ಆ್ಯಪ್ನಗರ

ಸಾಕುನಾಯಿಗೆ ಗುಂಡುಹಾರಿಸಿ ಕೊಂದ ಮಾಜಿ ಸೈನಿಕ

ಮಾಜಿ ಸೈನಿಕರೊಬ್ಬರು ತನ್ನ ಸಾಕುನಾಯಿಯನ್ನು ಕಟ್ಟಿಹಾಕಿ ಬಂದೂಕಿನಿಂದ ಶೂಟ್ ಮಾಡಿ ಸಾಯಿಸಿರುವ ಘಟನೆ ಪಂಜಾಬ್‍ನ ಬರ್ನಾಲಾ ಜಿಲ್ಲೆಯ ಬಾದ್ಬಾರ್ ಗ್ರಾಮದಲ್ಲಿ ನಡೆದಿದೆ.

TNN 9 Dec 2017, 4:09 pm
ಪಾಟಿಯಾಲಾ: ಮಾಜಿ ಸೈನಿಕರೊಬ್ಬರು ತನ್ನ ಸಾಕುನಾಯಿಯನ್ನು ಕಟ್ಟಿಹಾಕಿ ಬಂದೂಕಿನಿಂದ ಶೂಟ್ ಮಾಡಿ ಸಾಯಿಸಿರುವ ಘಟನೆ ಪಂಜಾಬ್‍ನ ಬರ್ನಾಲಾ ಜಿಲ್ಲೆಯ ಬಾದ್ಬಾರ್ ಗ್ರಾಮದಲ್ಲಿ ನಡೆದಿದೆ. ಅಜಿತ್ ಸಿಂಗ್ ಎಂಬ ಮಾಜಿ ಸೈನಿಕ ತನ್ನ ಸ್ವಗ್ರಾಮ ಬದ್ಬಾರ್‍‍ನಲ್ಲಿ ತನ್ನ ಮಿತ್ರ ಸತ್ವೀರ್ ಸಿಂಗ್ ಜತೆ ಸೇರಿ ಎಲ್ಲರೂ ನೋಡುತ್ತಿದ್ದಂತೆ ನಾಯಿಯನ್ನು ದಾರುಣವಾಗಿ ಕೊಂದುಹಾಕಿದ್ದಾರೆ.
Vijaya Karnataka Web ex armyman uses rifle to shoot chained dog booked
ಸಾಕುನಾಯಿಗೆ ಗುಂಡುಹಾರಿಸಿ ಕೊಂದ ಮಾಜಿ ಸೈನಿಕ


ಆ ಮಾಜಿ ಸೈನಿಕನ ಮಗ ಈ ಸನ್ನಿವೇಶವನ್ನು ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾನೆ. ಸದ್ಯಕ್ಕೆ ಈ ವೀಡಿಯೋ ವೈರಲ್ ಆಗಿದೆ. ಪ್ರಾಣಿಪ್ರಿಯರು ಈ ವೀಡಿಯೋ ನೋಡಿ ಅಜಿತ್ ಸಿಂಗ್ ವಿಕೃತಿಯ ಬಗ್ಗೆ ಕಿಡಿ ಕಾರುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಾಣಿ ದಯಾ ಸಂಘ ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಸಚಿವೆ ಮನೇಕಾ ಗಾಂಧಿ, ಪಂಜಾಬ್ ಡಿಜಿಪಿಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾದ ಪೊಲೀಸರು ಅಜಿತ್ ಸಿಂಗ್ ಮೇಲೆ ಪ್ರಾಣಿಹಿಂಸೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಜಾಮೀನಿನ ಮೇಲೆ ಮಾಜಿ ಸೈನಿಕ ಅಜಿತ್ ಸಿಂಗ್ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸತ್ವೀರ್ ಸಿಂಗ್, 'ನನ್ನ ಸಾಕು ನಾಯಿಗೆ ರೇಬೀಸ್ ಸೋಕಿದೆ. ಈ ನಾಯಿ ನನ್ನೆರಡು ಎಮ್ಮೆಗಳನ್ನು, ಬಹಳಷ್ಟು ಜನರನ್ನು ಕಚ್ಚಿದೆ. ಹಾಗಾಗಿ ಅದನ್ನು ಕೊಂದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ತುಂಬಾ ಪ್ರೀತಿಯಿಂದ ಆ ನಾಯಿಯನ್ನು ಸಾಕಿಕೊಂಡಿದ್ದೆ. ಅಂತಹದ್ದರಲ್ಲಿ ನಾನೇ ಯಾಕೆ ಸಾಯಿಸುತ್ತೀನೆಂದು' ಸೈನಿಕ ಹೇಳಿದ್ದಾನೆ. ನಾಯಿಯ ಅವಯವಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ