ಆ್ಯಪ್ನಗರ

110 ಯುದ್ಧ ವಿಮಾನಗಳ ಖರೀದಿಗೆ ಫೈನಲ್‌ ಟೆಂಡರ್‌

2019ರ ಮಧ್ಯಾವಧಿ ವೇಳೆಗೆ ಭಾರತೀಯ ವಾಯುಪಡೆಗೆ 110 ಯುದ್ಧ ವಿಮಾನಗಳನ್ನು ಪೂರೈಸುವ ಸಂಬಂಧ ಸದ್ಯದ್ಲಲೇ ಅಂತಿಮ ಟೆಂಡರ್‌ ಕರೆಯುವ ಸಾಧ್ಯತೆಯಿದೆ...

Vijaya Karnataka 2 Aug 2018, 10:06 am
ಹೊಸದಿಲ್ಲಿ: 2019ರ ಮಧ್ಯಾವಧಿ ವೇಳೆಗೆ ಭಾರತೀಯ ವಾಯುಪಡೆಗೆ 110 ಯುದ್ಧ ವಿಮಾನಗಳನ್ನು ಪೂರೈಸುವ ಸಂಬಂಧ ಸದ್ಯದ್ಲಲೇ ಅಂತಿಮ ಟೆಂಡರ್‌ ಕರೆಯುವ ಸಾಧ್ಯತೆಯಿದೆ.
Vijaya Karnataka Web Air


ಜಾಗತಿಕ ಮಟ್ಟದಲ್ಲಿ ಯುದ್ಧ ವಿಮಾನಗಳನ್ನು ಪೂರೈಸುವ ಆರು ಪ್ರಮುಖ ಸಂಸ್ಥೆಗಳು ಸ್ಪರ್ಧೆಯಲ್ಲಿದ್ದು, ಈಗಾಗಲೇ ಬೆಲೆ ಪ್ರಸ್ತಾಪಗಳನ್ನು ಕಳುಹಿಸಿವೆ ಎಂದು ಮೂಲಗಳು ತಿಳಿಸಿವೆ.

ಬೋಯಿಂಗ್‌, ಲಾಕ್‌ಹೀಡ್‌ ಮಾರ್ಟಿನ್‌, ಡಸ್ಸಾಲ್ಟ್‌ ಆವಿಯೇಷನ್‌, ಯೂರೋಫೈಟರ್‌, ಸಾಬ್‌ ಮತ್ತು ಯುನೈಟೆಡ್‌ ಏರ್‌ಕ್ರಾಫ್ಟ್‌ ಕಾರ್ಪೊರೇಷನ್‌ ಸಂಸ್ಥೆಗಳು ಬಹುಕೋಟಿ ಮೌಲ್ಯದ ಮೆಗಾ ಒಪ್ಪಂದಕ್ಕೆ ಆಸಕ್ತಿ ತೋರಿವೆ.

''ಈ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಭಾರತಿಯ ಕಂಪನಿಯ ಜತೆ ಸಹಭಾಗಿತ್ವದಲ್ಲಿ ತಯಾರಿಸಲಾಗುವುದು. ವಿವಿಧ ಕಂಪನಿಗಳು ಸಲ್ಲಿಸಿರುವ ಪ್ರಸ್ತಾಪಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಬಳಿಕ ಗುಣಮಟ್ಟದ ಅಗತ್ಯಗಳ ಬಗ್ಗೆ ಬೇಡಿಕೆ ಮುಂದಿಡಲಾಗುವುದು,'' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ ವಿಮಾನಗಳು?

ಅಮೆರಿಕದ ಬೋಯಿಂಗ್‌ ಸಂಸ್ಥೆ ಎಫ್‌/ಎ-18ಇ/ಎಫ್‌ ಸೂಪರ್‌ ಹಾರ್ನೆಟ್‌ ವಿಮಾನಗಳನ್ನು ಒದಗಿಸಿದರೆ; ಲಾಕ್‌ಹೀಡ್‌ ಮಾರ್ಟಿನ್‌ ಎಫ್‌-16 ವಿಮಾನಗಳನ್ನು ಉತ್ಪಾದಿಸುತ್ತದೆ. ಡಸ್ಸಾಲ್ಟ್‌ ಆವಿಯೇಷನ್‌ ರಫೇಲ್‌ ಯುದ್ಧ ವಿಮಾನಗಳನ್ನು; ಯೂರೋಫೈಟರ್‌-ಟೈಫೂನ್‌ ವಿಮಾನಗಳನ್ನು ಹಾಗೂ ಸಾಬ್‌ ಸಂಸ್ಥೆಯು ಗ್ರಿಪೆನ್‌ ಯುದ್ಧ ವಿಮಾನಗಳನ್ನು ಪೂರೈಸುವ ಪ್ರಸ್ತಾಪ ಸಲ್ಲಿಸಿದೆ. ರಷ್ಯಾದ ಯುನೈಟಿಡೆಡ್‌ ಏರ್‌ಕ್ರಾಫ್ಟ್‌ ಕಾರ್ಪೊರೇಷನ್‌ 'ಮಿಗ್‌-35' ವಿಮಾನಗಳನ್ನು ಪೂರೈಸುವ ಪ್ರಸ್ತಾಪ ಮುಂದಿಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ