ಆ್ಯಪ್ನಗರ

ಭೂಮಿ ಪೂಜೆ ಮೊದಲ ಆಮಂತ್ರಣ ಪತ್ರಿಕೆ ಸೇರಿದ್ದು ಇಕ್ಬಾಲ್ ಅನ್ಸಾರಿ ಕೈಗೆ: ಯಾರಿವರು?

ಅಯೋಧ್ಯೆ ಭೂಮಿ ಪೂಜೆಯ ಆಮಂತ್ರಣ ಪತ್ರಿಕೆಯ ಮೊದಲ ಪ್ರತಿಯನ್ನು, ಅಯೋಧ್ಯೆ ಪ್ರಕರಣದ ಮುಸ್ಲಿಂ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ನೀಡಿರುವುದು ಗಮನ ಸೆಳೆದಿದೆ. ಪ್ರಭು ಶ್ರೀರಾಮನ ಇಚ್ಛೆಯಂತೆ ಆಮಂತ್ರಣ ಪತ್ರಿಕೆಯನ್ನು ಸ್ವೀಕರಿಸಿರುವುದಾಗಿ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

Vijaya Karnataka Web 3 Aug 2020, 8:03 pm
ಅಯೋಧ್ಯೆ: ಇದೇ ಆಗಸ್ಟ್ 5(ಬುಧವಾರ)ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಲಿದ್ದು, ಪ್ರಧಾನಿ ಮೋದಿ ಶಿಲಾನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಅದರಂತೆ ಭೂಮಿ ಪೂಜೆಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಆಮಂತ್ರಣ ಪತ್ರಿಕೆಯನ್ನು ಪ್ರಕಟಿಸಿದ್ದು, ಕೇಸರಿ ಬಣ್ಣದಲ್ಲಿರುವ ಈ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಮೋದಿ ಸೇರಿ ನಾಲ್ವರು ಗಣ್ಯರ ಹೆಸರಿದೆ.

ಅಯೋಧ್ಯೆ ಭೂಮಿ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ: ಮೋದಿ ಸೇರಿ ನಾಲ್ವರು ಗಣ್ಯರ ಹೆಸರು!

ಇನ್ನು ಭೂಮಿ ಪೂಜೆಯ ಆಮಂತ್ರಣ ಪತ್ರಿಕೆಯ ಮೊದಲ ಪ್ರತಿಯನ್ನು ಅಯೋಧ್ಯೆ ಪ್ರಕರಣದ ಮುಸ್ಲಿಂ ದಾವೆದಾರರಾಗಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ನೀಡಿರುವುದು ಗಮನ ಸೆಳೆದಿದೆ.

ಹೌದು, ಭೂಮಿ ಪೂಜೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಬಾಬ್ರಿ ಮಸೀದಿಗಾಗಿ ಹೋರಾಡಿದ್ದ ಇಕ್ಬಾಲ್ ಅನ್ಸಾರಿ ಅವರಿಗೆ ನೀಡಲಾಗಿದ್ದು, ಇದಕ್ಕಾಗಿ ಇಕ್ಬಾಲ್ ಅನ್ಸಾರಿ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ರಾಮ ಮಂದಿರ ಭೂಮಿ ಪೂಜೆಗೆ ಕ್ಷಣಗಣನೆ..! ಡಿಸೆಂಬರ್‌ 6, 1992ರಂದು ಅಯೋಧ್ಯೆಯಲ್ಲಿ ನಡೆದಿದ್ದೇನು..?

ಭೂಮಿ ಪೂಜೆಯ ಮೊದಲ ಆಮಂತ್ರಣ ಪತ್ರಿಕೆ ತನಗೆ ಮೊದಲು ಬರಬೇಕು ಎಂಬುದು ಪ್ರಭು ಶ್ರೀರಾಮನ ಇಚ್ಛೆಯಾಗಿದ್ದಿರಬಹುದು ಎಂದು ಇಕ್ಬಾಲ್ ಅನ್ಸಾರಿ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ.


ಪ್ರಭು ಶ್ರೀರಾಮನ ಇಚ್ಛೆಯಂತೆ ತಾನು ಆಮಂತ್ರಣ ಪತ್ರಿಕೆಯನ್ನು ತುಂಬು ಹೃದಯದಿಂದ ಸ್ವೀಕರಿಸುವುದಾಗಿ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಅಲ್ಲದೇ ಭೂಮಿ ಪೂಜೆಗೆ ಸ್ವತಃ ಪ್ರಧಾನಿ ಮೋದಿ ಆಗಮಿಸುತ್ತಿರುವುದು ಸಂತಸ ತಂದಿದೆ ಎಂದು ಇಕ್ಬಾಲ್ ಹೇಳಿದ್ದಾರೆ.

1885 ಇದುವರೆಗಿನ ಅಯೋಧ್ಯೆ ವಿವಾದದ ಸಂಪೂರ್ಣ ಇತಿಹಾಸ

ಯಾರು ಇಕ್ಬಾಲ್ ಅನ್ಸಾರಿ?:

ರಾಮ ಜನ್ಮಭೂಮಿ ಹಾಗೂ ಬಾಬ್ರಿ ಮಸೀದಿ ಪ್ರಕರಣದಲ್ಲಿ ಇಕ್ಬಾಲ್ ಅನ್ಸಾರಿ ಅವರ ತಂದೆ ಹಶೀಮ್ ಅನ್ಸಾರಿ ಮೊದಲ ಮುಸ್ಲಿಂ ದಾವೆದಾರರಾಗಿದ್ದರು. ವಿವಾದಿತ ಸ್ಥಳದಲ್ಲಿ ಬಾಬ್ರಿ ಮಸೀದಿ ಇತ್ತೆಂದು ಹಶೀಮ ಅನ್ಸಾರಿ ಕಾನೂನು ಹೋರಾಟ ನಡೆಸಿದ್ದರು.

ಆದರೆ ಹಶೀಮ್ ಅನ್ಸಾರಿ ನಿಧನದ ಬಳಿಕ ಅವರ ಮಗ ಇಕ್ಬಾಲ್ ಅನ್ಸಾರಿ ಕಾನೂನು ಹೋರಾಟವನ್ನು ಮುಂದುವರೆಸಿದ್ದರು. ಇದೀಗ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಇಕ್ಬಾಲ್ ಅನ್ಸಾರಿ, ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ