ಆ್ಯಪ್ನಗರ

ಕೇರಳ ಪ್ರವಾಹ ನಿಧಿಗೆ ದೇಣಿಗೆ ನೀಡಿದ 1ನೇ ತರಗತಿ ಬಾಲಕ

ಕೇರಳದಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಪ್ರವಾಹದ ನಂತರ ಪರಿಹಾರ ಕಾರ್ಯ ಮುಂದುವರಿದಿದ್ದು, ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ಹಲವು ಮಂದಿ ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಆದರೆ ಇವರ ಮಧ್ಯೆ ಒಂದನೇ ತರಗತಿ ಬಾಲಕನೋರ್ವನ ಕಾರ್ಯ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Samayam Malayalam 14 Aug 2018, 6:06 pm
ಕೋಳಿಕ್ಕೋಡ್: ಕೇರಳದಲ್ಲಿ ಮಳೆ ಕಡಿಮೆಯಾಗಿದೆ. ಆದರೆ ಪ್ರವಾಹದ ನಂತರ ಪರಿಹಾರ ಕಾರ್ಯ ಮುಂದುವರಿದಿದ್ದು, ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ಹಲವು ಮಂದಿ ಮುಖ್ಯಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ. ಆದರೆ ಇವರ ಮಧ್ಯೆ ಒಂದನೇ ತರಗತಿ ಬಾಲಕನೋರ್ವನ ಕಾರ್ಯ ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Vijaya Karnataka Web Kerala kid


ಕೋಳಿಕ್ಕೋಡ್‌ನ ಮುಕ್ಕಂ ಮನಚೇರಿ ಸರಕಾರಿ ಪ್ರಾಥಮಿಕ ಶಾಲೆಯ 1ನೇ ತರಗತಿ ವಿದ್ಯಾರ್ಥಿ ಆವಾಸ್ (ಆಚು) ಸ್ಟಡಿ ಟೇಬಲ್ ಒಂದನ್ನು ಕೊಂಡುಕೊಳ್ಳುವ ಉದ್ದೇಶದಿಂದ ಹಣ ಸಂಗ್ರಹಿಸಿ ಉಳಿತಾಯ ಮಾಡಿದ್ದ. ಅದನ್ನು ಆತ ಒಡೆದು ನೋಡಿದಾಗ ಅದರಲ್ಲಿ ಸಾವಿರಕ್ಕೂ ಹೆಚ್ಚು ರೂ. ಹಣ ಇದ್ದಿರುವುದು ಗಮನಕ್ಕೆ ಬಂದಿದೆ. ಹಣವನ್ನು ನೋಡಿದ ಬಳಿಕ ಆವಾಸ್ ತನ್ನ ನಿರ್ಧಾರ ಬದಲಿಸಿದ್ದಾನೆ. ಅದರಲ್ಲಿ ಸ್ಟಡಿ ಟೇಬಲ್ ಕೊಂಡುಕೊಳ್ಳುವ ಬದಲು, ಅದನ್ನು ಕೇರಳ ಸಿಎಂ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾನೆ.

ಪುಟ್ಟ ಬಾಲಕನ ಈ ಕಾರ್ಯಕ್ಕೆ ಆತನ ಮನೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತನ ತಂದೆ ಸಾಲಿಶ್ ಈ ವಿಚಾರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಸಾವಿರಾರು ಮಂದಿ ಬಾಲಕನಿಗೆ ಶಹಭಾಸ್ ಎಂದಿದ್ದಾರೆ.
ಮೂಲ ವರದಿ: ಸಮಯಂ ಮಲಯಾಳಂ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ