ಆ್ಯಪ್ನಗರ

ಆಕಸ್ಮಿಕವಾಗಿ ನೆರೆಮನೆಯವರ ಬಾತ್ ರೂಮ್‌ನಲ್ಲಿ ಬಿದ್ದ ಬಾಲಕಿ, ನೀರು ಕುಡಿದುಕೊಂಡು ಬದುಕುಳಿದಳು

ತೆಲಂಗಾಣದ ನಾರಾಯಣ್ ಪೇಟ್ ಜಿಲ್ಲೆಯ ಮಾಕ್ಟಾಲ್ ನಗರದಲ್ಲಿ ಏಪ್ರಿಲ್ 20ರಂದು ಈ ಘಟನೆ ನಡೆದಿದ್ದು, 2ನೇ ತರಗತಿ ವಿದ್ಯಾರ್ಥಿನಿ ಕುರುವಾಕಾಚೇರಿ ಅಖಿಲಾ, ತನ್ನ ಮನೆಗೆ ಹೊಂದಿಕೊಂಡಿದ್ದ ಟೆರೇಸ್ ಮೇಲೆ ಆಟವಾಡಿಕೊಂಡಿದ್ದಳು.

TIMESOFINDIA.COM 27 Apr 2019, 7:38 pm
ಹೈದರಾಬಾದ್: ಆಕಸ್ಮಿಕವಾಗಿ ಪಕ್ಕದ ಮನೆಯವರ ನೆರೆಮನೆಯಲ್ಲಿ ಬಿದ್ದು ಅಲ್ಲೇ ಸಿಕ್ಕಿ ಹಾಕಿಕೊಂಡ 7 ವರ್ಷದ ಬಾಲಕಿಯೊಬ್ಬಳು ನಾಲ್ಕು ದಿನಗಳ ಬಳಿಕ ಪತ್ತೆಯಾಗಿದ್ದಾಳೆ.
Vijaya Karnataka Web Child222


ತೆಲಂಗಾಣದ ನಾರಾಯಣ್ ಪೇಟ್ ಜಿಲ್ಲೆಯ ಮಾಕ್ಟಾಲ್ ನಗರದಲ್ಲಿ ಏಪ್ರಿಲ್ 20ರಂದು ಈ ಘಟನೆ ನಡೆದಿದ್ದು, 2ನೇ ತರಗತಿ ವಿದ್ಯಾರ್ಥಿನಿ ಕುರುವಾಕಾಚೇರಿ ಅಖಿಲಾ, ತನ್ನ ಮನೆಗೆ ಹೊಂದಿಕೊಂಡಿದ್ದ ಟೆರೇಸ್ ಮೇಲೆ ಆಟವಾಡಿಕೊಂಡಿದ್ದಳು ಮತ್ತು ಆಕಸ್ಮಿಕವಾಗಿ ಆಯ ತಪ್ಪಿ ಪ್ಲಾಸ್ಟಿಕ್ ನೆಟ್‌ನೊಳಗಿಂದ ಪಕ್ಕದ ಮನೆಯವರ ಬಾತ್‌ರೂಮ್‌ನಲ್ಲಿ ಬಿದ್ದಿದ್ದಳು. ಆ ಮನೆಯ ಸದಸ್ಯರು ಸಂಬಂಧಿಕರ ಮನೆಗೆ ಹೋಗಿದ್ದು ಮನೆ ಹೊರಗಿಂದ ಲಾಕ್ ಆಗಿತ್ತು. ಆಕೆ ಎಷ್ಟೇ ಕೂಗಿಕೊಂಡರು ಸಹ ಯಾರಿಗೂ ಕೇಳಿಸಲಿಲ್ಲ.

ತಮ್ಮ ಮಗಳು ಕಾಣುತ್ತಿಲ್ಲ ಎಂದು ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರಾಕೆ ಪತ್ತೆಯಾಗಿರಲಿಲ್ಲ.

ಏಪ್ರಿಲ್ 24ರಂದು ನೆರೆಮನೆಯವರು ಮರಳಿದ್ದು, ಬಾತ್ ರೂಂನಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಬಾಲಕಿಯನ್ನು ಕಂಡು ಆಘಾತಕ್ಕೊಳಗಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಯಿತು. ಆಕೆ ಆಗ ಆರೋಗ್ಯವಾಗಿದ್ದಾಳೆ ಎಂದು ತಿಳಿದು ಬಂದಿದೆ.

ಬಾತ್‌ರೂಮ್‌ನಲ್ಲಿದ್ದ ನೀರು ಕುಡಿದು ಬದುಕುಳಿದಿರುವುದಾಗಿ ಬಾಲಕಿ ಹೇಳಿದ್ದಾರೆ.

ಬಾತ್ ರೂಮ್‌ನಲ್ಲಿ ತೂಗಿ ಹಾಕಲಾಗಿದ್ದ ಬಟ್ಟೆಯ ಮೇಲೆ ಬಿದ್ದಿದ್ದರಿಂದ ಆಕೆಗೆ ಸ್ವಲ್ಪವೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ