ಆ್ಯಪ್ನಗರ

'ಅಂತಾರಾಷ್ಟ್ರೀಯ ವ್ಯವಹಾರ'ದಲ್ಲಿ ಮೋದಿಯದ್ದು ಕಳಪೆ ಪ್ರದರ್ಶನ?!

ಪ್ರಧಾನಿಯಾಗಿ ಆಯ್ಕೆಯಾದ ಕೂಡಲೇ ಪ್ರತಿಜ್ಞಾ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ದೇಶಗಳ ಮುಖಂಡರನ್ನು ಕರೆಯಿಸುವ ಮೂಲಕ ವಿದೇಶಿ ಬಾಂಧವ್ಯ ವೃದ್ಧಿಗೆ ಒತ್ತು ನೀಡಿ, ಎಲ್ಲರ ಪ್ರಶಂಸೆಗೆ ಪಾತ್ರವಾದ ಪ್ರಧಾನಿ ಮೋದಿ 'ಅಂತರಾಷ್ಟ್ರೀಯ ವ್ಯವಹಾರ' ವಿಷಯದಲ್ಲಿ ತೀರಾ ಕಡಿಮೆ ಅಂಕ ಪಡೆದಿದ್ದರಂತೆ!

TNN 10 May 2016, 4:23 pm
ಅಹ್ಮದಾಬಾದ್: ಪ್ರಧಾನಿಯಾಗಿ ಆಯ್ಕೆಯಾದ ಕೂಡಲೇ ಪ್ರತಿಜ್ಞಾ ಸ್ವೀಕಾರ ಸಮಾರಂಭಕ್ಕೆ ಸಾರ್ಕ್ ದೇಶಗಳ ಮುಖಂಡರನ್ನು ಕರೆಯಿಸುವ ಮೂಲಕ ವಿದೇಶಿ ಬಾಂಧವ್ಯ ವೃದ್ಧಿಗೆ ಒತ್ತು ನೀಡಿ, ಎಲ್ಲರ ಪ್ರಶಂಸೆಗೆ ಪಾತ್ರವಾದ ಪ್ರಧಾನಿ ಮೋದಿ 'ಅಂತರಾಷ್ಟ್ರೀಯ ವ್ಯವಹಾರ' ವಿಷಯದಲ್ಲಿ ತೀರಾ ಕಡಿಮೆ ಅಂಕ ಪಡೆದಿದ್ದರಂತೆ!
Vijaya Karnataka Web globetrotting pm modi was weakest in international relations
'ಅಂತಾರಾಷ್ಟ್ರೀಯ ವ್ಯವಹಾರ'ದಲ್ಲಿ ಮೋದಿಯದ್ದು ಕಳಪೆ ಪ್ರದರ್ಶನ?!


ಆಮ್ ಆದ್ಮಿ ಪಕ್ಷ ಮೋದಿ ಪದವಿ ಬಗ್ಗೆ ಪ್ರಶ್ನಿಸಿ, ಪ್ರಧಾನಿ ವಿದ್ಯಾರ್ಹತಾ ಪತ್ರಗಳನ್ನು ಬಿಜೆಪಿ ಬಿಡುಗಡೆ ಮಾಡಿದ ನಂತರ 'ಮಿರರ್'ಗೆ ಅವರ ಅಂಕ ಪಟ್ಟಿ ಲಭ್ಯವಾಗಿದೆ. 'ಅಂತಾರಾಷ್ಟ್ರೀಯ ವ್ಯವಹಾರ' ವಿಷಯದಲ್ಲಿ ಮೋದಿ ಕಡಿಮೆ ಎಂದರೆ ಕೇವಲ 48 ಅಂಕಗಳು ಪಡೆದಿದ್ದರು ಎಂಬುವುದು ಪತ್ತೆಯಾಗಿದೆ. ಆದರೆ, ರಾಜಕೀಯ ವಿಶ್ಲೇಷಣೆ ವಿಷಯದಲ್ಲಿ ಹೆಚ್ಚು ಅಂಕ ಪಡೆದಿದ್ದರು.

ಮೋದಿ ಈ ವಿಷಯದಲ್ಲಿ ಕಡಿಮೆ ಅಂಕ ಪಡೆದಿದ್ದನ್ನು ಸರಿದೂಗಿಸಲು ಈಗ ಹೆಚ್ಚೆಚ್ಚು ವಿದೇಶಿ ಪ್ರವಾಸಗಳನ್ನು ಕೈಗೊಂಡು, ಉತ್ತಮ ಬಾಂಧವ್ಯ ಹೊಂದಲು ಶ್ರಮಿಸುತ್ತಿರಬುಹುದು. ಅಧಿಕಾರ ಸ್ವೀಕರಿಸಿಕೊಂಡ ನಂತರ ಮೋದಿ ಹಲವಾರು ದೇಶಗಳಿಗೆ ಭೇಟಿ ನೀಡಿದ್ದು, 2015ರಲ್ಲಿಯೇ 26 ದೇಶಗಳಿಗೆ ಭೇಟಿ ನೀಡಿದ್ದಾರೆ.

ಮೋದಿ ಸರಾಸರಿಗಿಂತ ಉತ್ತಮ ವಿದ್ಯಾರ್ಥಿಯಾಗಿದ್ದು, ಪ್ರಥಮ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ