ಆ್ಯಪ್ನಗರ

ನೆಲಬಾಂಬ್‌ ಸಿಡಿದು ಐವರು ಯೋಧರಿಗೆ ಗಾಯ

ಜಾರ್ಖಂಡ್‌ ರಾಜ್ಯದ ಧನಬಾದ್‌ ಜಿಲ್ಲೆಯಲ್ಲಿ ಸುಧಾರಿತ ಸೊಧೀಟಕ ಸಾಧನ ಸೊಧೀಟಿಸಿ, ಗಡಿ ಭದ್ರತಾ ಪಡೆಯ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.

Vijaya Karnataka Web 2 Apr 2016, 8:02 pm
ಧನಬಾದ್‌: ಜಾರ್ಖಂಡ್‌ ರಾಜ್ಯದ ಧನಬಾದ್‌ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಸ್ಫೋಟಿಸಿ, ಗಡಿ ಭದ್ರತಾ ಪಡೆಯ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ.
Vijaya Karnataka Web five soldiers injured
ನೆಲಬಾಂಬ್‌ ಸಿಡಿದು ಐವರು ಯೋಧರಿಗೆ ಗಾಯ


ಈ ಬಗ್ಗೆ ಮಾಹಿತಿ ನೀಡಿರುವ ಡೆಪ್ಯೂಟಿ ಇನ್ಸ್‌ಪೆಕ್ಟರ್‌ ಜನರಲ್‌ ಉಪೇಂದ್ರಕುಮಾರ್‌ ಸಿಂಗ್‌, ಚಿತ್ತಾಪುರ ಗ್ರಾಮದ ತೋಪ್‌ಚಾಂಚಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಗಾಯಗೊಂಡ ಯೋಧರನ್ನು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಕ್ಸಲರು ಹುದುಗಿಸಿಟ್ಟ ನೆಲಬಾಂಬ್‌ ಸ್ಫೋಟಿಸಿ, 7 ಸಿಆರ್‌ಫಿಎಫ್‌ ಯೋಧರು ಅಸು ನೀಗಿದ್ದರು.

ನಕ್ಸಲರ ಹಾವಳಿ ಹತೋಟಿಗೆ: ರಾಜನಾಥ್‌

ಕಳೆದ ಒಂದೂವರೆ ದಶಕಗಳಲ್ಲಿ ನಕ್ಸಲರನ್ನು ಹತೋಟಿಗೆ ತರುವಲ್ಲಿ ಯೋಧರು ಯಶಸ್ವಿಯಾಗಿದ್ದು, ಹಿಂಸೆ ಕಡಿಮೆಯಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ನಕ್ಸಲ್‌ ದಾಳಿಯ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರಕಾರ ನಕ್ಸಲರ ಜತೆಗೆ ಮಾತುಕತೆಗೆ ಸಿದ್ದವಿದೆ. ಆದರೆ, ಅದಕ್ಕೂ ಮೊದಲು ಅವರೆಲ್ಲ ಶಸ್ತ್ರಾಸ್ತ್ರ ತ್ಯಜಿಸಬೇಕು ಎಂದು ಷರತ್ತು ಹಾಕಿದರು.

ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ,ಇತ್ತೀಚಿನ ದಿನಗಳಲ್ಲಿ ನಕ್ಸಲರ ಹಾವಳಿ ನಿಯಂತ್ರಣದಲ್ಲಿದೆ . ಹಿಂಸಾಚಾರ ತಡೆಗಟ್ಟಲು ಸರಕಾರ ಯಶಸ್ವಿಯಾಗಿದ್ದು, ಹಿಂಸೆ ರಹಿತ ಪರಿಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅವರು ಭರವಸೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ