ಆ್ಯಪ್ನಗರ

ನಾನು ವಿಕಾಸ್ ದುಬೆ ಎನ್ನುತ್ತಿದ್ದಂತೇ ಎರಡು ಬಿಟ್ಟ ಪೊಲೀಸರು: ಖಾಕಿ ಏಟಿಗೆ ರೌಡಿ ತಬ್ಬಿಬ್ಬು!

ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಲ ಮಂದಿರಕ್ಕೆ ಭೇಟಿ ನೀಡಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ವಿಕಾಸ್ ದುಬೆಯ ಬಂಧನದ ಕ್ಷಣಗಳು ಅತ್ಯಂತ ರೋಚಕವಾಗಿದ್ದವು. ನಾನು ವಿಕಾಸ್ ದುಬೆ ಎಂದು ಅರಚಿದ ರೌಡಿಯ ತಲೆಗೆ ಪೊಲೀಸರು ಏಟು ಕೊಟ್ಟು ಕಾರಿನಲ್ಲಿ ಕೂರಿಸಿಕೊಂಡು ಠಾಣೆಗೆ ಕರೆದೊಯ್ದಿದ್ದಾರೆ.

Vijaya Karnataka Web 9 Jul 2020, 3:24 pm
ಉಜ್ಜಯಿನಿ: 'ಮೈ ವಿಕಾಸ್ ದುಬೆ ಕಾನ್ಪುರ್ ವಾಲಾ....' ಎಂದು ಅರಚಿದ ನಟೋರಿಯಸ್ ರೌಡಿ ವಿಕಾಸ್ ದುಬೆ ತಲೆಗೆ ಕುಟ್ಟಿದ ಪೊಲೀಸರು, ಆತನ ಕತ್ತು ಹಿಡಿದು ಧರಧರನೆ ಎಳೆದುಕೊಂಡು ಹೋಗುತ್ತಿರುವ ವಿಡಿಯೋ ನೋಡಿ ಕಾನ್ಪುರ್ ಎನ್‌ಕೌಂಟರ್‌ನ 8 ಹುತಾತ್ಮ ಪೊಲೀಸರ ಆತ್ಮಕ್ಕೆ ಶಾಂತಿ ದೊರೆತಿರಬಹುದು.
Vijaya Karnataka Web vikas dubey
ಸಂಗ್ರಹ ಚಿತ್ರ


ಕಾನ್ಪುರ್ ಎನ್‌ಕೌಂಟರ್ ಬಳಿಕ ಹರಿಯಾಣ, ದೆಹಲಿ ಹಾಗೂ ಮಧ್ಯಪ್ರದೇಶದಲ್ಲಿ ತಲೆ ಮರೆಸಿಕೊಂಡಿದ್ದ ರೌಡಿ ವಿಕಾಸ್ ದುಬೆ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇಲ್ಲಿನ ಮಹಾಕಾಲ ಮಂದಿರಕ್ಕೆ ಭೇಟಿ ನೀಡಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ವಿಕಾಸ್ ದುಬೆಯ ಬಂಧನದ ಕ್ಷಣಗಳು ಅತ್ಯಂತ ರೋಚಕವಾಗಿದ್ದವು. ಮಂದಿರಕ್ಕೆ ಭೇಟಿ ನೀಡಿರುವ ವ್ಯಕ್ತೊ ವಿಕಾಸ್ ದುಬೆ ಎಂಬುದು ತಿಳಿಯುತ್ತಿದ್ದಂತೇ ದಾಳಿ ಮಾಡಿದ ಪೊಲೀಸರು, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾದರು.

"ಮೇ ವಿಕಾಸ್‌ ದುಬೆ ಹು, ಕಾನ್ಪುರ್‌ ವಾಲಾ" ಎನ್ನುತ್ತ ಚೀರಾಡಿ ಸಿಕ್ಕಿಬಿದ್ದ, ದುಬೆ ಬಂಧನದ ಹಿಂದಿನ ಇಂಟ್ರೆಸ್ಟಿಂಗ್‌ ಕಹಾನಿ ಇಲ್ಲಿದೆ!


ಇನ್ನು ಪೊಲೀಸರು ಬಂಧಿಸುತ್ತಿದ್ದಂತೇ ಮೈ ವಿಕಾಸ್ ದುಬೆ ಹು ಕಾನ್ಪುರ್ ವಾಲಾ(ನಾನು ವಿಕಾಸ್ ದದುಬೆ, ಕಾನ್ಪುರ್‌ದವನು) ಎಂದು ಅರಚಿದ ದುಬೆಯ ತಲೆಗೆ ಪೊಲೀಸ್‌ವೋರ್ವ ಹೊಡೆದಿರುವ ದೃಶ್ಯ ಸೆರೆಯಾಗಿದೆ.

ಕಾರಿನ ಬಳಿ ನಿಲ್ಲಿಸಿದ್ದಾಗ ವಿಕಾಸ್ ದುಬೆ ಅರಚಲು ಆರಂಭಿಸಿದ್ದು, ಕೂಡಲೇ ಪೊಲೀಸ್ ಅಧಿಕಾರಿಯೊಬ್ಬರು ಆತನ ತಲೆಗೆ ಜೋರಾಗಿ ಹೊಡೆದು ಸುಮ್ಮನಾಗಿಸಿದ್ದಾರೆ.

8 ಪೊಲೀಸರನ್ನು ಕೊಂದು ಅಟ್ಟಹಾಸ ಮೆರೆದಿದ್ದ ರೌಡಿ ವಿಕಾಸ್‌ ದುಬೆ ಬಂಧನ!

ಅಲ್ಲದೇ ಆತನ ಕತ್ತು ಹಿಡಿದು ಎಳೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಒಟ್ಟಿನಲ್ಲಿ ನಟೋರಿಯಸ್ ರೌಡಿಯ ಬಂಧನದಿಂದ ಜನತೆ ನಿಟ್ಟುಸಿರುವ ಬಿಡುವಂತಾಗಿದ್ದು, ಕರ್ತವ್ಯಕ್ಕಾಗಿ ಪ್ರಾಣ ತೆತ್ತ 8 ಪೊಲೀಸರಿಗೆ ಇಡೀ ದೇಶ ಶ್ರದ್ಧಾಂಜಲಿ ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ