ಆ್ಯಪ್ನಗರ

ತಮ್ಮನ ನಾಯಕತ್ವ ಒಪ್ಪಿಕೊಂಡು ಪಕ್ಷಕ್ಕೆ ಮರಳುತ್ತೇನೆ ಎಂದ ಅಳಗಿರಿ!

ತಂದೆ ಎಂ ಕರುಣಾನಿಧಿ ಅವರ ಅಗಲಿಕೆ ನಂತರ ಅಣ್ಣ-ತಮ್ಮ ಒಂದಾಗುವ ಲಕ್ಷಣ ತಮಿಳುನಾಡು ರಾಜಕೀಯದಲ್ಲಿ ಕಂಡುಬಂದಿದೆ.

Vijaya Karnataka Web 30 Aug 2018, 3:32 pm
ಮಧುರೈ: ತಂದೆ ಎಂ ಕರುಣಾನಿಧಿ ಅವರ ಅಗಲಿಕೆ ನಂತರ ಅಣ್ಣತಮ್ಮಂದಿರು ಒಂದಾಗುವ ಲಕ್ಷಣ ತಮಿಳುನಾಡು ರಾಜಕೀಯದಲ್ಲಿ ಕಂಡುಬಂದಿದೆ.
Vijaya Karnataka Web Alagiri Stalin


ಈ ವಿಚಾರವಾಗಿ ತನ್ನನ್ನು ಪಕ್ಷಕ್ಕೆ ವಾಪಾಸು ಕರೆದುಕೊಂಡರೆ ತಮ್ಮನ ನಾಯಕತ್ವವನ್ನು ಒಪ್ಪಿಕೊಳ್ಳುವುದಾಗಿ ಉಚ್ಛಾಟಿತ ಡಿಎಂಕೆ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಎಂಕೆ ಅಳಗಿರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಮ್ಮ ನಿವಾಸದ ಹೊರಗೆ ಪತ್ರಕರ್ತರ ಜತೆ ಮಾತನಾಡಿದ ಅಳಗಿರಿ ಪಕ್ಷಕ್ಕೆ ವಾಪಾಸು ಸೇರಿಸಿಕೊಂಡರೆ ತಮ್ಮ ಎಂಕೆ ಸ್ಟಾಲಿನ್‌ ಜತೆಗಿನ ವೈಮನಸ್ಸು ಬಿಟ್ಟು ಒಂದಾಗುವುದಾಗಿ ಹೇಳಿದ್ದಾರೆ. ಏಕ ಸದಸ್ಯತ್ವದ ಜೆನರಲ್‌ಬಾಡಿಯನ್ನು ಯಾರು ಪಕ್ಷ ಎನ್ನುವುದಿಲ್ಲ ಎಂಬುದನ್ನು ಡಿಎಂಕೆ ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.

ಮರಿನಾ ಬೀಚ್‌ನಲ್ಲಿರುವ ದಿವಾಂಗತ ಎಂ ಕರುಣಾನಿಧಿ ಅವರ ಸಮಾಧಿ ಸ್ಥಳಕ್ಕೆ ಸೆಪ್ಟೆಂಬರ್‌ 5ರಂದು ಭೇಟಿ ನೀಡಲು ಅಗತ್ಯ ತಯಾರಿಗಳನ್ನು ನಡೆಸಲಾಗಿದೆ. ಭೇಟಿ ವಿಚಾರವಾಗಿ ಆಡಳಿತ ಪಕ್ಷದ ಜತೆ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ ಎಂದು ಅಳಗಿರಿ ತಿಳಿಸಿದ್ದಾರೆ.

2014ರಂದು ಕರುಣಾನಿಧಿ ಅಧ್ಯಕ್ಷರಾಗಿದ್ದ ಸಂದರ್ಭ ಅಳಗಿರಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ