ಆ್ಯಪ್ನಗರ

ವೆಂಕಟೇಶ್ವರ ದೇಗುಲದ ಗರ್ಭಗುಡಿಯಲ್ಲಿ ಗರುಡ: ಪವಾಡ ವೀಕ್ಷಿಸಿದ ಭಕ್ತರು

ಈ ಗರುಡ ಪಕ್ಷಿ ಹೇಗೆ ಒಳಗೆ ಬಂತು ಎಂಬುದು ಗೊತ್ತಿಲ್ಲ. ಆದರೆ ಬಂದ ನಂತರ ನಿತ್ರಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

Vijaya Karnataka Web 24 Dec 2018, 8:24 pm
ಕೊರುಟ್ಲ: ಇದು ಪವಾಡವೋ, ವಿಸ್ಮಯವೋ, ದೈವ ಪ್ರೇರಣೆಯೋ ಗೊತ್ತಿಲ್ಲ. ಶ್ರೀ ಮಹಾವಿಷ್ಣುವಿನ ವಾಹನವಾದ ಗರುಡ ಪಕ್ಷಿ ದೇವರ ಪಾದದಲ್ಲೇ ಬಂದು ಕುಳಿತಿದ್ದು ಭಕ್ತರನ್ನು ಪರವಶಗೊಳಿಸಿದೆ.
Vijaya Karnataka Web ಗರ್ಭಗುಡಿಯಲ್ಲಿ ಗರುಡ
ಗರ್ಭಗುಡಿಯಲ್ಲಿ ಗರುಡ


ತೆಲಂಗಾಣದ ಜಗಿತ್ಯಾಲ್‌ ಜಿಲ್ಲೆಯ ಕೊರುಟ್ಲದಲ್ಲಿರುವ ವೆಂಕಟೇಶ್ವರ ದೇಗುಲದ ಗರ್ಭಗುಡಿಯಲ್ಲಿ ಗರುಡ ಪಕ್ಷಿ ವಿಗ್ರಹದ ಪಾದದ ಬಳಿಯೇ ಬಂದು ಕುಳಿತಿತ್ತು.

ದೇಗುಲದಲ್ಲಿ ಗರುಡ ಬಂದು ಕುಳಿತಿರುವ ವಿಷಯ ತಿಳಿಯುತ್ತಿದ್ದಂತೆ ಭಕ್ತರ ದಂಡೇ ಹರಿದು ಬಂತು. ಸಾಕ್ಷಾತ್‌ ವಿಷ್ಣುವಿನ ವಾಹನವೇ ಪಾದದ ಬಳಿಯೇ ಬಂದಿದ್ದು ನಿಜಕ್ಕೂ ದೈವ ಶಕ್ತಿ ಎಂದು ಭಕ್ತರು ಹೇಳಿಕೊಳ್ಳುತ್ತಿದ್ದುದು ಕೇಳಿಬಂದಿತು.

ಈ ಗರುಡ ಪಕ್ಷಿ ಹೇಗೆ ಒಳಗೆ ಬಂತು ಎಂಬುದು ಗೊತ್ತಿಲ್ಲ. ಆದರೆ ಬಂದ ನಂತರ ನಿತ್ರಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಗರುಡ ಪಕ್ಷಿಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ