ಆ್ಯಪ್ನಗರ

ಟ್ವಿಟ್ಟರ್‌ನಲ್ಲಿ #GoBackModi ಅಭಿಯಾನ ವೈರಲ್‌

ಸಾಮಾಜಿಕ ತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನವನ್ನು ವಿರೋಧಿಸಿ #GoBackModi ಎಂಬ ಹ್ಯಾಶ್‌ಟ್ಯಾಗ್‌ ಅಭಿಯಾನ ಜೋರಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕರ್ನಾಟಕಕ್ಕೆ ಮೋದಿ ಭೇಟಿ ಹಿನ್ನೆಲೆ ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ.

Vijaya Karnataka Web 10 Feb 2019, 10:23 am
ಹೈದರಾಬಾದ್‌: ಪ್ರಧಾನಿ ನರೇಂದ್ರ ಮೋದಿ ಅವರ ಭಾನುವಾರದ ದಕ್ಷಿಣ ಭಾರತದ ಮೂರು ರಾಜ್ಯಗಳ ಭೇಟಿಗೆ ಸಂಬಂಧಿಸಿ ಟ್ವಿಟರ್‌ನಲ್ಲಿ #GoBackModi ಅಭಿಯಾನ ವೈರಲ್‌ ಆಗಿದೆ.
Vijaya Karnataka Web Go Back Modi


ಮೋದಿ ವಾಪಾಸ್‌ ಹೋಗಿ, ಮತ್ತೆಂದೂ ಮೋದಿ ಬೇಡ ಎಂಬರ್ಥದ ಬ್ಯಾನರ್‌ಗಳು, ಪೋಸ್ಟರ್‌ಗಳು ಟ್ವೀಟರ್‌ನಲ್ಲಿ ಹರಿದಾಡುತ್ತಿವೆ. ಪ್ರಧಾನಿ ಮೋದಿ ಭಾನುವಾರ ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

ರಾಷ್ಟ್ರದಲ್ಲಿ ಭಾನುವಾರ ಬೆಳಗ್ಗಿನಿಂದ #GoBackModiAndhra ಹ್ಯಾಶ್‌ಟ್ಯಾಗ್‌ ಭಾರಿ ಸದ್ದು ಮಾಡುತ್ತಿದೆ. ಟ್ವಿಟರ್‌ನಲ್ಲಿ ಪ್ರಮುಖ ಟ್ರೆಂಡಿಂಗ್‌ ಆಗಿದೆ. #TNWelcomesModi ಮತ್ತು #GoBackSadistModi ಎಂಬ ಹ್ಯಾಶ್‌ಟ್ಯಾಗ್‌ಗಳು ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ ಆಗಿವೆ.

ಸಾಮಾಜಿಕ ತಾಣದಲ್ಲಿ #NoMoreModi ಮತ್ತು #ModIsAMistake ಎಂಬ ಘೋಷಣೆಗಳಿರುವ ಫಲಗಳನ್ನು ಪ್ರದರ್ಶಿಸುತ್ತಿರುವ ಜನರ ಗುಂಪು ಮತ್ತು ಪ್ರಧಾನಿ ನರೇಂದ್ರ ಮೋದಿ ಓಡುತ್ತಿರುವ ಕಾರ್ಟೂನ್‌ಗಳನ್ನು ಬಳಕೆ ಮಾಡಿದ ಪೋಸ್ಟರ್‌ ವೈರಲ್‌ ಆಗಿದೆ.


ಯುವಕರಿಗೆ ಉದ್ಯೋಗಗಳಿಲ್ಲ ಎಂದು ಚಿಂತಿಸುತ್ತಿದ್ದರೆ, ಟ್ಯಾಕ್ಸ್‌ ಕಟ್ಟುತ್ತಿಲ್ಲ ಎಂದು ಮೋದಿ ಸರಕಾರ ಯುವಕರ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿ ತಮಿಳುನಾಡು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಕಾಂಗ್ರೆಸ್‌ ವಕ್ತಾರ ಸಂಜಯ್‌ ಜಾ, ಕಠಿಣ ಪರಿಸ್ಥಿತಿಯಲ್ಲಿ 71 ವರ್ಷಗಳ ಕಾಲ ಕಷ್ಟದಿಂದ ನಿರ್ಮಿಸಿದ್ದ ಭಾರತವನ್ನು ಮಿ.56 ಕೇವಲ 56 ತಿಂಗಳೊಳಗೆ ಹಾಳು ಮಾಡಿದ್ದಾರೆ ಎಂದು ಟ್ವೀಟ್‌ ಮಾಡಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ