ಆ್ಯಪ್ನಗರ

ಕಥಕ್‌ ' ನೃತ್ಯ ಸಾಮ್ರಾಜ್ಞಿ' ಸಿತಾರಾ ದೇವಿಗೆ ಗೂಗಲ್‌ ಗೌರವ

ಕಥಕ್‌ ‘ನೃತ್ಯ ಸಾಮ್ರಾಜ್ಞಿ’ ಸಿತಾರಾ ದೇವಿಯವರ 97ನೇ ಹುಟ್ಟು ಹಬ್ಬದ ಪ್ರಯುಕ್ತ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ

Vijaya Karnataka Web 8 Nov 2017, 11:26 am
ಮುಂಬಯಿ: ಕಥಕ್‌ ‘ನೃತ್ಯ ಸಾಮ್ರಾಜ್ಞಿ’ ಸಿತಾರಾ ದೇವಿಯವರ 97ನೇ ಹುಟ್ಟು ಹಬ್ಬದ ಪ್ರಯುಕ್ತ ಗೂಗಲ್‌ ಡೂಡಲ್‌ ಗೌರವ ಸಲ್ಲಿಸಿದೆ.
Vijaya Karnataka Web google doodle celebrates kathak legend sitara devi
ಕಥಕ್‌ ' ನೃತ್ಯ ಸಾಮ್ರಾಜ್ಞಿ' ಸಿತಾರಾ ದೇವಿಗೆ ಗೂಗಲ್‌ ಗೌರವ


1929ರಲ್ಲಿ ಕೋಲ್ಕತ್ತದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಸಿತಾರಾ ದೇವಿ ಅವರು ತಂದೆ ಸುಖದೇವ್‌ ಮಹಾರಾಜ್‌ ಸಹ ಓರ್ವ ಕಥಕ್‌ ನೃತ್ಯಪಟು. ತಂದೆಯ ಸಂಗೀತ ಮತ್ತು ನೃತ್ಯ ಸಾಹಿತ್ಯದಿಂದ ಆಕರ್ಷಿತರಾಗಿದ್ದ ಸಿತಾರಾ ದೇವಿ 16ನೇ ವಯಸ್ಸಿನಲ್ಲಿ ಮುಂಬಯಿಯಲ್ಲಿ ನೀಡಿದ ಕಾರ್ಯಕ್ರಮವೊಂದನ್ನು ನೋಡಿದ ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಟ್ಯಾಗೋರ್ ಅವರು ಸಿತಾರಾ ಅವರಿಗೆ ‘ನೃತ್ಯ ಸಾಮ್ರಾಜ್ಞಿ’ ಎಂಬ ಬಿರುದು ನೀಡಿದರು.

ಬಾಲಿವುಡ್‌ನಲ್ಲಿ ಕಥಕ್‌ ನೃತ್ಯವನ್ನು ಪ್ರದರ್ಶಿಸಿದ ಕೀರ್ತಿ ಸಿತಾರಾ ದೇವಿಗೆ ಸಲ್ಲುತ್ತದೆ. ಮೊಘಲ್‌ ಎ ಆಜಂ ಚಲನಚಿತ್ರ ನಿರ್ದೇಶಕ ಕೆ. ಆಸೀಫ್‌ ಅವರನ್ನು ಸಿತಾರಾ ಮದುವೆಯಾಗಿದ್ದರು. ನಂತರ ಪ್ರತಾಪ್‌ ಬರೂಟ್‌ ಅವರನ್ನು ವಿವಾಹವಾಗಿದ್ದ ಸಿತಾರಾ ದೇವಿ, 2014ರಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ