ಆ್ಯಪ್ನಗರ

Farmers protest; ದಿಲ್ಲಿಯ ಮೆಟ್ರೋ ನಿಲ್ದಾಣಗಳ ಎಲ್ಲ ಗೇಟ್‌ಗಳು ಬಂದ್‌, ಟ್ರಾಫಿಕ್‌ ಜಾಮ್

ಶುಕ್ರವಾರ ಬೆಳಗ್ಗೆಯಿಂದಲೇ ಕೃಷಿಕರು ದಿಲ್ಲಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಹೊಸದಿಲ್ಲಿಯಲ್ಲಿ ಖಾಕಿ ಕೋಟೆಯನ್ನು ಕಟ್ಟಿದ್ದಾರೆ. ಗಡಿ ಭಾಗದಿಂದ ಯಾರೂ ಒಳನುಸುಳುದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

Vijaya Karnataka Web 27 Nov 2020, 12:52 pm
ಹೊಸದಿಲ್ಲಿ: ಕೇಂದ್ರ ಸರಕಾರದ ನೂತನ ಕೃಷಿ ಕಾನೂನು ವಿರೋಧಿಸಿ ರೈತರು ರಾಜಧಾನಿ ಹೊಸದಿಲ್ಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
Vijaya Karnataka Web ಟ್ರಾಫಿಕ್‌ ಜಾಮ್
ಟ್ರಾಫಿಕ್‌ ಜಾಮ್


ಶುಕ್ರವಾರ ಬೆಳಗ್ಗೆಯಿಂದಲೇ ಕೃಷಿಕರು ದಿಲ್ಲಿಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಹೊಸದಿಲ್ಲಿಯಲ್ಲಿ ಖಾಕಿ ಕೋಟೆಯನ್ನು ಕಟ್ಟಿದ್ದಾರೆ. ಗಡಿ ಭಾಗದಿಂದ ಯಾರೂ ಒಳನುಸುಳುದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ.

ಪಂಜಾಬ್‌, ಹರಿಯಾಣ ರೈತರು ರಾಜಧಾನಿಗೆ ಲಗ್ಗೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಡಿಯಲ್ಲಿ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲಾಗಿದೆ.

ರಾಜಧಾನಿಗೆ ಅನ್ನದಾತರ ಮುತ್ತಿಗೆ; ಕೆಂಪುಕೋಟೆ ನಗರದ ಖಾಕಿ ಕೋಟೆಗೆ ಕೃಷಿಕರ ಲಗ್ಗೆ

ಮೆಟ್ರೋ ರೈಲುಗಳ ಮೂಲಕವೂ ರೈತರು ರಾಜಧಾನಿಗೆ ಆಗಮಿಸಬಹುದು ಎಂದು ಹಸಿರು ಮಾರ್ಗದ ಎಲ್ಲ ಮೆಟ್ರೋ ನಿಲ್ದಾಣಗಳ ಎಂಟ್ರಿ, ಎಕ್ಸಿಟ್‌ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಹಸಿಉ ಮಾರ್ಗದಲ್ಲಿ ಬಹುತೇಕ ಮೆಟ್ರೋ ರೈಲು ಸಂಚಾರ ಸ್ಥಗಿತಗೊಂಡಿದೆ.

ದಿಲ್ಲಿ-ಗುರುಗ್ರಾಮ್‌ ಗಡಿ ಭಾಗದಲ್ಲಿ ರೈತರ ಪ್ರತಿಭಟನೆ ಜೋರಾಗಿ ಸಾಗುತ್ತಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿದೆ. ಕಿಲೋ ಮೀಟರ್‌ ಉದ್ದಕ್ಕೂ ವಾಹನಗಳು ನಿಂತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ