ಆ್ಯಪ್ನಗರ

ಶಂಕುಸ್ಥಾಪನೆಗೆ ಮೊದಲ ಅಪಸ್ವರ: ಅಶುಭ ಘಳಿಗೆಯಲ್ಲೇಕೆ ಭೂಮಿ ಪೂಜೆ ಎಂದ ಸ್ವರೂಪಾನಂದ ಸರಸ್ವತಿ!

ರಾಮ ಮಂದಿರ ಶಂಕುಸ್ಥಾಪನೆಗೆ ಮೊದಲ ಅಪಸ್ವರ ಕೇಳಿ ಬಂದಿದ್ದು, ಆಗಸ್ಟ್ 5ರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಅಪಸ್ವರ ಎತ್ತಿದ್ದಾರೆ. ಅಶುಭ ಘಳಿಗೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ನೆರವೇರಿಸುವ ಅವಶ್ಯಕತೆಯಾದರೂ ಏನು ಎಂದು ಅವರು ಪ್ರಶ್ನಿಸಿದ್ದಾರೆ.

Vijaya Karnataka Web 23 Jul 2020, 3:18 pm
ನವದೆಹಲಿ: ಇದೇ ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಪ್ರಧಾನಿ ಮೋದಿ ಅವರಿಂದ ಶಂಕುಸ್ಥಾಪನೆ ನೆರವೇರಲಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭರದ ಸಿದ್ಧತೆಗಳು ಆರಂಭವಾಗಿವೆ.
Vijaya Karnataka Web Swaroopanand Saraswati
ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ


ಆದರೆ ರಾಮ ಮಂದಿರ ಶಂಕುಸ್ಥಾಪನೆಗೆ ಮೊದಲ ಅಪಸ್ವರ ಕೇಳಿ ಬಂದಿದ್ದು, ಆಗಸ್ಟ್ 5ರ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅವರು ಅಪಸ್ವರ ಎತ್ತಿದ್ದಾರೆ.

ಅಶುಭ ಘಳಿಗೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ನೆರವೇರಿಸುವ ಅವಶ್ಯಕತೆಯಾದರೂ ಏನು ಎಂದು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಪ್ರಶ್ನಿಸಿದ್ದಾರೆ. ಸ್ವಾಮಿಜೀ ಕೊರೊನಾ ವೈರಸ್ ಹಾವಳಿಯ ಈ ಸಂಮಯವನ್ನು ಅಶುಭ ಘಳಿಗೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಅಯೋಧ್ಯೆಯಲ್ಲಿ ತಲೆ ಎತ್ತಲಿದೆ 161 ಅಡಿ ಎತ್ತರದ ಭವ್ಯ ರಾಮ ಮಂದಿರ..! ಮೂಲ ವಿನಾಸಕ್ಕಿಂತ 20 ಅಡಿ ಹೆಚ್ಚಳ

ತಾವು ರಾಮ ಜನ್ಮಭೂಮಿ ನ್ಯಾಸದಲ್ಲಿ ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ ಎಂದಿರುವ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ, ಸರಿಯಾದ ಹಾಗೂ ಶುಭ ಘಳಿಗೆಯಲ್ಲಿ ಭೂಮಿ ಪೂಜೆ ನೆರವೇರಬೇಕು ಎಂಬುದಷ್ಟೇ ತಮ್ಮ ಬಯಕೆ ಎಂದು ಪ್ರಶ್ನಿಸಿದ್ದಾರೆ.


ಸದ್ಯದ ಅಶುಭ ಘಳಿಗೆಯಲ್ಲಿ ಭೂಮಿ ಪೂಜೆ ನೆರವೇರಿಸುವುದರಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ ಎಂದಿರುವ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ, ಸರಿಯಾದ ಸಮುಯದಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲು ಆಗ್ರಹಿಸಿದ್ದಾರೆ.

ರಾಮ ಜನ್ಮಭೂಮಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಪಾಲನೆ: ಟ್ರಸ್ಟ್ ಭರವಸೆ

ಒಟ್ಟಿನಲ್ಲಿ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಲು ದಿನಗಣನೆ ಆರಂಭವಾಗಿದ್ದು, ಈ ಕುರಿತು ಕೇಳಿ ಬಂದಿರುವ ಮೊದಲ ಅಪಸ್ವರದ ಕುರಿತು ರಾಮ ಜನ್ಮಭೂಮಿ ನ್ಯಾಸ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ