ಆ್ಯಪ್ನಗರ

ದೇಹದೊಳಗೆ ಕಂಡು ಬಂತು ಗ್ಲಾಸ್

ದೇಹದೊಳಕ್ಕೆ ಗ್ಲಾಸ್ ಅನ್ನು ಬಲವಂತವಾಗಿ ತುರುಕಿಲ್ಲ ಎಂದು ರೋಗಿ ತಪಾಸಣೆಯ ವೇಳೆ ವೈದ್ಯರಿಗೆ ತಿಳಿಸಿದ್ದಾನೆ. ಆದರೆ ಗ್ಲಾಸ್ ಹೇಗೆ ಕರುಳಿನಲ್ಲಿ ಸೇರಿಕೊಂಡಿತು ಎನ್ನುವುದು ವೈದ್ಯರಿಗೂ ಸವಾಲಾಗಿ ಕಂಡಿದೆ.

Vijaya Karnataka Web 1 Oct 2018, 4:31 pm
ಫರೀದಾಬಾದ್‌: ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾದ ರೋಗಿಯೊಬ್ಬನನ್ನು ಪರಿಶೀಲಿಸಿ, ಎಕ್ಸ್ ರೇ ನಡೆಸಿದಾಗ ಆತನ ಕರುಳಿನಲ್ಲಿ ಸ್ಟೀಲ್ ಗ್ಲಾಸ್ ಒಂದು ಪತ್ತೆಯಾದ ಪ್ರಕರಣ ಹರಿಯಾಣದ ಫರೀದಾಬಾದ್‌ನಲ್ಲಿ ವರದಿಯಾಗಿದೆ.
Vijaya Karnataka Web glass x ray


ನಗರದ ಬಿಕೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ವ್ಯಕ್ತಿಯ ಕರುಳಿನಲ್ಲಿ ಸ್ಟೀಲ್ ಗ್ಲಾಸ್ ಕಂಡುಬಂದಿದ್ದು, ಕೂಡಲೇ ಆತನಿಗೆ ದೆಹಲಿ ಏಮ್ಸ್‌ಗೆ ದಾಖಲಾಗುವಂತೆ ವೈದ್ಯರು ಸೂಚಿಸಿದ್ದಾರೆ.

ಹೊಟ್ಟೆನೋವಿಗೆ ನಿಖರ ಕಾರಣ ಕಂಡುಬರದಿದ್ದಾಗ ವೈದ್ಯರು ಎಕ್ಸ್ ರೇಗೆ ಸೂಚಿಸಿದ್ದು, ಡಾ. ಉಪೇಂದ್ರ ಮತ್ತು ಡಾ. ಸಂದೀಪ್ ಅಗರ್‌ವಾಲ್ ಎಕ್ಸ್ ರೇ ನಡೆಸಿ ಹೊಟ್ಟೆಯಲ್ಲಿರುವ ಗ್ಲಾಸ್ ಅನ್ನು ಕೂಡಲೇ ತೆಗೆಯಬೇಕು, ಅದಕ್ಕಾಗಿ ಶಸ್ತ್ರಚಿಕಿತ್ಸೆ ಅಗತ್ಯ ಎಂದು ಸೂಚಿಸಿದ್ದಾರೆ. ಕರುಳಿನಲ್ಲಿ ಗ್ಲಾಸ್ ಸಿಲುಕಿಕೊಂಡಿರುವುದರಿಂದ ಹೊಟ್ಟೆ ನೋವು ಜತೆಗೆ ಆಹಾರ ಪಚನಕ್ರಿಯೆ ಸರಿಯಾಗಿ ಆಗುತ್ತಿಲ್ಲ.

ಆಪರೇಷನ್ ಮಾಡಿಸಬೇಕೆಂದ ವೈದ್ಯರ ಸಲಹೆಗೆ ರೋಗಿ ಮನೆಯವರು ಒಪ್ಪಿಲ್ಲ. ಹೀಗಾಗಿ ಹೊಸದಿಲ್ಲಿಯ ಏಮ್ಸ್‌ಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ. ದೇಹದೊಳಕ್ಕೆ ಗ್ಲಾಸ್ ಅನ್ನು ಬಲವಂತವಾಗಿ ತುರುಕಿಲ್ಲ ಎಂದು ರೋಗಿ ತಪಾಸಣೆಯ ವೇಳೆ ವೈದ್ಯರಿಗೆ ತಿಳಿಸಿದ್ದಾನೆ. ಆದರೆ ಗ್ಲಾಸ್ ಹೇಗೆ ಕರುಳಿನಲ್ಲಿ ಸೇರಿಕೊಂಡಿತು ಎನ್ನುವುದು ವೈದ್ಯರಿಗೂ ಸವಾಲಾಗಿ ಕಂಡಿದೆ.

ಮೂಲ ವರದಿ: ನವಭಾರತ್ ಟೈಮ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ