ಆ್ಯಪ್ನಗರ

ಸಮಾಜವಾದಿ ಪಕ್ಷದ ಮಾಜಿ ಸಂಸದ ಶವವಾಗಿ ಪತ್ತೆ

ವಿಷ ಪ್ರಾಶನದಿಂದ ಈ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಬಾಲ್‌ಮಿಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖುರ್ಜಾ ಸರ್ಕಲ್ ಆಫೀಸರ್ ಗೋಪಾಲ್ ಸಿಂಗ್ ತಳಿಸಿದ್ದಾರೆ.

Vijaya Karnataka Web 28 May 2019, 10:09 am
ಲಖನೌ: ಉತ್ತರ ಪ್ರದೇಶದ ಬುಲಂದ್ ಶಹರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಸಮಾಜವಾದಿ ಪಕ್ಷದ ನಾಯಕ ಕಲ್ಮೇಶ್ ಬಾಲ್‌ಮಿಕಿ ಅವರು ಖರ್ಜಾದಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಶವವಾಗಿ ಪತ್ತೆಯಾಗಿದ್ದಾರೆ.
Vijaya Karnataka Web sp


ವಿಷ ಪ್ರಾಶನದಿಂದ ಈ ಸಾವು ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಬಾಲ್‌ಮಿಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖುರ್ಜಾ ಸರ್ಕಲ್ ಆಫೀಸರ್ ಗೋಪಾಲ್ ಸಿಂಗ್ ತಳಿಸಿದ್ದಾರೆ.

ಬಾಲ್‌ಮಿಕಿ ಸಾವನ್ನಪ್ಪಿರುವ ಕೋಣೆ ಒಳಗಡೆಯಿಂದ ಲಾಕ್ ಆಗಿದ್ದು, ಕುಟುಂಬಸ್ಥರು ಪ್ರಯಾಸ ಪಟ್ಟು ಕೋಣೆಯ ಬಾಗಿಲನ್ನು ತೆಗೆದಿದ್ದಾರೆ. ಈ ವೇಳೆ ಅವರು ಶವವಾಗಿ ಮಲಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲಿ ಬುಲಂದ್ ಶಹರ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಲ್ಮೇಶ್ ಬಾಲ್‌ಮಿಕಿ, ಭರ್ಜರಿ ಗೆಲುವು ದಾಖಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ