ಆ್ಯಪ್ನಗರ

ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಭೂಕುಸಿತ: ವಾಹನಗಳಲ್ಲಿದ್ದ ಐವರು ಬಲಿ

ಜಮ್ಮು ಮತ್ತು ಕಾಶ್ಮೀರ ಕಿಶ್ತ್ವಾರ್‌ ಜಿಲ್ಲೆಯ ಕುಲ್ಲಿಗಡ್‌ನಲ್ಲಿ ಸೋಮವಾರ ಭೂಕುಸಿತ ಸಂಭವಿಸಿ, ದೊಡ್ಡ ಕಲ್ಲುಗಳು ಉರುಳಿ ವಾಹನಗಳಲ್ಲಿ ಸಾಗುತ್ತಿದ್ದ ಐವರು ಮೃತಪಟ್ಟಿದ್ದಾರೆ.

Vijaya Karnataka 21 Aug 2018, 10:44 am
ಕಿಶ್ತ್ವಾರ್‌: ಜಮ್ಮು ಮತ್ತು ಕಾಶ್ಮೀರ ಕಿಶ್ತ್ವಾರ್‌ ಜಿಲ್ಲೆಯ ಕುಲ್ಲಿಗಡ್‌ನಲ್ಲಿ ಸೋಮವಾರ ಭೂಕುಸಿತ ಸಂಭವಿಸಿ, ದೊಡ್ಡ ಕಲ್ಲುಗಳು ಉರುಳಿ ವಾಹನಗಳಲ್ಲಿ ಸಾಗುತ್ತಿದ್ದ ಐವರು ಮೃತಪಟ್ಟಿದ್ದಾರೆ.
Vijaya Karnataka Web Landslide in JK


ದೊಡ್ಡ ಕಲ್ಲುಗಳು ಮತ್ತು ಮಣ್ಣು ಜಾರಿ ಕೆಳಗೆ ಬಿದ್ದಾಗ ಒಂದು ಮಿನಿಬಸ್‌ ಮತ್ತು ಕಾರು ಸಿಕ್ಕಿಹಾಕಿಕೊಂಡಿದ್ದು, ನಾಲ್ವರು ಸ್ಥಳದಲ್ಲೇ ಮತ್ತೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರು. ಮೃತರು ದುರ್ಗಾದೇವಿ ದರ್ಶನಕ್ಕಾಗಿ ನಡೆಯುವ ವಾರ್ಷಿಕ 43 ದಿನಗಳ ಮಚೈಲ್‌ ಯಾತ್ರೆಯನ್ನು ಸೇರಿಕೊಳ್ಳುವುದಕ್ಕಾಗಿ ದೋಡಾ- ಕಿಶ್ತ್ವಾರ್‌ ರಸ್ತೆಯಲ್ಲಿ ಪದ್ದಾರ್‌ ಕಣಿವೆ ಕಡೆಗೆ ಸಾಗುತ್ತಿದ್ದರು. ಯಾತ್ರಿಕರೆಲ್ಲರೂ ಉಧಾಂಪುರ ಜಿಲ್ಲೆಗೆ ಸೇರಿದವರೆಂದು ತಿಳಿದುಬಂದಿದೆ. ಜುಲೈ 25ರಂದು ಆರಂಭಗೊಂಡ ಮಚೈಲ್‌ ಯಾತ್ರೆಯಲ್ಲಿ 1.5 ಲಕ್ಷ ಭಕ್ತರು ಪಾಲ್ಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ