ಆ್ಯಪ್ನಗರ

ಗೋಮೂತ್ರ ಕ್ಯಾನ್ಸರ್ ನಿರೋಧಕ, ಮೊರಾರ್ಜಿ ದೇಸಾಯಿ ಕೂಡಾ ಕುಡಿಯುತ್ತಿದ್ದರು: ಕೇಂದ್ರ ಸಚಿವ ಚೌಬೆ

ಗೋಮೂತ್ರದ ಮಹತ್ವ ಕುರಿತ ಬಿಜೆಪಿ ನಾಯಕರ ಹೇಳಿಕೆಗಳು ಮುಂದುವರೆದಿವೆ. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಗೋಮೂತ್ರ ಕುಡಿಯುತ್ತಿದ್ದರು ಎಂದು ಹೇಳಿರುವ ಕೇಂದ್ರ ಸಚಿವ ಚೌಬೆ, ಗೋಮೂತ್ರ ವಿಶಿಷ್ಠ ಶಕ್ತಿಗಳಿಂದಾಗಿ ಕ್ಯಾನ್ಸರ್ ಕೂಡಾ ಗುಣಪಡಿಸಬಲ್ಲದು ಎಂದಿದ್ಧಾರೆ.

TIMESOFINDIA.COM 8 Sep 2019, 6:12 pm
ಪಾಟ್ನಾ (ಬಿಹಾರ): ಮಾಜಿ ಪ್ರಧಾನಮಂತ್ರಿ ದಿವಂಗತ ಮೊರಾರ್ಜಿ ದೇಸಾಯಿ ಅವರು ಉತ್ತಮ ಆರೋಗ್ಯಕ್ಕಾಗಿ ಗೋಮೂತ್ರ ಕುಡಿಯುತ್ತಿದ್ದರು ಎಂದು ಕೇಂದ್ರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಹೇಳಿದ್ದಾರೆ. ಕ್ಯಾನ್ಸರ್ ಗುಣಪಡಿಸುವ ಶಕ್ತಿ ಹೊಂದಿರುವ ಗೋಮೂತ್ರವನ್ನು ಔಷಧವನ್ನಾಗಿ ರೂಪಿಸಲು ಆಯುಷ್ ಇಲಾಖೆ ಶ್ರಮವಹಿಸಿ ಕೆಲಸ ಮಾಡುತ್ತಿದೆ ಎಂದು ಚೌಬೆ ಹೇಳಿದ್ದಾರೆ.
Vijaya Karnataka Web morarji cow chowbe


ಗೋಮೂತ್ರ ಅತ್ಯಂತ ಶಕ್ತಿಶಾಲಿ, ಅದರಲ್ಲಿರುವ ವಿಶಿಷ್ಠ ಗುಣಗಳು ಹಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತವೆ ಎಂದಿರುವ ಚೌಬೆ, ಕ್ಯಾನ್ಸರ್ ಗುಣಪಡಿಸುವ ನಿಟ್ಟಿನಲ್ಲಿ ಗೋಮೂತ್ರವನ್ನು ಹೇಗೆ ಬಳಸಬೇಕು ಎಂದು ಆಯುಷ್ ಇಲಾಖೆ ಸಂಶೋಧನೆ ನಡೆಸುತ್ತಿದೆ ಎಂದಿದ್ದಾರೆ.

ಗೋಮೂತ್ರದ ಕುರಿತು ಸಂಶೋಧನೆಗಳ ಅಗತ್ಯತೆಯಿದೆ ಎಂದಿರುವ ಅಶ್ವಿನ್ ಕುಮಾರ್, ಮೊರಾರ್ಜಿ ದೇಸಾಯಿಯವರಂಥಾ ಹೆಸರಾಂತ ವ್ಯಕ್ತಿಗಳೇ ಗೋಮೂತ್ರ ಸೇವಿಸುತ್ತಿದ್ದರು ಎಂದಿದ್ದಾರೆ. ಕ್ಯಾನ್ಸರ್‌ಗೆ ಗೋಮೂತ್ರವನ್ನು ಔಷಧವನ್ನಾಗಿ ಬಳಸುವ ಸಂಬಂಧ ದೇಶೀ ತಳಿಯ ಗೋವಿನ ಮೂತ್ರವನ್ನು ಬಳಸಲಾಗುತ್ತೆ ಎಂದಿದ್ಧಾರೆ. ಅಷ್ಟೇ ಅಲ್ಲ, ಸರ್ಕಾರ ಕೂಡಾ ಗೋತಳಿ ಸಂರಕ್ಷಣೆಗೆ, ಅಭಿವೃದ್ಧಿಗೆ ಯೋಜನೆ ರೂಪಿಸಿದೆ ಎಂದು ಅಶ್ವಿನ್ ಕುಮಾರ್ ಚೌಬೆ ಹೇಳಿದ್ದಾರೆ.

ಮಧುಮೇಹ ಹಾಗೂ ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಅಶ್ವಿನ್ ಕುಮಾರ್, ಈ ರೋಗಗಳು ಇಡೀ ವಿಶ್ವಕ್ಕೇ ಸವಾಲಾಗಿವೆ. ಈ ರೋಗಗಳ ವಿರುದ್ಧ ಹೋರಾಡಲು ಹಾಗೂ ನಿಯಂತ್ರಿಸಲು ಸರ್ಕಾರ 2030ರ ಡೆಡ್ ಲೈನ್ ಹಾಕಿಕೊಂಡಿದೆ ಎಂದಿದ್ದಾರೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಕ್ಯಾನ್ಸರ್ ಚಿಕಿತ್ಸೆಯನ್ನೂ ಸೇರಿಸುವ ಪ್ರಸ್ತಾವನೆ ಇದೆ ಎಂದು ಅಶ್ವಿನ್ ಕುಮಾರ್ ಸೂಚನೆ ನೀಡಿದ್ದಾರೆ.

ಹೆಣ್ಣು ಕರುವೇ ಹುಟ್ಟಬೇಕು!: ರಾಸುಗಳ ಕೃತಕ ಗರ್ಭಧಾರಣೆಗೆ ಹೊಸ ತಂತ್ರಜ್ಞಾನ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ