ಆ್ಯಪ್ನಗರ

ತಾಯಿಯ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕುಡುಕ ತಂದೆಯನ್ನು ಕೊಂದ ಬಾಲಕಿ..!

ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುವುದನ್ನು ಸಹಿಸದೇ 16 ವರ್ಷದ ಬಾಲಕಿ ತನ್ನ ತಂದೆಯನ್ನು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬುಧವಾರ ನಡೆದಿದೆ. ಬಳಿಕ 100ಕ್ಕೆ ಡಯಲ್‌ ಮಾಡಿ ಪೊಲೀಸರಿಗೆ ಬಾಲಕಿ ಶರಣಾಗಿದ್ದಾಳೆ.

TNN 22 Oct 2020, 5:15 pm
ಭೋಪಾಲ್: ಕುಡಿದು ಬಂದು ತಾಯಿಯ ಮೇಲೆ ಹಲ್ಲೆ ನಡೆಸುವುದನ್ನು ಸಹಿಸದೇ 16 ವರ್ಷದ ಬಾಲಕಿ ತನ್ನ ತಂದೆಯನ್ನು ಸಾಯಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬುಧವಾರ ನಡೆದಿದೆ. ಬಳಿಕ 100ಕ್ಕೆ ಡಯಲ್‌ ಮಾಡಿ ಪೊಲೀಸರಿಗೆ ಬಾಲಕಿ ಶರಣಾಗಿದ್ದಾಳೆ.
Vijaya Karnataka Web girl kills dad for beating mom calls cops surrenders
ತಾಯಿಯ ಮೇಲೆ ಹಲ್ಲೆ ನಡೆಸಿದ್ದಕ್ಕೆ ಕುಡುಕ ತಂದೆಯನ್ನು ಕೊಂದ ಬಾಲಕಿ..!


ಬಾಲಕಿ ತನ್ನ 45 ವರ್ಷದ ತಂದೆಯನ್ನು ಬಟ್ಟೆ ಒಗೆಯಲು ಬಳಸುವ ಬ್ಯಾಟ್ ಮತ್ತು ಲೋಹಂಗಿಯಿಂದ ಹೊಡೆದು ಸ್ಥಳದಲ್ಲೇ ಕೊಲೆ ಮಾಡಿದ್ದಾಳೆ. ಮೃತ ವ್ಯಕ್ತಿ ನಿರುದ್ಯೋಗಿಯಾಗಿದ್ದು, ಮೇಸನ್‌ ಆಗಿ ಕೆಲಸ ಮಾಡುವ ಹಿರಿಯ ಮಗನ ಸಂಪಾದನೆಯಿಂದ ಜೀವನ ಸಾಗಿಸುತ್ತಿದ್ದರು ಎಂದು ಬೆರಾಸಿಯಾ ಉಪವಿಭಾಗದ ಪೊಲೀಸ್ ಅಧಿಕಾರಿ ಕೆ.ಕೆ.ವರ್ಮಾ ಹೇಳಿದ್ದಾರೆ.

ತಂದೆಯ ನಿರಂತರ ಕುಡಿತದಿಂದ ಕುಟುಂಬ ಜರ್ಜರಿತಗೊಂಡಿತ್ತು. ದಿನಾಲೂ ಬಾಲಕಿಯ ತಾಯಿಯನ್ನು ನಿಂದಿಸುವ ಹಾಗೂ ಹಲ್ಲೆ ನಡೆಸುವ ಕಾರ್ಯವನ್ನು ತಂದೆ ಮುಂದುವರೆಸಿದ್ದ. ಬುಧವಾರ ಸಂಜೆ 6.30ರ ಸುಮಾರಿಗೆ ಹಿರಿಯ ಮಗನ ವಿವಾಹದ ಬಗ್ಗೆ ಚರ್ಚೆಯಾಗುತ್ತಿತ್ತು. ಆಗ, ಮದ್ಯ ವ್ಯಸನಿ ತಂದೆ ಜಗಳ ಪ್ರಾರಂಭಿಸಿದ್ದಾನೆ.

ದೇಶದಲ್ಲಿ ಮೊಬೈಲ್‌ ಬಳಕೆಯಿಂದ ರಸ್ತೆ ಅಪಘಾತಗಳ ಸಾವಿನ ಸಂಖ್ಯೆ ಹೆಚ್ಚಳ, ಬೆಂಗಳೂರು ಯಾವ ಸ್ಥಾನದಲ್ಲಿದೆ?

ಮದುವೆ ಮಾತುಕತೆ ಸಂದರ್ಭದಲ್ಲಿ ಜಗಳ ಪ್ರಾರಂಭಿಸಿದ್ದಕ್ಕೆ ಕೋಪಗೊಂಡ 16 ವರ್ಷದ ಬಾಲಕಿ ಬ್ಯಾಟ್‌ನಿಂದ ತಲೆಗೆ ಹೊಡೆಯಲು ಪ್ರಾರಂಭಿಸಿದ್ದಾಳೆ. ತೀವ್ರ ರಕ್ತಸ್ರಾವವಾಗುತ್ತಿದ್ದರೂ ಬಾಲಕಿ ಲೋಹಂಗಿಯಿಂದ ಹೊಡೆಯುವುದನ್ನು ಮುಂದುವರೆಸಿದ್ದು, ತಂದೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಭೀಕರ ರಸ್ತೆ ಅಪಘಾತ; 80 ಅಡಿ ಪ್ರಪಾತಕ್ಕೆ ಉರುಳಿದ ಬಸ್‌..! ಐವರ ದುರ್ಮರಣ, 35 ಮಂದಿ ಗಂಭೀರ..!

ತಂದೆಯ ಸಾವಿನ ಬಳಿಕ ತಾನೇ 100ಕ್ಕೆ ಡಯಲ್‌ ಮಾಡಿ ಪೊಲೀಸರನ್ನು ಕರೆದು ನಾನೇ ತಂದೆಯನ್ನು ಕೊಂದಿದ್ದೇನೆ, ಬಂಧನಕ್ಕಾಗಿ ಕಾಯುತ್ತಿದ್ದೇನೆ ಎಂದು ಬಾಲಕಿ ಹೇಳಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯನ್ನು ಬಾಲಾಪರಾಧಿಗಳ ಕಾರಾಗೃಹದಲ್ಲಿ ಇರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ