ಆ್ಯಪ್ನಗರ

ಪ್ರಧಾನಿ ಮೋದಿಗೆ ಸಿಕ್ಕ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅವಧಿಯಲ್ಲಿ ಸೆಪ್ಟೆಂಬರ್‌ 14ರಿಂದ ಆರಂಭಿಸಿ ಹಲವು ಉಡುಗೊರೆಗಳು, ನೆನಪಿನ ಕಾಣಿಕೆಗಳನ್ನು ಜನರು ಅವರಿಗೆ ನೀಡಿದ್ದಾರೆ. ಇದೇ ಉಡುಗೊರೆಗಳನ್ನು ಈಗ ಹರಾಜು ಹಾಕಲಾಗುತ್ತಿದೆ.

Vijaya Karnataka Web 3 Oct 2019, 4:29 pm
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶ ಒದಗಿ ಬಂದಿದೆ. ತಮಗೆ ಸಿಕ್ಕ ಉಡುಗೊರೆಗಳನ್ನು ಮೋದಿಯವರು ಹರಾಜಿಗೆ ಹಾಕುತ್ತಿದ್ದು ಅದನ್ನು ನೀವು ಕೂಡ ಖರೀದಿಸಬಹುದು.
Vijaya Karnataka Web Prime Minister Narendra Modi


ಈ ಸಂಬಂಧ ಟ್ಟೀಟ್‌ ಮಾಡಿರುವ ಅವರು ದಿಲ್ಲಿಯ ಇಂಡಿಯಾ ಗೇಟ್‌ ಪಕ್ಕದಲ್ಲಿರುವ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ಗೆ ಭೇಟಿ ನೀಡಿ ಸಿಕ್ಕಿರುವ ಉಡುಗೊರೆಗಳನ್ನು ವೀಕ್ಷಿಸಬಹುದು ಎಂದಿದ್ದಾರೆ. ಆನ್‌ಲೈನ್‌ನಲ್ಲಿ ಬಿಡ್‌ ಮಾಡುವ ಅವಕಾಶವೂ ಇದೆ.

ಇದರಲ್ಲಿ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ. ಈ ಮೂಲಕ ಗಂಗಾ ನದಿಯನ್ನು ಶುದ್ಧೀಕರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಹಣವನ್ನು ವಿನಿಯೋಗಿಸಲಾಗುತ್ತದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅವಧಿಯಲ್ಲಿ ಸೆಪ್ಟೆಂಬರ್‌ 14ರಿಂದ ಆರಂಭಿಸಿ ಹಲವು ಉಡುಗೊರೆಗಳು, ನೆನಪಿನ ಕಾಣಿಕೆಗಳನ್ನು ಜನರು ಅವರಿಗೆ ನೀಡಿದ್ದಾರೆ. ಇದೇ ಉಡುಗೊರೆಗಳನ್ನು ಈಗ ಹರಾಜು ಹಾಕಲಾಗುತ್ತಿದೆ.



ಹರಾಜಿಗೆ ಭಾರಿ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ಅಕ್ಟೋಬರ್‌ 17ರವರೆಗೆ ಮುಂದೂಡಲಾಗಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, 'ಬಿಡ್‌ನಲ್ಲಿ ಪಾಲ್ಗೊಳ್ಳಿ' ಎಂದು ಜನರಿಗೆ ಕರೆ ನೀಡಿದ್ದಾರೆ.

ಈ ಹಿಂದೆ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ನರೇಂದ್ರ ಮೋದಿ ತಮಗೆ ಸಿಕ್ಕ ಉಡುಗೊರೆಗಳನ್ನು ಹರಾಜು ಹಾಕುತ್ತಿದ್ದರು. ಈ ಹಣವನ್ನು ಬಾಲಕಿಯರ ಶಿಕ್ಷಣಕ್ಕೆ ಅವರು ಮೀಸಲಿಡುತ್ತಿದ್ದರು. ಇದೀಗ ಪ್ರಧಾನಿಯಾದ ಬಳಿಕ ತಮಗೆ ಸಿಕ್ಕ ಉಡುಗೊರೆಗಳ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ಈ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ