ಆ್ಯಪ್ನಗರ

ಜ. ಒಂದರಿಂದ OTP ಮೂಲಕ ಆಧಾರ್‌ಗೆ ಮೊಬೈಲ್‌ ಲಿಂಕ್‌

ಈವರೆಗೆ ಮೊಬೈಲ್‌ ನಂಬರ್‌ ಅನ್ನು ಆಧಾರ್‌ಗೆ ಲಿಂಕ್‌ ಮಾಡಿಲ್ಲವಾದರೆ ಯೋಚನೆ ಬೇಡ, ಈ ಲಿಂಕ್‌ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದ್ದು, ಆನ್‌ಲೈನ್‌ ಮೂಲಕವೇ ಮಾಡಬಹುದು.

Vijaya Karnataka Web 9 Dec 2017, 2:47 pm
ಹೊಸದಿಲ್ಲಿ: ಈವರೆಗೆ ಮೊಬೈಲ್‌ ನಂಬರ್‌ ಅನ್ನು ಆಧಾರ್‌ಗೆ ಲಿಂಕ್‌ ಮಾಡಿಲ್ಲವಾದರೆ ಯೋಚನೆ ಬೇಡ, ಈ ಲಿಂಕ್‌ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದ್ದು, ಆನ್‌ಲೈನ್‌ ಮೂಲಕವೇ ಮಾಡಬಹುದು.
Vijaya Karnataka Web from january 1 link your mobile to aadhaar via otp
ಜ. ಒಂದರಿಂದ OTP ಮೂಲಕ ಆಧಾರ್‌ಗೆ ಮೊಬೈಲ್‌ ಲಿಂಕ್‌


ಜನವರಿ ಒಂದರಿಂದ ವಾಯ್ಸ್‌ ಗೈಡೆಡ್‌ ಸಿಸ್ಟಂ ಬಳಸಿಕೊಂಡು ಒನ್‌ ಟೈಮ್‌ ಪಾಸ್‌ವರ್ಡ್‌ ( OTP) ಪಡೆದು ಆಧಾರ್‌ಗೆ ಮೊಬೈಲ್‌ ನಂಬರ್‌ ಲಿಂಕ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಆಧಾರ್‌ಗೆ ಮೊಬೈಲ್‌ ಲಿಂಕ್‌ ಮಾಡಲು ವಿಧಿಸಿದ್ದ ಆರಂಭದಲ್ಲಿ ವಿಧಿಸಿದ್ದ ಗಡುವು ಮುಗಿದು ಹೋಗಿದೆ. ಯುಐಡಿಎಐ ಮತ್ತು ಟೆಲಿಕಾಂ ಕಂಪೆನಿಗಳ ಗೊಂದಲ ಹಾಗೂ ತಕ್ಷಣ ಮೊಬೈಲ್‌ ಕಂಪೆನಿಗಳ ಗ್ರಾಹಕ ಕೇಂದ್ರಗಳಿಗೆ ತೆರಳಿ ಈ ಪ್ರಕ್ರಿಯೆ ನಡೆಸುವುದು ಗ್ರಾಹಕರಿಗೆ ಅನನುಕೂಲಕರವಾಗಿದ್ದರಿಂದ ಆಧಾರ್‌ಗೆ ಮೊಬೈಲ್‌ ಲಿಂಕ್‌ ಮಾಡುವುದು ಕ್ಲಿಷ್ಟವಾಗಿ ಪರಿಣಮಿಸಿತ್ತು. 50 ಕೋಟಿ ಚಂದಾದಾರರು ಇನ್ನೂ ಮೊಬೈಲ್‌ ನಂಬರ್‌ ಅನ್ನು ಆಧಾರ್‌ಗೆ ಲಿಂಕ್‌ ಮಾಡಿಲ್ಲ.

ಸುಪ್ರೀಂಕೋರ್ಟ್‌ ಭದ್ರತೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ ಬಳಿಕವೂ ಸರಕಾರವು ಮೊಬೈಲ್‌ ನಂಬರ್‌ ಅನ್ನು ಆಧಾರ್‌ಗೆ ಲಿಂಕ್‌ ಮಾಡುವಂತೆ ಸರಕಾರ ಹೇಳಿದೆ.

ಒಟಿಪಿ ಆಧಾರಿತ ಮೊಬೈಲ್‌ ವ್ಯವಸ್ಥೆಯು ಮೊಬೈಲ್‌ ನಂಬರ್‌ ಅನ್ನು ಆಧಾರ್‌ಗೆ ಲಿಂಕ್‌ ಮಾಡಿಕೊಳ್ಳಲು ಚಂದಾದಾರರಿಗೆ ಬಹಳಷ್ಟು ಅನುಕೂಲಕರವಾಗಲಿದೆ. ಮೊಬೈಲ್‌ ಕಂಪೆನಿಗಳ ಸೇವಾಕೇಂದ್ರಗಳು ದೂರದಲ್ಲಿರುವುದು, ಅಲ್ಲಿನ ಬಯೊಮೆಟ್ರಿಕ್‌ ಯಂತ್ರಗಳು ಸರಿ ಇಲ್ಲದಿರುವ ಸಮಸ್ಯೆಗಳು ತಪ್ಪಲಿವೆ.

ಚಂದಾದಾರರು ತಮ್ಮ ಮೊಬೈಲ್‌ನಿಂದ ಐವಿಆರ್‌ಎಸ್‌ಗೆ ಕರೆ ಮಾಡಬೇಕು. ಪ್ರಕ್ರಿಯೆಯನ್ನು ಇಂಗ್ಲಿಷ್‌, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಲಿಂಕ್‌ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಚಂದಾದಾರರು ಆಧಾರ್‌ ನಂಬರ್‌ ವೆರಿಫಿಕೇಷನ್‌ಗೆ ಸಮ್ಮತಿಸಬೇಕು. ವೆರಿಫಿಕೇಷನ್‌ ಕರೆಕ್ಟ್‌ ಆದಲ್ಲಿ ಮೊಬೈಲ್‌ಗೆ ಒಟಿಪಿ ಬರುತ್ತದೆ. ಒಟಿಪಿ ಮೂಲಕ ಲಿಂಕ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ