Please enable javascript.REFUSING SEX,ಸೆಕ್ಸ್‌ಗೆ ನಿರಾಕರಣೆ: ಯುವತಿಯ ಕೊಲೆಗೈದ fb ಸ್ನೇಹಿತ - facebook friend kills 20-year-old girl for refusing sex - Vijay Karnataka

ಸೆಕ್ಸ್‌ಗೆ ನಿರಾಕರಣೆ: ಯುವತಿಯ ಕೊಲೆಗೈದ fb ಸ್ನೇಹಿತ

Vijaya Karnataka Web 21 Feb 2018, 11:29 am
Subscribe

ಸೆಕ್ಸ್‌ ಬೇಡಿಕೆಯನ್ನು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಫೇಸ್‌ಬುಕ್‌ ಸ್ನೇಹಿತ ಯುವತಿಯನ್ನು ಕೊಲೆ ಮಾಡಿದ್ದಾನೆ.

facebook friend kills 20 year old girl for refusing sex
ಸೆಕ್ಸ್‌ಗೆ ನಿರಾಕರಣೆ: ಯುವತಿಯ ಕೊಲೆಗೈದ fb ಸ್ನೇಹಿತ
ಮುಂಬಯಿ: ಸೆಕ್ಸ್‌ ಬೇಡಿಕೆಯನ್ನು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಫೇಸ್‌ಬುಕ್‌ ಸ್ನೇಹಿತ ಯುವತಿಯನ್ನು ಕೊಲೆ ಮಾಡಿದ್ದಾನೆ.

ವಾಶಿಯ ಯುವತಿ ಅಂಕಿತಾ ಮೋರೆ ನಲಸಪೊರಾದ ಫೇಸ್‌ಬುಕ್‌ ಸ್ನೇಹಿತ ಹರಿದಾಸ್‌ ನಿರ್ಗುದೆಯನ್ನು ಭೇಟಿಯಾಗಲು ಅಲಕ್‌ಪುರಕ್ಕೆ ಹೋಗಿದ್ದಳು. ಭಾನುವಾರ ಸಂಜೆ ಏಳು ಗಂಟೆಗೆ ಹರಿದಾಸ್‌ನ ಫ್ಲ್ಯಾಟ್‌ನ ನೆಲ ಮಹಡಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ಆತ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆಲಮಹಡಿಯಲ್ಲಿ ಶವ ನೋಡಿದ ಫ್ಲ್ಯಾಟ್‌ನ ನಿವಾಸಿ ಪೊಲೀಸರಿಗೆ ಕರೆ ಮಾಡಿದ್ದರು. ಈ ಕಟ್ಟಡದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಲ್ಲ. ಹೀಗಾಗಿ ಯುವತಿಗೆ ಈ ಯುವತಿ ಇಲ್ಲಿಗೆ ಬಂದಿರುವ ಬಗ್ಗೆ ಹೆಚ್ಚಿನ ಸುಳಿವು ಸಿಕ್ಕಿಲ್ಲ.

ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ಸೆಕ್ಸ್‌ಗೆ ಒಪ್ಪದೆ ಅಲ್ಲಿಂದ ಹೊರಡಲು ಮುಂದಾಗಿದ್ದಕ್ಕೆ ಷೂ ಲೇಸ್‌ ಬಿಗಿದು ಆಕೆಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಆಕೆಯ ಮೊಬೈಲ್‌ ಮತ್ತು ಪರ್ಸ್‌ ಸ್ಥಳದಲ್ಲಿ ಪತ್ತೆಯಾಗಿದೆ. ಯುವತಿ ಇಲ್ಲಿಗೆ ಬರುತ್ತಿರುವ ಬಗ್ಗೆ ಪೋಷಕರಿಗೆ ತಿಳಿಸಿರಲಿಲ್ಲ. ಇತ್ತೀಚೆಗೆ ಇಬ್ಬರೂ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ