ಆ್ಯಪ್ನಗರ

ಉದ್ಯೋಗಾವಕಾಶಗಳಲ್ಲಿ ಗಣನೀಯ ಏರಿಕೆ: ನೀತಿ ಆಯೋಗ

ಜಿಎಸ್‌ಟಿ, ದಿವಾಳಿ ನೀತಿ ಮತ್ತು ಬೇನಾಮಿ ಕಾಯ್ದೆ ಸೇರಿದಂತೆ ಎಲ್ಲ ಸುಧಾರಣಾ ಕ್ರಮಗಳನ್ನು ಇನ್ನಷ್ಟು ಒಗ್ಗೂಡಿಸಲು ಈಗ ಕಾಲ ಪಕ್ವವಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್‌ ಹೇಳಿದ್ದಾರೆ.

Vijaya Karnataka Web 26 Nov 2017, 3:59 pm
ಹೊಸದಿಲ್ಲಿ: ಜಿಎಸ್‌ಟಿ, ದಿವಾಳಿ ನೀತಿ ಮತ್ತು ಬೇನಾಮಿ ಕಾಯ್ದೆ ಸೇರಿದಂತೆ ಎಲ್ಲ ಸುಧಾರಣಾ ಕ್ರಮಗಳನ್ನು ಇನ್ನಷ್ಟು ಒಗ್ಗೂಡಿಸಲು ಈಗ ಕಾಲ ಪಕ್ವವಾಗಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್‌ ಹೇಳಿದ್ದಾರೆ.
Vijaya Karnataka Web evidence of substantial increase in employment niti aayog vc
ಉದ್ಯೋಗಾವಕಾಶಗಳಲ್ಲಿ ಗಣನೀಯ ಏರಿಕೆ: ನೀತಿ ಆಯೋಗ


ಕಳೆದ 42 ತಿಂಗಳುಗಳಲ್ಲಿ ಮೋದಿ ಸರಕಾರ ಕೈಗೊಂಡ ಸುಧಾರಣಾ ಕ್ರಮಗಳು 'ನಿರೀಕ್ಷಿತ ಫಲ' ನೀಡಬೇಕಾದರೆ ಅವುಗಳನ್ನು ಒಗ್ಗೂಡಿಸುವ ಅಗತ್ಯವಿದೆ ಎಂದು ಅವರು ನುಡಿದರು.

'ಮೋದಿ ಸರಕಾರ ಕಳೆದ 42 ತಿಂಗಳುಗಳಲ್ಲಿ ಬಹಳಷ್ಟು ಸುಧಾರಣಾ ಕೆಲಸಗಳನ್ನು ಮಾಡಿದೆ. ಕೆಲವು ಅತ್ಯಂತ ಮಹತ್ವದ ಹೆಜ್ಜೆಗಳಿನ್ನೂ ಇಟ್ಟಿದೆ. ನಿರೀಕ್ಷಿತ ಫಲ ಪಡೆಯಲು ಈ ಸುಧಾರಣೆ ಕ್ರಮಗಳನ್ನು ಒಗ್ಗೂಡಿಸುವ ಅಗತ್ಯವಿದೆ ಎಂಬುದು ನನ್ನ ವೈಯಕ್ತಿಕ ಅಭಿಮತ' ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ನುಡಿದರು.

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಿದೆ. ಮುಂದಿನ ಲೋಕಸಭಾ ಚುನಾವಣೆ 2019ರಲ್ಲಿ ನಡೆಯಲಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಬೇನಾಮಿ ವಹಿವಾಟು (ನಿಷೇಧ) ಕಾಯ್ದೆ, ದಿವಾಳಿತನ ಕಾಯ್ದೆ (ಐಬಿಸಿ) ಮತ್ತು ನೇರ ನಗದು ವರ್ಗಾವಣೆ (ಡಿಬಿಟಿ)ಯಂತಹ ಕೆಲವು ಮಹತ್ವದ ಕ್ರಮಗಳನ್ನು ಈ ಅವಧಿಯಲ್ಲಿ ಕೈಗೊಳ್ಳಲಾಗಿದೆ ಎಂದು ಕುಮಾರ್ ತಿಳಿಸಿದರು.

'ಅವುಗಳ ಅನುಷ್ಠಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದೇ ನಮ್ಮ ಮುಂದಿರುವ ಈಗಿನ ಆದ್ಯತೆ. ಸಾಮಾಜಿಕ ವಲಯದಲ್ಲಿ ಸಾರ್ವಜನಿಕ ಆರೋಗ್ಯ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಸುಧಾರಣೆಗಳು ಆಗಬೇಕಿದೆ' ಎಂದು ಅವರು ನುಡಿದರು.

'ಕಾರ್ಮಿಕರ ಭವಿಷ್ಯನಿಧಿ ಖಾತೆಗಳು, ಪಿಂಚಣಿ ಖಾತೆಗಳು (ಎನ್‌ಪಿಎಸ್‌) ಹೆಚ್ಚಿವೆ. ಸೇವಾ ವಲಯ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ, ಸಾರಿಗೆ ಉದ್ಯಮಗಳಲ್ಲಿ ಈ ಎರಡೂ ಖಾತೆಗಳು ಹೆಚ್ಚಿವೆ. ಉದ್ಯೋಗಾವಕಾಶಗಳ ಕೊರೆತಯಿದೆ ಎಂಬುದು ಉತ್ಪ್ರೇಕ್ಷೆಯಷ್ಟೆ' ಎಂದು ಅವರು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ