ಆ್ಯಪ್ನಗರ

ಇವಿಎಂ ಎಂದರೆ ಎವ್ರಿ ವೋಟ್‌ ಫಾರ್‌ ಮೋದಿ / ಮನೋಹರ್‌

ಎಲೆಕ್ಟ್ರಾನಿಕ್ ವೋಟಿಂಗ್‌ ಮೆಷಿನ್‌ ಎಂಬುದನ್ನು ಇವಿಎಂ ಎಂದು ಚಿಕ್ಕದಾಗಿ ಕರೆಯಲಾಗುತ್ತದೆ. ಈಗ ಚುನಾವಣೆ ಸಂದರ್ಭದಲ್ಲಿ ಇದರ ವ್ಯಾಖ್ಯಾನವನ್ನೇ ಬದಲಾಯಿಸಲಾಗಿದೆ.

Vijaya Karnataka Web 18 Oct 2019, 12:08 am
ರೊಹ್ಟಕ್‌: ಎವಿಎಂ ಎಂದರೆ ಏನು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಪ್ರಕಾರ ಇವಿಎಂ ಅಂದರೆ ಬೇರೆ
Vijaya Karnataka Web ಮನೋಹರ್‌ ಲಾಲ್‌ ಖಟ್ಟರ್‌
ಮನೋಹರ್‌ ಲಾಲ್‌ ಖಟ್ಟರ್‌


ಇವಿಎಂ ಎಂದರೆ ಎಲೆಕ್ಟ್ರಾನಿಕ್‌ ವೋಟಿಂಗ್‌ ಮೆಷಿನ್‌ ಎನ್ನುತ್ತಾರೆ. ಖಟ್ಟರ್‌ ಇದನ್ನು ಎವ್ರಿ ವೋಟ್‌ ಫಾರ್‌ ಮೋದಿ ಅಥವಾ ಎವ್ರಿ ವೋಟ್‌ ಫಾರ್‌ ಮನೋಹರ್ ಎಂದು ವ್ಯಾಖ್ಯಾನಿಸಿದ್ದಾರೆ.

ಈ ಕುರಿತು ಮನೋಹರ್‌ ಲಾಲ್‌ ಖಟ್ಟರ್‌ ಟ್ವೀಟ್‌ ಕೂಡ ಮಾಡಿದ್ದಾರೆ.

ಮನೋಹರ್‌ ಲಾಲ್‌ ಖಟ್ಟರ್‌ ಅವರ ಈ ಟ್ವೀಟ್‌ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಈಗ ರಾಜ್ಯ ವಿಧಾನಸಭೆ ಚುನಾವಣೆ ನಡೆಯುತ್ತದೆ. ಇದು ಲೋಕಸಭಾ ಚುನಾವಣೆಯಲ್ಲ. ಹಾಗಾಗಿ ಎವ್ರಿ ವೋಟ್‌ ಫಾರ್‌ ಮನೋಹರ್‌ ಎಂದು ಮಾರ್ಪಡು ಮಾಡಿಕೊಳ್ಳಿ. ಮನೋಹರ್‌ಗೆ ಹಾಕಿದಾರೂ ಅದು ಎವ್ರಿ ವೋಟ್‌ ಫಾರ್‌ ಮೋದಿಯೇ ಆಗುತ್ತದೆ ಎಂದು ಮನೋಹರ್ ಲಾಲ್‌ ಖಟ್ಟರ್‌ ವಿಶ್ಲೇಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ