾಡುವ ಟ್ಯಾಂಕರ್‌. ಆಗ್ರಾ ವಾಯುನೆಲೆಯಿಂದ ಕಾರ್ಯಚರಣೆ ನಡೆಸುತ್ತದೆ. ಕಾರ್ಯಾಚರಣೆ ಸುದೀರ್ಘವಾದರೆ ಮಿರಾಜ್‌ಗೆ ಇಂಧನ ಮರುಪೂರಣ ಮಾಡಬೇಕಾಗಬಹುದು ಎಂಬ ಕಾರಣದಿಂದ ಇದನ್ನೂ ಬಳಸಲಾಗಿತ್ತು.

4. ಐಇಐ ಹೆರಾನ್‌: ಇಸ್ರೇಲ್‌ ತಂತ್ರಜ್ಞಾನ ಹೊಂದಿರುವ ಮಾನವರಹಿತ ಏರಿಯಲ್‌ ವೆಹಿಕಲ್‌ (ಯುಎವಿ). ಭಾರತೀಯ ವಾಯುಪಡೆಯು ಗಡಿ ನಿಯಂತ್ರಣ ರೇಖೆಗುಂಟ ನಡೆಸುವ ವಾಯು ಸರ್ವೇಕ್ಷಣಕ್ಕೆ ಇದನ್ನು ಉಪಯೋಗಿಸುತ್ತದೆ.

5. ಜಿಬಿಯು-12 ಪೇವ್‌ವೇ ಲೇಸರ್‌ ಗೈಡೆಡ್‌ ಬಾಂಬ್‌: ಲೇಸರ್‌ ತಂತ್ರಜ್ಞಾನದಿಂದಾಗಿ ಗುರಿ ತಪ್ಪುವ ಸಾಧ್ಯತೆ ಕಡಿಮೆ. ಮಿರಾಜ್‌-2000 ಯುದ್ಧವಿಮಾನಗಳು 500/1000 ಕೆ.ಜಿ ಇಂತಹ ಲೇಸರ್‌ ಬಾಂಬ್‌ ಹೊತ್ತೊಯ್ಯುವ ಸಾಮರ್ಥ್ಯ‌ ಹೊಂದಿವೆ.

6. ಚಿಕ್ಕ ಬೆಳಕಿನ ಸಾಧನ (ಲೈಟಿಂಗ್‌ ಪಾಡ್‌): ಇಸ್ರೇಲ್‌ ತಂತ್ರಜ್ಞಾನದ ಚಿಕ್ಕ ಲೈಟಿಂಗ್‌ ಪಾಡ್‌ಗಳನ್ನು ಮಿರಾಜ್‌ಗೆ ಅಳವಡಿಸಲಾಗಿತ್ತು. ಲೇಸರ್‌ ಬಾಂಬ್‌ ಮತ್ತು ಈ ಪಾಡ್‌ಗಳಿಂದಾಗಿ ಅತ್ಯಂತ ನಿಖರ ದಾಳಿ ನಡೆಸಲು ಸಾಧ್ಯವಾಯಿತು.

7. ಮಾತ್ರಾ ಕ್ಷಿಪಣಿ: ಇವು ಫ್ರೆಂಚ್‌ ತಾಂತ್ರಿಕತೆಯ, ಆಗಸದಿಂದ ಆಗಸಕ್ಕೆ ಚಿಮ್ಮಬಲ್ಲ ಕ್ಷಿಪಣಿಗಳು. ಒಂದೊಮ್ಮೆ ಪಾಕಿಸ್ತಾನ ಯುದ್ಧವಿಮಾನಗಳು ದಾಳಿ ನಡೆಸಿದರೆ ಅವನ್ನು ಹೊಡೆದುರುಳಿಸುವ ಸಾಮರ್ಥ್ಯ‌ ಹೊಂದಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ