ಆ್ಯಪ್ನಗರ

ಹಾರುತ್ತಿದ್ದ ವಿಮಾನದಲ್ಲೇ ಮಗುವಿಗೆ ಜನ್ಮ!

ವಿಮಾನ ಜಕಾರ್ತಕ್ಕೆ ಸಾಗುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸಮೀಪದಲ್ಲಿರುವ ವಿಮಾನ ನಿಲ್ದಾಣವನ್ನು ಗಮನಿಸಿದಾಗ ಮುಂಬಯಿ ಕಂಡುಬಂತು. ಮಹಿಳೆಯ ಆರೈಕೆ ಮಾಡುತ್ತಲೇ ವಿಮಾನವನ್ನು ಮುಂಬಯಿಯಲ್ಲಿ ಇಳಿಸುವ ವ್ಯವಸ್ಥೆಗೆ ಸಂವಹನ ಮಾಡಲಾಯಿತು.

Vijaya Karnataka Web 25 Oct 2018, 9:15 pm
ಮುಂಬಯಿ: ಹಾರುತ್ತಿದ್ದ ವಿಮಾನದಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಬುಧವಾರ ನಡೆದಿದೆ. ಅಬುದಾಬಿಯಿಂದ ಜಕಾರ್ತಕ್ಕೆ ಹೋಗುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವಿಮಾನವನ್ನು ಕೂಡಲೇ ಮುಂಬಯಿ ವಿಮಾನ ನಿಲ್ದಾಣದಲ್ಲಿ ಇಳಿಸಿ ತಾಯಿ-ಮಗುವಿನ ಆರೈಕೆ ಮಾಡಲಾಯಿತು.
Vijaya Karnataka Web etihad-airways


ವಿಮಾನ ಜಕಾರ್ತಕ್ಕೆ ಸಾಗುತ್ತಿದ್ದಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಸಮೀಪದಲ್ಲಿರುವ ವಿಮಾನ ನಿಲ್ದಾಣವನ್ನು ಗಮನಿಸಿದಾಗ ಮುಂಬಯಿ ಕಂಡುಬಂತು. ಮಹಿಳೆಯ ಆರೈಕೆ ಮಾಡುತ್ತಲೇ ವಿಮಾನವನ್ನು ಮುಂಬಯಿಯಲ್ಲಿ ಇಳಿಸುವ ವ್ಯವಸ್ಥೆಗೆ ಸಂವಹನ ಮಾಡಲಾಯಿತು. ಆದರೆ, ಮುಂಬಯಿ ತಲುಪಲು ಇನ್ನೂ 40 ನಿಮಿಷಗಳಿರುವಂತೆಯೇ ಮಹಿಳೆ ಮಗುವಿಗೆ ಜನ್ಮ ನೀಡಿದರು.

ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆಯೇ ನಿಲ್ದಾಣದ ವೈದ್ಯಕೀಯ ತಂಡ ಧಾವಿಸಿ ತಾಯಿ-ಮಗುವಿಗೆ ಅಗತ್ಯ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗಾಗಿ ಸೆವೆನ್‌ ಹಿಲ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಯಿತು ಎಂದು ಮುಂಬಯಿ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಎತಿಹಾದ್‌ ಏರ್‌ವೇಸ್‌ಗೆ ಸೇರಿದ ವಿಮಾನ ಮತ್ತೆ ಜಕಾರ್ತ ಕಡೆಗೆ ಪ್ರಯಾಣ ಬೆಳೆಸಿದ್ದು, ಎರಡು ಗಂಟೆ ತಡವಾಗಿ ಅಲ್ಲಿಗೆ ತಲುಪಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ