ಆ್ಯಪ್ನಗರ

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ರಚನೆ: 22ರಂದು ಮೊದಲ ಸಭೆ

ಪಕ್ಷದ ನೀತಿ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಮಿತಿ ಎನಿಸಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯೂಸಿ) ಅಧ್ಯಕ್ಷ ರಾಹುಲ್‌ ಗಾಂಧಿ ಮಂಗಳವಾರ ರಚಿಸಿದ್ದು, ಮೊದಲ ಸಭೆ ಜುಲೈ 22ರಂದು ನಡೆಯಲಿದೆ. ರಾಹುಲ್‌ ಅವರು ಪಕ್ಷದ ಸಾರಥ್ಯ ವಹಿಸಿಕೊಂಡ ನಂತರ ರಚನೆಯಾದ ಮೊದಲ ಸಿಡಬ್ಲ್ಯೂಸಿ ಇದಾಗಿದೆ.

Vijaya Karnataka 18 Jul 2018, 8:45 am
ಹೊಸದಿಲ್ಲಿ: ಪಕ್ಷದ ನೀತಿ ನಿರ್ಧಾರ ಕೈಗೊಳ್ಳುವ ಅತ್ಯುನ್ನತ ಸಮಿತಿ ಎನಿಸಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯೂಸಿ) ಅಧ್ಯಕ್ಷ ರಾಹುಲ್‌ ಗಾಂಧಿ ಮಂಗಳವಾರ ರಚಿಸಿದ್ದು, ಮೊದಲ ಸಭೆ ಜುಲೈ 22ರಂದು ನಡೆಯಲಿದೆ. ರಾಹುಲ್‌ ಅವರು ಪಕ್ಷದ ಸಾರಥ್ಯ ವಹಿಸಿಕೊಂಡ ನಂತರ ರಚನೆಯಾದ ಮೊದಲ ಸಿಡಬ್ಲ್ಯೂಸಿ ಇದಾಗಿದೆ.
Vijaya Karnataka Web Rahul Gandhi


ಅನುಭವಿ ಹಿರಿಯ ಹಾಗೂ ಕಿರಿಯ ನಾಯಕರ ಸಮಾಗಮದೊಂದಿಗೆ ಸಮತೋಲಿತ ಸಿಡಬ್ಲ್ಯೂಸಿಯನ್ನು ರಚಿಸಲಾಗಿದೆ. 23 ಸದಸ್ಯರು, 19 ಕಾಯಂ ಆಹ್ವಾನಿತರು ಹಾಗೂ 9 ವಿಶೇಷ ಆಹ್ವಾನಿತರನ್ನು ಸಮಿತಿ ಹೊಂದಿದೆ. ಪಕ್ಷದಲ್ಲಿ ಈ ಸಮಿತಿ ಕೈಗೊಳ್ಳುವ ನೀತಿ ನಿರ್ಧಾರಗಳೇ ಅಂತಿಮವಾಗುತ್ತವೆ. ಮುಂಬರುವ ಲೋಕಸಭೆ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್‌ ಉಸ್ತುವಾರಿ ವಹಿಸಿಕೊಂಡಿರುವವರು ಶಾಶ್ವತ ಆಹ್ವಾನಿತರಾಗಿದ್ದರೆ, ಐಎನ್‌ಟಿಯುಸಿ, ಸೇವಾ ದಳ, ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ಎನ್‌ಎಸ್‌ಯುಐ ಘಟಕಗಳ ಮುಖ್ಯಸ್ಥರು ವಿಶೇಷ ಆಹ್ವಾನಿತರೆನಿಸಿಕೊಂಡಿದ್ದಾರೆ. ಜುಲೈ 22ರಂದು ನಡೆಯಲಿರುವ ಮೊದಲ ಸಭೆಗೆ ರಾಹುಲ್‌ ಗಾಂಧಿ ರಾಜ್ಯ ಘಟಕಗಳ ಪ್ರದೇಶ ಕಾಂಗ್ರೆಸ್‌ ಸಮಿತಿಗಳ ಮುಖ್ಯಸ್ಥರನ್ನೂ ಆಹ್ವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ ಅಧ್ಯಕ್ಷರ ಚುನಾವಣೆಗೂ ಮುನ್ನ ಸಿಡಬ್ಲ್ಯೂಸಿಯನ್ನು ವಿಸರ್ಜಿಸಲಾಗಿತ್ತು. ದಿಗ್ವಿಜಯ್‌ ಸಿಂಗ್‌, ಜನಾರ್ದನ ದ್ವಿವೇದಿ, ಕಮಲ್‌ನಾಥ್‌, ಸುಶೀಲ್‌ ಕುಮಾರ್‌ ಶಿಂದೆ, ಮೋಹನ್‌ ಪ್ರಕಾಶ್‌, ಸಿ.ಪಿ.ಜೋಶಿ ಅವರನ್ನು ಸಿಡಬ್ಲ್ಯೂಸಿಯಿಂದ ಕೈಬಿಡಲಾಗಿದೆ.

ಸಮಿತಿ ಸದಸ್ಯರು:
ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಡಾ. ಮನಮೋಹನ್‌ ಸಿಂಗ್‌, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಮೋತಿಲಾಲ್‌ ವೋರಾ, ಎ.ಕೆ.ಆ್ಯಂಟನಿ, ಅಹ್ಮದ್‌ ಪಟೇಲ್‌, ಅಂಬಿಕಾ ಸೋನಿ, ಗುಲಾಂ ನಬಿ ಆಜಾದ್‌, ಉಮನ್‌ ಚಾಂಡಿ, ತರುಣ್‌ ಗಗೊಯ್‌, ಆನಂದ ಶರ್ಮಾ, ಹರೀಶ್‌ ರಾವತ್‌, ಕುಮಾರಿ ಸೆಲ್ಜಾ, ಮುಕುಲ್‌ ವಾಸ್ನಿಕ್‌, ಅವಿನಾಶ್‌ ಪಾಂಡೆ, ಕೆ.ಸಿ.ವೇಣುಗೋಪಾಲ್‌, ದೀಪಕ್‌ ಬಬಾರಿಯಾ, ತಮರದ್ವಾಜ್‌ ಸಾಹು, ರಘುವೀರ್‌ ಮೀನಾ, ಗಾಯಕ್‌ಕಂಗಮ್‌, ಅಶೋಕ್‌ ಗೆಹ್ಲೋಟ್‌.

ಶಾಶ್ವತ ಆಹ್ವಾನಿತರು:
ಶೀಲಾ ದೀಕ್ಷಿತ್‌, ಪಿ.ಚಿದಂಬರಂ, ಜ್ಯೋತಿರಾಧಿತ್ಯ ಸಿಂಧಿಯಾ, ಬಾಳಾಸಾಹೇಬ್‌ ತೋರಟ್‌, ತಾರಿಖ್‌ ಹಮೀದ್‌ ಖಾರ್ರಾ, ಪಿ.ಸಿ. ಚಾಕೋ, ಜಿತೇಂದ್ರ ಸಿಂಗ್‌, ಆರ್‌ಪಿಎನ್‌ಸಿಂಗ್‌, ಪಿ.ಎಲ್‌. ಪುನಿಯಾ, ರಣದೀಪ್‌ ಸುರ್ಜೆವಾಲಾ, ಆಶಾ ಕುಮಾರಿ, ರಜನಿ ಪಾಟೀಲ್‌, ರಾಮಚಂದ್ರ ಕುಂಟಿಯಾ, ಅನುಗ್ರಹ ನಾರಾಯಣ ಸಿಂಗ್‌, ರಾಜೀವ್‌ ವಿ. ಸಾತವ್‌, ಶಕ್ತಿಸಿನ್ಹಾ ಗೋಹಿಲ್‌, ಗೌರವ್‌ ಗಗೋಯಿ, ಡಾ.ಎ.ಚೆಲ್ಲ ಕುಮಾರ್‌.

ವಿಶೇಷ ಆಹ್ವಾನಿತರು:
ಕೆ.ಎಚ್‌.ಮುನಿಯಪ್ಪ, ಅರುಣ್‌ ಯಾದವ್‌, ದಿಪೇಂದರ್‌ ಹೂಡಾ, ಜಿತಿನ್‌ ಪ್ರಸಾದ್‌, ಕುಲದೀಪ್‌ ವಿಷ್ಣೋಯಿ ಹಾಗೂ ಐಎನ್‌ಟಿಯುಸಿ, ಸೇವಾ ದಳ, ಯುವ ಕಾಂಗ್ರೆಸ್‌, ಮಹಿಳಾ ಕಾಂಗ್ರೆಸ್‌, ಎನ್‌ಎಸ್‌ಯುಐ ಘಟಕಗಳ ಮುಖ್ಯಸ್ಥರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ