ಆ್ಯಪ್ನಗರ

ಮೋದಿ ಮಹತ್ವದ ಘೋಷಣೆ: ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ವ್ಯಂಗ್ಯ

11:45ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಮಹತ್ವದ ಘೋಷಣೆ ಮಾಡಲಿರುವುದಾಗಿ ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದರು. ಬಳಿಕ, ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ, ''ಭಾರತ 'ಸೂಪರ್ ಪವರ್‌'ಗಳ ಸಾಲಿಗೆ ಸೇರಿದೆ, ಬಲಿಷ್ಠಗೊಂಡಿದೆ ಎಂದು ಹೇಳಿದ್ದರು. ಇದಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ವ್ಯಂಗ್ಯವಾಡಿದ್ದಾರೆ.

Vijaya Karnataka Web 27 Mar 2019, 4:23 pm
ಹೊಸದಿಲ್ಲಿ: ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ, ''ಭಾರತ 'ಸೂಪರ್ ಪವರ್‌'ಗಳ ಸಾಲಿಗೆ ಸೇರಿದೆ'' ಎಂದು ಇಂದು ( ಮಾರ್ಚ್ 27, 2019)ರಂದು ಘೋಷಿಸಿದ್ದರು. ಪ್ರಧಾನಿ ಮೋದಿಯ ಈ ಭಾಷಣಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ವ್ಯಂಗ್ಯವಾಡಿದ್ದಾರೆ.
Vijaya Karnataka Web markandey katju


ಮೋದಿ ಭಾಷಣದ ಬಳಿಕ ಟ್ವೀಟ್‌ ಮಾಡಿದ ಮಾರ್ಕಂಡೇಯ ಕಟ್ಜು, ''ಬಾಹ್ಯಾಕಾಶದ ಸಾಧನೆಯ ಬಳಿಕ ನಮ್ಮ ದೇಶದ ಕಡು ಬಡತನ, ನಿರುದ್ಯೋಗ, ಮಕ್ಕಳ ಅಪೌಷ್ಟಿಕತೆ, ರೈತರ ತೊಂದರೆಗಳು, ಆರೋಗ್ಯ ರಕ್ಷಣೆ ಸೇರಿದಂತೆ ಎಲ್ಲ ತೊಂದರೆಗಳು ಶೀರ್ಘೃದಲ್ಲೇ ಅಂತ್ಯ ಕಾಣಲಿದೆ. ಒಳ್ಳೆಯ ದಿನಗಳು ( ಅಚ್ಛೇ ದಿನ್) ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.


''ಪ್ರತಿಯೊಂದು ದೇಶದ ಪ್ರಗತಿಯ ಹಾದಿಯಲ್ಲಿ ಅತ್ಯಂತ ಹೆಮ್ಮೆಯ ಹಾಗೂ ಐತಿಹಾಸಿಕ ಕ್ಷಣಗಳು ಕೆಲವೇ ಸಲ ಮಾತ್ರ ಬರುತ್ತವೆ. ಅವು ತಲೆಮಾರಿಗಳ ವರೆಗೆ ಮಹತ್ವದ ಪರಿಣಾಮ ಬೀರುತ್ತವೆ. ಅಂತಹ ಒಂದು ಹೆಮ್ಮೆಯ ಕ್ಷಣ ನಮ್ಮ ಪಾಲಿಗಿಂದು ಬಂದಿದೆ' ಎಂದು ಪ್ರಧಾನಿ ಮೋದಿ ಪ್ರಕಟಿಸಿದ್ದರು.

ಅಲ್ಲದೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮಿಶನ್ ಶಕ್ತಿ ಯೋಜನೆಯ ರೂವಾರಿ. ಇದರ ಸಂಪೂರ್ಣ ಯಶಸ್ಸು ಡಿಆರ್‌ಡಿಓ ವಿಜ್ಞಾನಿಗಳಿಗೆ ಸಲ್ಲುತ್ತದೆ. ಇದು ದೇಶದ ಭದ್ರತೆಯನ್ನು ಒಟ್ಟಾರೆಯಾಗಿ ಬಲಿಷ್ಠಗೊಳಿಸುವ ಯೋಜನೆ ಎಂದು ಹೇಳಿದ್ದರು.

ನಂತರ, ಈ ಕ್ಷೇತ್ರದಲ್ಲಿ ಶಾಂತಿ ಮತ್ತು ಸುರಕ್ಷೆಯ ವಾತಾವರಣ ಮೂಡಿಸುವುದಕ್ಕಾಗಿ ಬಲಿಷ್ಠ ಭಾರತದ ನಿರ್ಮಾಣ ಅಗತ್ಯವಿದೆ. ನಮ್ಮ ಉದ್ದೇಶ ಯುದ್ಧದ ವಾತಾವರಣ ಸೃಷ್ಟಿಸುವುದಲ್ಲ. ಭಾರತ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮಾಡುವ ಸಾಧನೆಗಳು ಭಾರತದ ಅಭಿವೃದ್ಧಿಗಾಗಿಯೇ ಹೊರತು ಬೇರೆಯವರ ಮೇಲೆ ದಾಳಿಗಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

11:45ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಮಹತ್ವದ ಘೋಷಣೆ ಮಾಡಲಿರುವುದಾಗಿ ಪ್ರಧಾನಿ ಮೋದಿ ಅವರೇ ಸ್ವತಃ ಟ್ವೀಟ್ ಮೂಲಕ ದೇಶದ ಜನತೆಗೆ ಮುನ್ಸೂಚನೆ ನೀಡಿದ್ದರು. ಟಿವಿ., ರೇಡಿಯೋ, ಸಾಮಾಜಿಕ ಜಾಲತಾಣಗಳ ಮೂಲಕ ಎಲ್ಲರೂ ನಿರೀಕ್ಷಿಸುತ್ತಿರಿ ಎಂದೂ ಮೋದಿ ಸಂಕೇತ ನೀಡಿದ್ದರು. ಇಡೀ ದೇಶವೇ ತುದಿಗಾಲಲ್ಲಿ ನಿಂತಿತ್ತು. ಕೊನೆಗೆ 12.20ರ ಬಳಿಕ ಮೋದಿ ಈ ಘೋಷಣೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ