ಆ್ಯಪ್ನಗರ

ರಸ್ತೆ ಅಪಘಾತದಲ್ಲಿ ಗೀತಂ ವಿವಿ ಸ್ಥಾಪಕ ಸಾವು

ಅಮೆರಿಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ 'ಗೀತಂ' ವಿಶ್ವವಿದ್ಯಾಲಯದ ಸ್ಥಾಪಕ ಎಂ.ವಿ.ವಿ.ಎಸ್‌ ಮೂರ್ತಿ(76) ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಕಾರಿನಲ್ಲಿದ್ದ ಆಂಧ್ರ ಪ್ರದೇಶ ಮೂಲದ ಇತರ ಮೂವರು ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Vijaya Karnataka 4 Oct 2018, 8:10 am
ಅಮರಾವತಿ: ಅಮೆರಿಕದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶದ 'ಗೀತಂ' ವಿಶ್ವವಿದ್ಯಾಲಯದ ಸ್ಥಾಪಕ ಎಂ.ವಿ.ವಿ.ಎಸ್‌ ಮೂರ್ತಿ(76) ಮೃತಪಟ್ಟಿದ್ದಾರೆ. ಅಪಘಾತದ ವೇಳೆ ಕಾರಿನಲ್ಲಿದ್ದ ಆಂಧ್ರ ಪ್ರದೇಶ ಮೂಲದ ಇತರ ಮೂವರು ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Vijaya Karnataka Web mvvs murthy


ಅಲಸ್ಕಾದಲ್ಲಿ ಅಕ್ಟೋಬರ್‌ 6ರಂದು ನಡೆಯಬೇಕಿದ್ದ ಗೀತಂ (ಗಾಂಧಿ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌) ವಿವಿಯ ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಅಮೆರಿಕ್ಕೆ ತೆರಳಿದ್ದರು. ವನ್ಯಜೀವಿಧಾಮವೊಂದಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಮೂರ್ತಿ ಅವರಿದ್ದ ಕಾರು ಎದುರಿನಿಂದ ಬಂದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

1991-96 ಮತ್ತು 1999-2004ರವ ಅವಧಿಯಲ್ಲಿ ವಿಶಾಖಪಟ್ಟಣಂ ಸಂಸದರಾಗಿದ್ದ ಮೂರ್ತಿ, 1983ರಿಂದಲೂ ತೆಲುಗು ದೇಶಂ ಪಾರ್ಟಿ ಹಿರಿಯ ಮುಖಂಡರಾಗಿ ಗುರುತಿಸಿಕೊಂಡಿದ್ದರು. ಶಿಕ್ಷ ಣ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯೂ ಅಪಾರ. ವಿಜಯವಾಡ, ಬೆಂಗಳೂರು ಮತ್ತು ಹೈದರಾಬಾದ್‌ ನಗರಗಳಲ್ಲಿ 'ಗೀತಂ' ಶಿಕ್ಷ ಣ ಸಂಸ್ಥೆಗಳಿವೆ. ಅವರ ಸಾವಿಗೆ ಟಿಡಿಪಿ ವರಿಷ್ಠ ನಾಯಕರಾಗಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ