ಆ್ಯಪ್ನಗರ

ಎವರೆಸ್ಟ್‌ನಲ್ಲಿ ಟ್ರಾಫಿಕ್‌ ಜಾಮ್‌: ಮತ್ತಿಬ್ಬರು ಭಾರತೀಯರ ಸಾವು

ಇದರೊಂದಿಗೆ ಕಳೆದ ಒಂದು ವಾರದಲ್ಲಿ ಜನಜಂಗುಳಿಗೆ ಸಿಲುಕಿ, ಮೃತಪಟ್ಟ ಪರ್ವತಾರೋಹಿಗಳ ಸಂಖ್ಯೆ ಶುಕ್ರವಾರ 8ಕ್ಕೆ ಏರಿಕೆಯಾಗಿದೆ.

Vijaya Karnataka 25 May 2019, 5:00 am
ಕಾಠ್ಮಂಡು: ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ನಲ್ಲಿ ಪರ್ವತಾರೋಹಿಗಳ ಜನದಟ್ಟಣೆಯಿಂದಾಗಿ ಇಬ್ಬರು ಭಾರತೀಯರು ಸೇರಿದಂತೆ ಇನ್ನೂ ನಾಲ್ವರು ಮೃತಪಟ್ಟಿದ್ದಾರೆ.
Vijaya Karnataka Web everest trafic jam 4 more people died including two indians
ಎವರೆಸ್ಟ್‌ನಲ್ಲಿ ಟ್ರಾಫಿಕ್‌ ಜಾಮ್‌: ಮತ್ತಿಬ್ಬರು ಭಾರತೀಯರ ಸಾವು


ಇದರೊಂದಿಗೆ ಕಳೆದ ಒಂದು ವಾರದಲ್ಲಿ ಜನಜಂಗುಳಿಗೆ ಸಿಲುಕಿ, ಮೃತಪಟ್ಟ ಪರ್ವತಾರೋಹಿಗಳ ಸಂಖ್ಯೆ ಶುಕ್ರವಾರ 8ಕ್ಕೆ ಏರಿಕೆಯಾಗಿದೆ.

ಮೃತ ಭಾರತೀಯರನ್ನು ಕಲ್ಪನಾ ದಾಸ್‌ (52), ನಿಹಾಲ್‌ ಭಗವಾನ್‌ (27) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಶಿಖರ ಏರಿ ವಾಪಸಾಗುತ್ತಿದ್ದಾಗ, ಜನದಟ್ಟಣೆಯಿಂದಾಗಿ ಮುಂದೆ ಸಾಗಲಾರದೆ, ಉಸಿರಾಟ ಸಮಸ್ಯೆಗೆ ಸಿಲುಕಿ ಮೃತಪಟ್ಟಿದ್ದಾರೆ. ನೇಪಾಳದ ಒಬ್ಬರು ಮತ್ತು ಆಸ್ಪ್ರೇಲಿಯಾದ ಮತ್ತೊಬ್ಬರು ಸಹ ಇದೇ ಕಾರಣಕ್ಕೆ ಕೊನೆಯುಸಿರೆಳೆದಿದ್ದಾರೆ. ಕಿರದಾದ ಹಾದಿಯಲ್ಲಿ ಪರ್ವತ ಏರುವವರು ಮತ್ತು ಇಳಿಯುವವರ ತೀವ್ರ ಜನದಟ್ಟಣೆ ಹಿನ್ನೆಲೆಯಲ್ಲಿ ಸುಮಾರು 12 ಗಂಟೆಗೂ ಹೆಚ್ಚು ಕಾಲ 'ಟ್ರಾಫಿಕ್‌ ಜಾಮ್‌' ಉಂಟಾಗಿತ್ತು ಎಂದು ತಿಳಿದುಬಂದಿದೆ. ಬುಧವಾರ ಅಮೆರಿಕದ ಇಬ್ಬರು ಇದೇ ಕಾರಣಕ್ಕೆ ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ