ಆ್ಯಪ್ನಗರ

ಅತ್ಯಾಚಾರಿ ಬಾಬಾ ವಿರುದ್ಧ ತೊಡೆ ತಟ್ಟಿದ 9,000 ಗ್ರಾಮಸ್ಥರು

ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ನ ಬೆಂಬಲಿಗರು ಪಂಚಕುಲದಲ್ಲಿ ನಡೆಸುತ್ತಿರುವ ದಾಂದಲೆಯನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಿರ್ಸಾ ಗ್ರಾಮದ ಗ್ರಾಮಸ್ಥರು ಸಹಾಯಕ್ಕೆ ಬಂದಿದ್ದಾರೆ. ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ನ ಬೆಂಬಲಿಗರು ಪಂಚಕುಲದಲ್ಲಿ ನಡೆಸುತ್ತಿರುವ ದಾಂದಲೆಯನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಿರ್ಸಾ ಗ್ರಾಮದ ಗ್ರಾಮಸ್ಥರು ಸಹಾಯಕ್ಕೆ ಬಂದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 28 Aug 2017, 6:56 pm
ಸಿರ್ಸಾ: ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ದೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್‌ಮೀತ್‌ ರಾಮ್‌ ರಹೀಮ್‌ ಸಿಂಗ್‌ನ ಬೆಂಬಲಿಗರು ಪಂಚಕುಲದಲ್ಲಿ ನಡೆಸುತ್ತಿರುವ ದಾಂದಲೆಯನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಿರ್ಸಾ ಗ್ರಾಮದ ಗ್ರಾಮಸ್ಥರು ಸಹಾಯಕ್ಕೆ ಬಂದಿದ್ದಾರೆ.
Vijaya Karnataka Web fearless sirsa villagers ready to fight violent dera followers with bricks iron rods stones
ಅತ್ಯಾಚಾರಿ ಬಾಬಾ ವಿರುದ್ಧ ತೊಡೆ ತಟ್ಟಿದ 9,000 ಗ್ರಾಮಸ್ಥರು


ಗುರ್‌ಮೀತ್‌ ಸಿಂಗ್‌ಗೆ ಸೋಮವಾರದಂದು ಸಿಬಿಐ ನ್ಯಾಯಾಲಯ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಆದರೆ ಈ ಆದೇಶದಿಂದ ಬೆಂಬಲಿಗರು ದೇರಾ ಸಚ್ಚಾ ಸೌದಾ ಮುಖ್ಯ ಕಚೇರಿಗಳಲ್ಲಿ ದಾಂದಲೆ ನಡೆಸುವ ಸಾಧ್ಯತೆ ಹೆಚ್ಚಿದೆ. ಆದರೆ ಇವರನ್ನು ಎದರಿಸಲು ಪೊಲೀಸರಿಂದ ಮೊದಲೇ ಶಾಹ್‌ಪುರ್‌ ಬೇಗ್‌ನ ಗ್ರಾಮಸ್ಥರು ಕೋಲು, ಕಲ್ಲ, ಕಬ್ಬಿಣದ ಸಲಾಖೆ ಹಿಡಿದು ತಯಾರಾಗಿ ನಿಂತಿದ್ದಾರೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಆಗಸ್ಟ್‌ 25ರಂದು ಬಾಬಾ ವಿರುದ್ಧ ತೀರ್ಪು ನೀಡಿದ ಬಳಿಕ ಹರಿಯಾಣ ಹಾಗೂ ಪಂಜಾಬ್‌ನಲ್ಲಿ ನಡೆದ ಗಲಭೆಯಲ್ಲಿ 38 ಮಂದಿ ಮೃತಪಟ್ಟು ನೂರಾರು ಜನ ಗಾಯಗೊಂಡಿದ್ದರು.

ಇದೀಗ ಈ ಗೂಂಡಾ ಫಾಲೋವರ್ಸ್‌ಗಳ ವಿರುದ್ಧ ದೇರಾ ಮುಖ್ಯ ಕಚೇರಿಯಿಂದ ಸುಮಾರು 500 ಮೀ. ದೂರದಲ್ಲಿರುವ ಬೇಗು ಗ್ರಾಮಸ್ಥರು ಸಿಡಿದೆದ್ದಿದ್ದಾರೆ. 9,000 ಜನಸಂಖ್ಯೆಯಿರುವ ಈ ಗ್ರಾಮ, ಗುರ್ಮೀತ್‌ ವಿರುದ್ಧವೇ ನಿಂತಿದೆ. ಅಲ್ಲದೇ ಕಳೆದ ಶುಕ್ರವಾರ ನಡೆದ ಗಲಭೆಯಲ್ಲಿ ಈ ಗ್ರಾಮಸ್ಥರ ಮೇಲೂ ಹಲ್ಲೆ ನಡೆಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಗ್ರಾಮಸ್ಥರು ಗಲಭೆ ವೇಳೆ ಬಳಕೆ ಮಾಡಿರುವ ಕಬ್ಬಿಣದ ಸರಕುಗಳು, ಕಲ್ಲು, ಕೋಲುಗಳನ್ನು ಸಂಗ್ರಹಿಸಿರಿಸಿಕೊಂಡಿದ್ದರು.

ಒಂದು ವೇಳೆ ಮತ್ತೆ ಬಾಬಾ ಬೆಂಬಲಿಗರು ಗಲಭೆ ನಡೆಸಿದರೆ ಅವರನ್ನು ಎದುರಿಸಲು ನಾವು ಸಂಪೂರ್ಣವಾಗಿ ಸಿದ್ಧವಾಗಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

fearless sirsa villagers ready to fight violent dera followers with bricks, iron rods & stones!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ