ಆ್ಯಪ್ನಗರ

ತಾಯಿಯ ಪ್ರಿಯತಮನನ್ನು ಕೊಲ್ಲಿಸಿದ ಯುವತಿ

ಪದೇ ಪದೇ ಮನೆಗೆ ಬರುತ್ತಿದ್ದ ತಾಯಿಯ ಪ್ರಿಯತಮನನ್ನು ಪದವಿ ವಿದ್ಯಾರ್ಥಿನಿಯೊಬ್ಬಳು ಸ್ನೇಹಿತರ ಸಹಾಯದಿಂದ ಕೊಲ್ಲಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ಗಾಳೆ.

Vijaya Karnataka Web 13 Dec 2017, 12:08 pm
ಹೈದರಾಬಾದ್: ಪದೇ ಪದೇ ಮನೆಗೆ ಬರುತ್ತಿದ್ದ ತಾಯಿಯ ಪ್ರಿಯತಮನನ್ನು ಪದವಿ ವಿದ್ಯಾರ್ಥಿನಿಯೊಬ್ಬಳು ಸ್ನೇಹಿತರ ಸಹಾಯದಿಂದ ಕೊಲ್ಲಿಸಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ಗಾಳೆ.
Vijaya Karnataka Web girl held for killing mothers lover with the help of friends
ತಾಯಿಯ ಪ್ರಿಯತಮನನ್ನು ಕೊಲ್ಲಿಸಿದ ಯುವತಿ


ಘಟನೆಗೆ ಸಂಬಂಧಿಸಿದಂತೆ ಸೈಬರಾಬಾದ್ ಪೊಲೀಸರು ಮೂವರನ್ನು ಬಂಧಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ರಿಯಲ್ ಎಸ್ಟೇಟ್ ಉದ್ಯಮಿ ದುರ್ಗಾ ದಾಸ್ (48) ಅವರ ಮೇಲೆ ಅಪರಿಚಿತರು ಡಿಸೆಂಬರ್ 7ರಂದು ಕೊಲ್ಲಲು ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಡಿಸೆಂಬರ್ 11ರಂದು ದಾಸ್ ಕೊನೆಯುಸಿರೆಳೆದಿದ್ದರು.

ದಾಸ್ ಪತ್ನಿ ಅರುಣಾವತಿ ದೂರಿನ ಆಧಾರ ಮೇಲೆ ರಾಮಚಂದ್ರಪುರಂ ಪೊಲೀಸರು ಕೊಲೆಗೆ ಯತ್ನ ನಡೆಸಿದ ದೂರು ದಾಖಿಲಿಸಿಕೊಂಡಿದ್ದರು. ದಾಸ್ ಮೇಲೆ ದಾಳಿ ನಡೆಸಿದ ಆರೋಪಿಗಳು ಇನ್ನೋವಾದಲ್ಲಿ ಆಗಮಿಸಿದ್ದನ್ನು ಪತ್ತೆ ಹಚ್ಚಿದ ಪೊಲೀಸರು, ಕಾರಿನ ನಂಬರ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ಹೇಳಿಕೆ ಮೇರೆಗೆ ದಾಸ್ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಮಹಿಳೆಯ ಮಗಳು ಶ್ರೀಜಾಳನ್ನು ಬಂಧಿಸಿದ್ದಾರೆ.

ತಾಯಿಯೊಂದಿಗೆ ದಾಸ್ ಅನೈತಿಕ ಸಂಬಂಧವನ್ನಿಟ್ಟುಕೊಂಡಿದ್ದರಿಂದ ಶ್ರೀಜಾ ಅಸಮಾಧಾನಗೊಂಡಿದ್ದಳು, ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ