ಆ್ಯಪ್ನಗರ

ಪೋಲ್‌ ಆಫ್‌ ಪೋಲ್ಸ್‌ ಸಮೀಕ್ಷೆ: ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಪಿಣರಾಯಿ, ತಮಿಳು ನಾಡಲ್ಲಿ ಸ್ಟ್ಯಾಲಿನ್‌!

ಪಂಚರಾಜ್ಯ ಚುನಾವಣೆ ಕೊನೆಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಎಲ್ಲರ ಗಮನ ಸೆಳೆದಿವೆ. ಪಂಚರಾಜ್ಯ ಚುನಾವಣೆಯ ಕೇಂದ್ರಬಿಂದುವಾಗಿರುವ ಪಶ್ಚಿಮ ಬಂಗಾಳದಲ್ಲಿಅಧಿಕಾರದ ಗದ್ದುಗೆ ಮಮತಾ ಬ್ಯಾನರ್ಜಿ ಪಾಲಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

Vijaya Karnataka Web 29 Apr 2021, 10:47 pm
ಎಲ್‌ಡಿಎಫ್‌ ಹೊಸದಿಲ್ಲಿ: ಪಂಚರಾಜ್ಯಗಳ ಚುನಾವಣೆ ಗುರುವಾರ ಅಂತ್ಯಗೊಂಡಿದೆ. ಪಶ್ಚಿಮ ಬಂಗಾಳದ 8ನೇ ಹಾಗೂ ಅಂತಿಮ ಹಂತದ ಚುನಾವಣೆ ಕೊನೆಗೊಳ್ಳುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಎಲ್ಲರ ಗಮನ ಸೆಳೆದಿವೆ. ಪಂಚರಾಜ್ಯ ಚುನಾವಣೆಯ ಕೇಂದ್ರಬಿಂದುವಾಗಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆದ್ದರೂ, ಅಧಿಕಾರದ ಗದ್ದುಗೆ ಮಮತಾ ಬ್ಯಾನರ್ಜಿ ಪಾಲಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.
Vijaya Karnataka Web Exit polls 1


ಕೇರಳದಲ್ಲಿ ಬಿಜೆಪಿ ಕಳೆದ ಬಾರಿಗಿಂತಲೂ ಈ ಬಾರಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಪಿಣರಾಯಿ ವಿಜಯನ್‌ ನಾಯಕತ್ವದ ಎಲ್‌ಡಿಎಫ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ಹೇಳಿದೆ. ತಮಿಳುನಾಡಲ್ಲಿ ಡಿಎಂಕೆ ನಾಯಕ ಸ್ಟ್ಯಾಲಿನ್‌ ಯುಗ ಆರಂಭವಾಗಲಿದೆ ಎನ್ನಲಾಗುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ಪುದುಚೇರಿ ಕುತೂಹಲಕ್ಕೂ ಚುನಾವಣೋತ್ತರ ಸಮೀಕ್ಷೆ ಉತ್ತರ ನೀಡಿದೆ.

ರಾಜ್ಯ/ ಕೇಂದ್ರಾಡಳಿತ ಪ್ರದೇಶಒಟ್ಟು ಸ್ಥಾನಮೆಜಾರಿಟಿಸಂಭವನೀಯ ವಿಜೇತಪೋಲ್‌ ಆಫ್‌ ಪೋಲ್ಸ್‌
ಪಶ್ಚಿಮ ಬಂಗಾಳ292148ಟಿಎಂಸಿ148
ತಮಿಳು ನಾಡು234118ಡಿಎಂಕೆ165
ಕೇರಳ14071 ಎಲ್‌ಡಿಎಫ್‌ 85
ಅಸ್ಸಾಂ12664ಬಿಜೆಪಿ72
ಪುದುಚೇರಿ3016ಎನ್ಆರ್‌ಸಿ21


ಟೈಮ್ಸ್‌ ನೌ ಸಿ-ವೋಟರ್‌

  • ತಮಿಳುನಾಡು - ಒಟ್ಟು ಸ್ಥಾನ 234
  • ಮ್ಯಾಜಿಕ್‌ ನಂಬರ್‌ 118
  • ಡಿಎಂಕೆ ಮಿತ್ರಕೂಟ 166
  • ಎಐಎಡಿಎಂಕೆ ಮಿತ್ರಕೂಟ 64
  • ಎಂಎನ್‌ಎಂ ಮಿತ್ರಕೂಟ 1
  • ಎಎಂಎಂಕೆ 1
  • ಇತರೆ 2

ಟೈಮ್ಸ್‌ ನೌ- ಸಿ ವೋಟರ್‌
  • ಕೇರಳ: ಒಟ್ಟು ಸ್ಥಾನ 140
  • ಮ್ಯಾಜಿಕ್‌ ನಂಬರ್‌- 71
  • ಎಲ್‌ಡಿಎಫ್‌ 74
  • ಯುಡಿಎಫ್‌ 65
  • ಬಿಜೆಪಿ ಪ್ಲಸ್‌ 1

ಟುಡೇಸ್‌ ಚಾಣುಕ್ಯ
  • ಅಸ್ಸಾಂ: ಒಟ್ಟು ಸ್ಥಾನ 126
  • ಮ್ಯಾಜಿಕ್‌ ನಂಬರ್‌- 64
  • ಬಿಜೆಪಿ ಮಿತ್ರಕೂಟ 61-79
  • ಕಾಂಗ್ರೆಸ್‌ ಮಿತ್ರಕೂಟ 47-65
  • ಇತರೆ 0-3

ಎಬಿಪಿ ಸಿ-ವೋಟರ್
  • ಪುದುಚೆರಿ: ಒಟ್ಟು ಸ್ಥಾನ 30
  • ಮ್ಯಾಜಿಕ್‌ ನಂಬರ್‌- 16
  • ಎನ್‌ಡಿಎ 19-23
  • ಯುಪಿಎ 6-10
  • ಇತರೆ 1-2

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ