ಆ್ಯಪ್ನಗರ

ದಶಕದ ಕಾಲ ರಿಕ್ಷಾ ಚಾಲಕ, ಈಗ ಪಾಲಿಕೆ ಮೇಯರ್

ಅವರು ರೈತ ಕುಟುಂಬದಿಂದ ಬಂದವರು. ಓದಿದ್ದು 10ನೇ ಕ್ಲಾಸು. 1996ರಿಂದ 2003ರವರೆಗೆ ರಿಕ್ಷಾ ಓಡಿಸಿ ಬದುಕು ಸಾಗಿಸುತ್ತಿದ್ದ ಅವರು ಈಗ ಮಹಾರಾಷ್ಟ್ರದ ಪ್ರತಿಷ್ಠಿತ ಪಿಂಪ್ರಿ-ಚಿಂಚವಾಡ ಪಾಲಿಕೆಯ ಮೇಯರ್‌ !

Vijaya Karnataka 6 Aug 2018, 10:26 am
ಪುಣೆ: ಅವರು ರೈತ ಕುಟುಂಬದಿಂದ ಬಂದವರು. ಓದಿದ್ದು 10ನೇ ಕ್ಲಾಸು. 1996ರಿಂದ 2003ರವರೆಗೆ ರಿಕ್ಷಾ ಓಡಿಸಿ ಬದುಕು ಸಾಗಿಸುತ್ತಿದ್ದ ಅವರು ಈಗ ಮಹಾರಾಷ್ಟ್ರದ ಪ್ರತಿಷ್ಠಿತ ಪಿಂಪ್ರಿ-ಚಿಂಚವಾಡ ಪಾಲಿಕೆಯ ಮೇಯರ್‌.
Vijaya Karnataka Web pune mayor


ಹೌದು, 36 ವರ್ಷದ ರಾಹುಲ್‌ ಜಾಧವ್‌ ಅವರು ಮೇಯರ್‌ ಆಗುವ ದಾರಿಯಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಿಕೊಂಡು ಬಂದಿದ್ದಾರೆ.

2003ರವರೆಗೆ ಅವರು ಓಡಿಸುತ್ತಿದ್ದುದು ಆರು ಸೀಟುಗಳ ಆಟೋ ರಿಕ್ಷಾ. ''ಆರು ಸೀಟಿನ ರಿಕ್ಷಾ ನಿಷೇಧಿಸಲ್ಪಟ್ಟಾಗ ನಾನು ಕೃಷಿಗೆ ಇಳಿದೆ. ಆಮೇಲೆ ಖಾಸಗಿ ಕಂಪನಿಯಲ್ಲಿ ಚಾಲಕನ ಕೆಲಸಕ್ಕೆ ಸೇರಿದೆ,'' ಎಂದು ಬದುಕಿನ ಕಥೆ ವಿವರಿಸುತ್ತಾರೆ.

ರಾಜಕೀಯದ ದಾರಿ: 2006ರಲ್ಲಿ ರಾಜಕೀಯದ ಸೆಳೆತಕ್ಕೆ ಒಳಗಾದ ಅವರು 2007ರಲ್ಲಿ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಸೇರಿದರು. 2012ರಲ್ಲಿ ಮೊದಲ ಬಾರಿಗೆ ಎಂಎನ್‌ಎಸ್‌ ಟಿಕೆಟ್‌ನಡಿ ಕಾರ್ಪೊರೇಟರ್‌ ಆಗಿ ಆಯ್ಕೆಯಾದರು. 2017ರಲ್ಲಿ ಬಿಜೆಪಿ ಸೇರಿ ಎರಡನೇ ಬಾರಿ ನಗರ ಪಾಲಿಕೆ ಸದಸ್ಯರಾದರು. ಮೇಯರ್‌ ಆಗಿದ್ದ ನಿತಿನ್‌ ಕಾಲ್ಜೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಜಾಧವ್‌ ಅವರ ಹೆಸರನ್ನು ಪ್ರಸ್ತಾವಿಸಿತು. ಎನ್‌ಸಿಪಿ ಕೂಡಾ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದರಿಂದ ಶನಿವಾರ ಮತದಾನ ನಡೆಯಿತು. ಚಲಾಯಿತ 120 ಮತಗಳಲ್ಲಿ ಜಾಧವ್‌ 81 ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ