ಆ್ಯಪ್ನಗರ

ಫಸಲು ಮಾರಲಾಗದೆ ಮಾರುಕಟ್ಟೆಯಲ್ಲೇ ರೈತ ಸಾವು

ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯ ಲಟೇರಿಯ ಕೃಷಿ ಉತ್ಪನ್ನ ಮಂಡಿಯಲ್ಲಿ ತಾನು ಬೆಳೆದ ಧಾನ್ಯವನ್ನು ಮಾರಲು ನಾಲ್ಕು ದಿನ ಸರತಿ ಸಾಲಿನಲ್ಲಿ ಕಾದಿದ್ದ ರೈತರೊಬ್ಬರು ಬಿಸಿಲ ತಾಪ ತಾಳಲಾರದೇ ಅಲ್ಲಿಯೇ ಕುಸಿದು ಮೃತಪಟ್ಟಿದ್ದಾರೆ.

Vijaya Karnataka 20 May 2018, 9:23 am
ವಿದಿಶಾ: ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯ ಲಟೇರಿಯ ಕೃಷಿ ಉತ್ಪನ್ನ ಮಂಡಿಯಲ್ಲಿ ತಾನು ಬೆಳೆದ ಧಾನ್ಯವನ್ನು ಮಾರಲು ನಾಲ್ಕು ದಿನ ಸರತಿ ಸಾಲಿನಲ್ಲಿ ಕಾದಿದ್ದ ರೈತರೊಬ್ಬರು ಬಿಸಿಲ ತಾಪ ತಾಳಲಾರದೇ ಅಲ್ಲಿಯೇ ಕುಸಿದು ಮೃತಪಟ್ಟಿದ್ದಾರೆ.
Vijaya Karnataka Web Death


ವಿದಿಶಾ ಜಿಲ್ಲೆಯ ಬಿಜುಖೇದಿ ಗ್ರಾಮದ ನಿವಾಸಿ, 65 ವರ್ಷದ ಮೂಲ್‌ಚಂದ್‌ ಮೈನಾ ಮೃತರು. ನಾಲ್ಕು ದಿನಗಳಿಂದ ಉರಿ ಬಿಸಿಲಿನ ನಡುವೆಯೇ ಸಾಲಿನಲ್ಲಿ ನಿಂತು ಕಾಯುತ್ತಿದ್ದರೂ ಇವರಿಗೆ ತಮ್ಮ ಬೆಳೆಯನ್ನು ತೂಕಕ್ಕೆ ಹಾಕಲು ಅವಕಾಶ ಸಿಕ್ಕಿರಲಿಲ್ಲ. ಸಮಯ ಮುಗಿಯುತ್ತಿದ್ದಂತೆ ಮಂಡಿಯ ಬಾಗಿಲು ಮುಚ್ಚಲಾಗುತ್ತಿತ್ತು. ಬಿರು ಬಿಸಿಲಿನಲ್ಲಿ ನಿಂತು ಕಾದು ಕಾದು ತೀವ್ರ ಅಸ್ವಸ್ಥಗೊಂಡು ಮೂಲ್‌ಚಂದ್‌ ಮೃತಪಟ್ಟಿದ್ದಾರೆ.

ರೈತನ ಸಾವಿನಿಂದ ರೊಚ್ಚಿಗೆದ್ದ ಕೃಷಿಕರು, ಮಂಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ತಹಸೀಲ್ದಾರ್‌ ಅಶೋಕ್‌ ಮಂಜ್ಹಿ, ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ