ಆ್ಯಪ್ನಗರ

ಫೇಸ್‌ಬುಕ್‌ಗೆ ಆಧಾರ್‌ ಲಿಂಕ್‌, ಗೊಂದಲ ಬಗೆಹರಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

​ಆಧಾರ್‌ ಲಿಂಕ್‌ಗೆ ಸಂಬಂಧಿಸಿ ನಾನಾ ಹೈಕೋರ್ಟ್‌ಗಳು ಭಿನ್ನಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಗೊಂದಲವಾಗಿದೆ. ಒಂದೇ ತೀರ್ಮಾನ ಬಂದರೆ ಒಳ್ಳೆಯದು ಎಂದು ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳು ಈ ಹಿಂದೆ ವಾದಿಸಿದ್ದವು.

Agencies 13 Sep 2019, 8:43 pm
ಹೊಸದಿಲ್ಲಿ: ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದ ಪ್ರೊಫೈಲ್‌ಗಳಿಗೆ ಆಧಾರ್‌ ಲಿಂಕ್‌ ಮಾಡಬೇಕೇ ಬೇಡವೇ ಎಂಬ ಗೊಂದಲವನ್ನು ಆದಷ್ಟು ಬೇಗನೆ ಬಗೆಹರಿಸುವಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
Vijaya Karnataka Web facebook-account-aadhaar-card


"ಆಧಾರ್‌ ಲಿಂಕ್‌ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಹೈಕೋರ್ಟ್‌ಗಳೇ ಇತ್ಯರ್ಥಪಡಿಸುತ್ತವೆಯೋ ಅಥವಾ ಮದ್ರಾಸ್‌, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ನಾವು ಎತ್ತಿಕೊಳ್ಳಬೇಕೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ," ಎಂದು ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಮತ್ತು ಅನಿರುದ್ಧ್‌ ಬೋಸ್‌ ಹೇಳಿದರು. ಕೇಸುಗಳ ವರ್ಗಾವಣೆಗೆ ಆಕ್ಷೇಪವಿಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಈ ಸಂದರ್ಭದಲ್ಲಿ ಹೇಳಿದರು.

ಸುಪ್ರೀಂ ಕೋರ್ಟ್‌ ಆಗಸ್ಟ್‌ 20ರಂದು ಮದ್ರಾಸ್‌ ಹೈಕೋರ್ಟ್‌ಗೆ ನೀಡಿದ ಆದೇಶದಲ್ಲಿ, ವಿಚಾರಣೆ ಮುಂದುವರಿಸಿ ಆದರೆ ಯಾವುದೇ ಆದೇಶ ಹೊರಡಿಸಬೇಡಿ ಎಂದು ಸೂಚಿಸಿತ್ತು.

ಆಧಾರ್‌ ಲಿಂಕ್‌ಗೆ ಸಂಬಂಧಿಸಿ ನಾನಾ ಹೈಕೋರ್ಟ್‌ಗಳು ಭಿನ್ನಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಗೊಂದಲವಾಗಿದೆ. ಒಂದೇ ತೀರ್ಮಾನ ಬಂದರೆ ಒಳ್ಳೆಯದು ಎಂದು ಫೇಸ್‌ ಬುಕ್‌ ಸೇರಿದಂತೆ ಸಾಮಾಜಿಕ ಜಾಲ ತಾಣಗಳು ವಾದಿಸಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ