ಆ್ಯಪ್ನಗರ

ನೀರವ್‌ ಮೋದಿ ಹಾಂಕಾಂಗ್‌ನಲ್ಲಿ

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಾಲ ವಂಚನೆ ಪ್ರಕರಣದ ಆರೋಪಿ ನೀರವ್‌ ಮೋದಿ ಸದ್ಯ ಹಾಂಕಾಂಗ್‌ನಲ್ಲಿ ತಲೆಮರೆಸಿಕೊಂಡಿದ್ದು, ಆತನ ಹಸ್ತಾಂತರಕ್ಕೆ ಸಹಕರಿಸುವಂತೆ ಅಲ್ಲಿನ ಸರಕಾರಕ್ಕೆ ವಿದೇಶಾಂಗ ಸಚಿವಾಲಯ ಮನವಿ ಸಲ್ಲಿಸಿದೆ.

Vijaya Karnataka 6 Apr 2018, 11:24 am
ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಾಲ ವಂಚನೆ ಪ್ರಕರಣದ ಆರೋಪಿ ನೀರವ್‌ ಮೋದಿ ಸದ್ಯ ಹಾಂಕಾಂಗ್‌ನಲ್ಲಿ ತಲೆಮರೆಸಿಕೊಂಡಿದ್ದು, ಆತನ ಹಸ್ತಾಂತರಕ್ಕೆ ಸಹಕರಿಸುವಂತೆ ಅಲ್ಲಿನ ಸರಕಾರಕ್ಕೆ ವಿದೇಶಾಂಗ ಸಚಿವಾಲಯ ಮನವಿ ಸಲ್ಲಿಸಿದೆ.
Vijaya Karnataka Web ನೀರವ್ ಮೋದಿ


ರಾಜ್ಯಸಭೆ ಪ್ರಶ್ನೋತ್ತರ ವೇಳೆ, ನೀರವ್‌ ಎಲ್ಲಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಇದೆಯೇ ಎಂದು ಕೇಳಲಾದ ಪ್ರಶ್ನೆಗೆ ವಿದೇಶಾಂಗ ಸಹಾಯಕ ಸಚಿವ ವಿ ಕೆ ಸಿಂಗ್‌, ''ಚೀನಾ ಆಡಳಿತ ವ್ಯಾಪ್ತಿಗೆ ಒಳಪಟ್ಟಿರುವ ಹಾಂಕಾಂಗ್‌ನಲ್ಲಿ ಇರುವ ಆರೋಪಿಯ ಬಂಧನಕ್ಕಾಗಿ ಅಲ್ಲಿನ ಸರಕಾರಕ್ಕೆ ಈಗಾಗಲೇ ಅಧಿಕೃತ ಮನವಿ ಸಲ್ಲಿಸಿದ್ದಾಗಿದೆ,'' ಎಂದು ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ