ಆ್ಯಪ್ನಗರ

ರಕ್ಬರ್ ಕುಟುಂಬಕ್ಕೆ ಪರಿಹಾರ ನೀಡಿದ್ದಕ್ಕೆ ಹರಿಯಾಣ ಸರಕಾರಕ್ಕೆ ಗೋ ರಕ್ಷಕರ ಬೆದರಿಕೆ

ಸಮೂಹ ಥಳಿತದಿಂದ ಸಾವನ್ನಪ್ಪಿರುವ ರಕ್ಬರ್ ಕುಟುಂಬಕ್ಕೆ 8 ಲಕ್ಷ ಪರಿಹಾರ ಘೋಷಿಸಿರುವ ಹರಿಯಾಣ ಸರಕಾರದ ವಿರುದ್ಧ ತಿರುಗಿ ಬಿದ್ದಿರುವ ಗೋ ರಕ್ಷಕರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.

TIMESOFINDIA.COM 29 Jul 2018, 3:01 pm
ರೋಹ್ಟಕ್: ಸಮೂಹ ಥಳಿತದಿಂದ ಸಾವನ್ನಪ್ಪಿರುವ ರಕ್ಬರ್ ಕುಟುಂಬಕ್ಕೆ 8 ಲಕ್ಷ ಪರಿಹಾರ ಘೋಷಿಸಿರುವ ಹರಿಯಾಣ ಸರಕಾರದ ವಿರುದ್ಧ ತಿರುಗಿ ಬಿದ್ದಿರುವ ಗೋ ರಕ್ಷಕರು ರಾಜ್ಯವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ.
Vijaya Karnataka Web Protest


ಸರಕಾರದ ನಡೆಯಿಂದ ಕೆಂಡಾಮಂಡಲರಾಗಿರುವ ಗೋ ರಕ್ಷಕರು ಭಿವಾನಿಯಲ್ಲಿ ಬಿಜೆಪಿ ಸರಕಾರದ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು ಮತ್ತು ಪರಿಹಾರ ನೀಡುವುದರಿಂದ ಹಿಂದೆ ಸರಿಯದಿದ್ದರೆ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಗೋ ಕಳ್ಳಸಾಗಣೆ ಮಾಡುತ್ತಿದ್ದ ರಕ್ಬರ್‌ ಕುಟುಂಬಕ್ಕೆ ಪರಿಹಾರ ನೀಡುವುದು, ಇಂತಹ ಕೃತ್ಯಗಳಲ್ಲಿ ತೊಡಗಿರುವವರಿಗೆ ಮತ್ತಷ್ಟು ಉತ್ತೇಜನ ನೀಡಿದಂತೆ ಮತ್ತು ಗೋ ರಕ್ಷಣೆ ಮಾಡುವವರಿಗೆ ನಿರಾಶೆ ತರುವಂತದ್ದು ಎಂದು ಗೋ ರಕ್ಷಾ ದಳದ ಜಿಲ್ಲಾಧ್ಯಕ್ಷ ಸಂಜಯ್ ಪರ್ಮಾರ್ ತಿಳಿಸಿದ್ದಾರೆ.

ಗೋ ರಕ್ಷಣೆ ಮಾಡುವಾಗ, ಗೋ ರಕ್ಷಕರು ಗಾಯಗಂಡರೆ ಅಥವಾ ಸಾವನ್ನಪ್ಪಿದರೆ ಅಂತವರಿಗೆ ಸರಕಾರ ಪರಿಹಾರ ಘೋಷಿಸುವುದಿಲ್ಲ. ಇದೇ ಸರಕಾರ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು ಸತ್ಯವನ್ನು ಪರಿಶೀಲಿಸದೆ ರಕ್ಬರ್ ಕುಟುಂಬಕ್ಕೆ ಪರಿಹಾರ ನೀಡ ಹೊರಟಿದೆ ಎಂದವರು ಕಿಡಿಕಾರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ