ಆ್ಯಪ್ನಗರ

ನೌಕಾ ಸೇನೆಗೆ ಮಹಿಳಾ ಪೈಲಟ್ಸ್ ನೇಮಕ

ಇಲ್ಲಿಯವರೆಗೂ ಪುರುಷ್ಯರ ಭದ್ರಕೋಟೆ ಎಂದು ಪರಿಗಣಿಸಲ್ಪಿಟ್ಟಿದ್ದ ನೌಕಾ ಶಸ್ತ್ರಾಸ್ತ್ರ ಪರಿಶೀಲನೆ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಮಣಿಗಳು ಲಗ್ಗೆ ಇಡುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

Vijaya Karnataka Web 23 Nov 2017, 1:04 pm
ಕಣ್ಣೂರು: ಇಲ್ಲಿಯವರೆಗೂ ಪುರುಷರ ಪ್ರಾಬಲ್ಯ ಹೊಂದಿದ್ದ ನೌಕಾ ಶಸ್ತ್ರಾಸ್ತ್ರ ಪರಿಶೀಲನಾ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಮಣಿಗಳು ಲಗ್ಗೆ ಇಟ್ಟಿದ್ದು, ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
Vijaya Karnataka Web first woman pilot 3 woman officers pass out from naval academy
ನೌಕಾ ಸೇನೆಗೆ ಮಹಿಳಾ ಪೈಲಟ್ಸ್ ನೇಮಕ


ಭಾರತೀಯ ನೌಕಾ ಸೇನೆಯ ಶಸ್ತ್ರಾಸ್ತ್ರ ಪರಿಶೀಲನೆ ವಿಭಾಗಕ್ಕೆ ಇದೇ ಮೊದಲ ಬಾರಿಗೆ ಮಹಿಳಾ ಪೈಲಟ್ ಹಾಗೂ ಅಧಿಕಾರಿಗಳನ್ನು ರಕ್ಷಣಾ ಇಲಾಖೆ ನೇಮಿಸಿದೆ.

ಕಣ್ಣೂರಿನ ಭಾರತೀಯ ನೌಕಾಪಡೆ ಅಕಾಡೆಮಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಈ ಮಹಿಳೆಯರು ಅಧಿಕಾರ ಸ್ವೀಕರಿಸಿದರು. ಇವರು ಭಾರತೀಯ ನೌಕಾ ಪಡೆಯ 328 ಕೆಡಿಟ್ಸ್, ಭಾರತೀಯ ಕೋಸ್ಟ್ ಗಾರ್ಡ್ ಹಾಗೂ ಟಾಂಜಾನಿಯಾ ಮತ್ತು ಮಾಲ್ಡೀವ್ಸ್‌ನಲ್ಲಿ ತರಬೇತು ಪಡೆದಿದ್ದಾರೆ.

'ಇದು ಎಲ್ಲರನ್ನೂ ಉತ್ತೇಜಿಸುವ ಅವಕಾಶ ಮಾತ್ರವಲ್ಲದೆ, ಮಹತ್ತರವಾದ ಹೊಣೆಯೂ ಹೌದು,' ಎಂದು ಮೊದಲ ಮಹಿಳಾ ಪೈಲಟ್ ಆಗಿರುವ ಉತ್ತರ ಪ್ರದೇಶದ ಬರೇಲಿ ನಿವಾಸಿ ಶುಭಾಂಗಿ ಸ್ವರೂಪ್ ಹೇಳಿದ್ದಾರೆ.

ಭಾರತೀಯ ನೌಕಾ ಸೇನೆಯ ಶಸ್ತ್ರಾಸ್ತ್ರ ಪರಿಶೀಲನೆ ವಿಭಾಗಕ್ಕೆ ಮಹಿಳಾ ಅಧಿಕಾರಿಗಳನ್ನು ನೇಮಿಸಿರುವುದು ಮಹಿಳೆಗೆ ಮನ್ನಣೆ ನೀಡಿದೆ ಎಂದು ಎನ್‌ಐಎಶಾಖೆಗೆ ಆಯ್ಕೆಯಾಗಿರುವ ಅಸ್ಥಾ ಸೆಗಲ್, ರೂಪಾ ಎ ಮತ್ತು ಸಕ್ತಿಮಯಾ ಎಸ್ ಸಹ ಅಭಿಪ್ರಾಯಪಟ್ಟದ್ದಾರೆ. ಭಾರತೀಯ ಸೇನೆ ಸೇರಲು ಸಾಕಷ್ಟು ಮಹಿಳೆಯರು ಆಸಕ್ತರಾಗಿದ್ದಾರೆ. ಈ ನಡೆ ಇತರರಿಗೂ ಸ್ಪೂರ್ತಿಯಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.

1991 ರಲ್ಲಿಯೇ ಮಹಿಳೆಯರನ್ನು ಭಾರತೀಯ ನೌಕಾಪಡೆ ನೇಮಿಸಿಕೊಳ್ಳಲು ಆರಂಭಿಸಿದೆ. ಈಗ ಮಹಿಳಾ ನೇಮಕಾತಿಯ ಪ್ರದೇಶವನ್ನು ವಿಸ್ತರಿಸಲಾಗಿದೆ ಎಂದು ನೌಕಾ ಸಿಬ್ಬಂದಿ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲನ್ಬಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ