ಆ್ಯಪ್ನಗರ

ಆಸ್ಪತ್ರೆ ದುರಂತ: ಶಿಶು ವಿಭಾಗದ ವೈದ್ಯಾಧಿಕಾರಿ ವಜಾ

ಗೋರಖ್‌ಪುರದ ಬಾಬಾ ರಾಘವ್‌ ದಾಸ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಭಾರೀ ಪ್ರಮಾಣದ ಸಾವು ನೋವಿನ ಬಳಿಕ ಆಸ್ಪತ್ರೆಯ ಶಿಶು ವಿಭಾಗದ ವೈದ್ಯಾಧಿಕಾರಿಯನ್ನು ವಜಾ ಮಾಡಲಾಗಿದೆ..

ಏಜೆನ್ಸೀಸ್ 13 Aug 2017, 7:00 pm
ಹೊಸದಿಲ್ಲಿ: ಗೋರಖ್‌ಪುರದ ಬಾಬಾ ರಾಘವ್‌ ದಾಸ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಭಾರೀ ಪ್ರಮಾಣದ ಸಾವು ನೋವಿನ ಬಳಿಕ ಆಸ್ಪತ್ರೆಯ ಶಿಶು ವಿಭಾಗದ ವೈದ್ಯಾಧಿಕಾರಿ ಡಾ. ಖಫಿಲ್‌ ಖಾನ್‌ ಅವರನ್ನು ವಜಾ ಮಾಡಲಾಗಿದೆ.
Vijaya Karnataka Web gorakhpur hospital chief sacked
ಆಸ್ಪತ್ರೆ ದುರಂತ: ಶಿಶು ವಿಭಾಗದ ವೈದ್ಯಾಧಿಕಾರಿ ವಜಾ


ಈ ಕುರಿತು ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಆಮ್ಲಜನಕದ ಪೂರೈಕೆಯಲ್ಲಿ ಆದ ವ್ಯತ್ಯಯ ಕಾರಣ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ಘಟನೆ ಸಂಬಂಧಿಸಿದಂತೆ ಆಸ್ಪತ್ರೆಯ ಶಿಶು ವಿಭಾಗದ ವೈದ್ಯಾಧಿಕಾರಿ ವಜಾ ಮಾಡಲಾಗಿರುವುದಾಗಿ ಹೇಳಿದ್ದಾರೆ.

Dr. Kafeel Khan removed as the Nodal Officer for the Department of Pediatrics of Baba Raghav Das Medical College, #Gorakhpur. — ANI UP (@ANINewsUP) August 13, 2017 ಕಳೆದ ವಾರ ಈ ಆಸ್ಪತ್ರೆಯಲ್ಲಿ 68 ಮಕ್ಕಳು ಮೃತಪಟ್ಟಿದ್ದರು. ಘಟನೆ ಕುರಿತು ಕೂಲಂಕಷ ತನಿಖೆಗೆ ಆದೇಶಿಸಿರುವ ಮುಖ್ಯಮಂತ್ರಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಲ್ಲದೇ ಶನಿವಾರದಂದು ಕಾಲೇಜಿನ ಪ್ರಾಂಶುಪಾಲ ರಾಜೀವ್‌ ಮಿಶ್ರಾರನ್ನು ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಅಲ್ಲದೇ ನ್ಯಾಯಾಂಗ ತನಿಖೆಗೆ ಒಳಪಡುವಂತೆ ಹೇಳಿದ್ದರು.

ಭಾನುವಾರವೂ ಮೃತಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು 70ಕ್ಕೂ ಅಧಿಕ ಮಕ್ಕಳ ಸಾವಿಗೀಡಾಗಿದ್ದಾರೆ. ಘಟನೆ ಕುರಿತು ಯೋಗಿ ಆದಿತ್ಯನಾಥ್‌ ಕೂಡಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Gorakhpur tragedy: Kafeel Khan sacked

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ