ಆ್ಯಪ್ನಗರ

FAKE ALERT: ಅಮೃತಸರ - ಜಲಂಧರ್ ರೈಲು ಚಾಲಕ ಆತ್ಮಹತ್ಯೆ ಸುದ್ದಿ ಸುಳ್ಳು

ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಹಲವೆಡೆ ಈ ಫೋಟೋ ಹರಿದಾಡುತ್ತಿದ್ದು, ಈ ಸುದ್ದಿಯನ್ನು ಮೊದಲು ಹರಿಯಬಿಟ್ಟವನು ಟ್ವೀಟನ್ನು ಡಿಲಿಟ್ ಮಾಡಿದ್ದಾನೆ.

TIMESOFINDIA.COM 23 Oct 2018, 11:46 am
ವ್ಯಕ್ತಿಯೊಬ್ಬ ಸೇತುವೆಯೊಂದಕ್ಕೆ ನೇಣು ಬಿಗಿದುಕೊಂಡು ನೇತಾಡುತ್ತಿರುವ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಆ ವ್ಯಕ್ತಿ ಅಮೃತಸರ ದುರಂತದ ರೈಲು ಚಾಲಕನ ಫೋಟೋ ಎಂಬಂತೆ ಬಿಂಬಿಸಲಾಗಿದೆ.
Vijaya Karnataka Web Fake


ಟ್ವಿಟರ್, ಫೇಸ್‌ಬುಕ್ ಸೇರಿದಂತೆ ಹಲವೆಡೆ ಈ ಫೋಟೋ ಹರಿದಾಡುತ್ತಿದ್ದು, ಈ ಸುದ್ದಿಯನ್ನು ಮೊದಲು ಹರಿಯಬಿಟ್ಟವನು ಟ್ವೀಟನ್ನು ಡಿಲಿಟ್ ಮಾಡಿದ್ದಾನೆ.

ಮನುಷ್ಯನೊಬ್ಬ ನೇಣು ಹಾಕಿಕೊಂಡು ತೂಗುತ್ತಿರುವ ವಿವಿಧ ಕೋನಗಳ ಚಿತ್ರಗಳೊಂದಿಗೆ, ದುರಂತದ ನಡೆದ ದಿನಗಳ ಘಟನೆಗಳ ಅನುಕ್ರಮವನ್ನು ವಿವರಿಸುತ್ತ ಚಾಲಕ ಅರವಿಂದ್ ಕುಮಾರ್ ನೀಡಿರುವ ಹೇಳಿಕಾ ಪತ್ರವನ್ನು ಡೆತ್ ನೋಟ್ ಎಂಬಂತೆ ಬಿಂಬಿಸಿ ಹರಿಯಬಿಡಲಾಗಿದೆ.

ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಪಿಂಕ್ ಟಿ ಶರ್ಟ್ ಹಾಕಿರುವ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡಿದ್ದಾನೆ. ಆ ಸ್ಥಳದಲ್ಲಿ ಪೊಲೀಸರು ಸಹ ಕಾಣಿಸುತ್ತಿದ್ದಾರೆ.

ರೈಲು ಚಾಲಕನೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬಂತೆ ಬಿಂಬಿಸಿರುವುದರ ಜತೆಗೆ ದುರಂತಕ್ಕೆ ರಾಜಕಾರಣಿಗಳನ್ನು ದೂಷಿಯಲಾಗಿದೆ.

ಸತ್ಯವೇನು?


ವಾಸ್ತವ ಸತ್ಯವೇನೆಂದರೆ ರೈಲು ಚಾಲಕ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ ಸದ್ಯಕ್ಕೆ ಪಂಜಾಬ್ ರೈಲ್ವೇಸ್ ಕಸ್ಟಡಿಯಲ್ಲಿದ್ದು ತನಿಖೆಗೊಳಪಟ್ಟಿದ್ದಾನೆ. ಟೈಮ್ಸ್ ಆಫ್ ಇಂಡಿಯಾದ Fact Check ತಂಡ ಇದನ್ನು ದೃಢೀಕರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ