ಆ್ಯಪ್ನಗರ

ವೈವಾಹಿಕ ಬಿಕ್ಕಟ್ಟಿಗೆ ನಿಂದನೆ: ಅಜ್ಜಿಯ ಸಾಯಿಸಿದ ಮೊಮ್ಮಗಳು

ವೈವಾಹಿಕ ಬಿಕ್ಕಟ್ಟಿನ ವಿಚಾರದಲ್ಲಿ ನಿಂದಿಸುತ್ತಿದ್ದ ಅಜ್ಜಿಯನ್ನು ಮೊಮ್ಮಗಳು ಒನಕೆಯಿಂದ ಥಳಿಸಿ ಸಾಯಿಸಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಪ್ರಕರಣ ಅಲಿಘಡದ ಇಗ್ಲಾಸ್‌ ಪ್ರದೇಶದಲ್ಲಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 3 Jan 2017, 2:25 pm
ಆಗ್ರಾ: ವೈವಾಹಿಕ ಬಿಕ್ಕಟ್ಟಿನ ವಿಚಾರದಲ್ಲಿ ಸದಾ ನಿಂದಿಸುತ್ತಿದ್ದ ಅಜ್ಜಿಯನ್ನು ಮೊಮ್ಮಗಳು ಒನಕೆಯಿಂದ ಥಳಿಸಿ ಸಾಯಿಸಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುವ ಪ್ರಕರಣ ಅಲಿಘಡದ ಇಗ್ಲಾಸ್‌ ಪ್ರದೇಶದಲ್ಲಿ ನಡೆದಿದೆ.
Vijaya Karnataka Web fed up with taunts woman clubs grandma to death in up
ವೈವಾಹಿಕ ಬಿಕ್ಕಟ್ಟಿಗೆ ನಿಂದನೆ: ಅಜ್ಜಿಯ ಸಾಯಿಸಿದ ಮೊಮ್ಮಗಳು


ಆರೋಪಿ ಮಹಿಳೆ ಮಮತಾ ಅಜ್ಜಿಯನ್ನು ಸಾಯಿಸಿದ ಬಳಿಕ ಕತ್ತು ಸೀಳಿಕೊಂಡು ಸಾಯಲು ಯತ್ನಿಸಿದ್ದು, ನಂತರ ಚಲಿಸುತ್ತಿದ್ದ ಟ್ರಕ್‌ ಎದುರು ಜಿಗಿದು ಸಾಯಲು ಮುಂದಾದರೂ ಫಲಕಾರಿಯಾಗದೆ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದಾರೆ.

ಮಮತಾ ಅವರು ಮೂರು ವರ್ಷದ ಹಿಂದೆ ಮದುವೆಯಾಗಿದ್ದು, ಅಲಿಘಡ ನಗರದಲ್ಲಿರುವ ಗಂಡನ ಮನೆ ತೊರೆದು ಹತ್ತು ದಿನಗಳಿಂದ ಅಜ್ಜಿ ಸಂತಾರಿ ದೇವಿ ಜತೆ ವಾಸವಿದ್ದರು. ಆಕೆಯ ಪತಿ ವಿನೀತ್‌ ಜಲಂಧರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಗಂಡನ ಮನೆಯವರು ಜಲಂಧರ್‌ಗೆ ಹೋಗಿ ಗಂಡನನ್ನು ಭೇಟಿಯಾಗಲು ಬಿಡುತ್ತಿಲ್ಲ. ಗಂಡ ಕೌಟುಂಬಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಮಮತಾ ಆರೋಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಮತಾ ಅವರ ತಂದೆ ಮತ್ತು ಇತರ ಸಂಬಂಧಿಕರು ಬಲ್ಲಾಭ್‌ಗಢದಲ್ಲಿ ವಾಸವಿದ್ದು, ಅಜ್ಜಿ ಮತ್ತು ಮಮತಾ ಮಧ್ಯೆ ವೈವಾಹಿಕ ಬಿಕ್ಕಟ್ಟು ವಿಚಾರದಲ್ಲಿ ಜಗಳ ನಡೆಯುತ್ತಲೇ ಇತ್ತು. ಸೋಮವಾರ ಬೆಳಗ್ಗೆಯೂ ಇದೇ ವಿಚಾರಕ್ಕೆ ಜಗಳವಾಗಿ ಮಮತಾ ಅಡುಗೆ ಮನೆಯಲ್ಲಿದ್ದ ಒನಕೆ ತೆಗೆದುಕೊಂಡು ಅಜ್ಜಿಯ ತಲೆಗೆ ಹೊಡೆದು ಸಾಯಿಸಿದ್ದರು.

Woman clubs grandma to death in UP: Fed up with the frequent taunts of her grandmother about her arital problems, a woman allegedly clubbed the 70-year-old to death with a pestle.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ