ಆ್ಯಪ್ನಗರ

ಬಡವನ ಗುಡಿಸಲೊಳಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದ ಚಿರತೆ..!

ಕಾಡು ಪ್ರಾಣಿಗಳು ನಾಡಿಗೆ ಬರಲು ಕಾರಣ ಮನುಷ್ಯನೇ ಆಗಿದ್ದಾನೆ. ಅರಣ್ಯ ನಾಶ ಮಾಡಿ ಕಾಡುಪ್ರಾಣಿಗಳಿಗೆ ಉಳಿದುಕೊಳ್ಳದಂತೆ ಮಾಡಿದ ಪರಿಣಾಮ ಅವುಗಳು ನಾಡಿಗೆ ಬರುವಂತಾಗಿದ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

Hindustan Times 19 Aug 2020, 5:52 pm
ಮಹಾರಾಷ್ಟ್ರ: ಪ್ರಕೃತಿಯಲ್ಲಿ ಮನುಷ್ಯನ ಹಸ್ತಕ್ಷೇಪ ಹೆಚ್ಚಾದಂತೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಮನುಷ್ಯನಿಗೆ ತಿರುಗೇಟು ನೀಡುತ್ತಲೇ ಇರುತ್ತದೆ. ತನ್ನ ಇರುವಿಕೆಯನ್ನು ತೋರಿಸಿ ಮಾನವನ ದುರಾಸೆಯ ಅತಿರೇಕವನ್ನು ತಿಳಿಸುತ್ತಲೇ ಇರುತ್ತದೆ.
Vijaya Karnataka Web Leopard


ಕಾಡು ಕಡಿದು ಅರಣ್ಯ ನಾಶ ಮಾಡಿದ ಮಾನವ ಅಲ್ಲಿ ಬೃಹತ್ ಕಟ್ಟಡಗಳನ್ನು ಕಟ್ಟಿ ಪ್ರಕೃತಿಗೆ ಸವಾಲು ಹಾಕಿದ. ಪರಿಣಾಮ ಪ್ರಾಣಿ ಪಕ್ಷಿಗಳು ಕೂಡ ಕಾಡಿನಿಂದ ನಾಡಿಗೆ ವಲಸೆ ಬರುವಂತಾಗಿದೆ. ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆ.

ಹೆಚ್ಚುತ್ತಿರುವ ಮಾಲಿನ್ಯ, ಭ್ರಷ್ಟಾಚಾರದಿಂದ ಬೇಸರ..! ಮೋದಿಗೆ 18 ಪುಟದ ಪತ್ರ ಬರೆದು ಜೀವಬಿಟ್ಟ ಬಾಲಕಿ

ಮಹಾರಾಷ್ಟ್ರದ ನಾಸಿಕ್‌ನ ಇಗತ್‌ಪುರಿ ಪ್ರದೇಶದಲ್ಲಿ ಬಡವನೊಬ್ಬ ತನ್ನ ಗುಡಿಸಲಿನಲ್ಲಿ ಹೆಂಡತಿ ಮಕ್ಕಳೊಂದಿಗೆ ಕಳೆದ ಹಲವು ವರ್ಷಗಳಿಂದ ವಾಸ ಮಾಡ್ತಿದ್ದರು. ಇತ್ತೀಚೆಗೆ ಅವರ ಗುಡಿಸಲಿಗೆ ಏಕಾಏಕಿ ಬಂದ ಚಿರತೆಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಕಾಡಿನಿಂದ ನಾಡಿಗೆ ಆಹಾರ ಅರಸಿ ಬಂದ ಚಿರತೆ ಪ್ರಸವಕ್ಕಾಗಿ ಸುರಕ್ಷಿತ ಜಗ ಹುಡುಕಿಕೊಂಡು ಬಂದು ಇವರ ಗುಡಿಸಲು ಸೇರಿದೆ.

ಒಂದೇ ಸೂರಿನಡಿ ಕಾರ್ಯ ನಿರ್ವಹಿಸಲಿವೆ ಸರಕಾರಿ ಸಂಸ್ಥೆಗಳ ಪ್ರಾದೇಶಿಕ ಕಚೇರಿ!

ನಂತರ ಚಿರತೆ ಗುಡಿಸಲಿನಲ್ಲಿ ಮರಿಗಳಿಗೆ ಜನ್ಮ ನೀಡಿರುವ ಮಾಹಿತಿ ಅರಣ್ಯಾಧಿಕಾರಿಗಳಿಗೆ ಸಿಕ್ಕಿದ್ದು, ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ತಾಯಿ ಚಿರತೆ ಚಿರತೆ ಹಾಗು ಮರಿಗಳು ಆರೋಗ್ಯದಿಂದಿದ್ದು, ಸೂಕ್ತ ಸಮಯ ನೋಡಿಕೊಂಡು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಅವುಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸುತ್ತಿದ್ದೇವೆ ಎಂದು ಅರಣ್ಯಾಧಿಕಾರಿ ಗಣೇಶ್ ರಾವ್ ಜೋಲ್ ತಿಳಿಸಿದ್ದಾರೆ.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ವಾಯುಸೇನೆ: ಗಡಿಗೆ ತೇಜಸ್ ರವಾನೆ ಹಿಂದಿದೆ ಭಾರೀ

ಗುಡಿಸಲಿನಲ್ಲಿ ಮರಿಗಳೊಂದಿಗೆ ಇರುವ ಚಿರತೆಯ ವಿಡಿಯೋ ಇದೀಗ ವೈರಲ್ ಆಗಿದ್ದು, ಮರಿಗಳೆಲ್ಲವೂ ಬೆಕ್ಕಿನಂತೆಯೇ ಮಿಯಾಂವ್ ಎಂದು ಕೂಗುವುದು ಕೇಳಿಸುತ್ತಿದೆ. ಇದರ ಜೊತೆಗೆ ಚಿರತೆಗಳು ನಾಡಿಗೆ ಬರಲು ಕಾರಣ ಮನುಷ್ಯನೇ ಆಗಿದ್ದಾನೆ. ಅರಣ್ಯ ನಾಶ ಮಾಡಿ ಕಾಡುಪ್ರಾಣಿಗಳಿಗೆ ಉಳಿದುಕೊಳ್ಳದಂತೆ ಮಾಡಿದ ಪರಿಣಾಮ ಅವುಗಳು ನಾಡಿಗೆ ಬರುವಂತಾಗಿದ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ