ಆ್ಯಪ್ನಗರ

ಖಲಿಸ್ತಾನ ವಿಮೋಚನಾ ಪಡೆಯನ್ನು ನಿಷೇಧಿಸಿದ ಸರಕಾರ

ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಿರುವಂತೆ, ಪಂಜಾಬ್‌ ವಿಭಜಿಸಿ ಪ್ರತ್ಯೇಕ ಖಲಿಸ್ತಾನ್‌ಗೆ ಆಗ್ರಹಿಸಿ ಈ ಸಂಘಟನೆ ಹಿಂಸಾತ್ಮಕ ಅಭಿಯಾನದಲ್ಲಿ ತೊಡಗಿದೆ. ಅಲ್ಲದೇ ಕಳೆದ ಕೆಲವು ತಿಂಗಳಿನಿಂದ ಪಂಜಾಬ್‌ನಲ್ಲಿ ಭಯೋತ್ಪದಾನೆಯನ್ನು ಪುನುರುಜ್ಜೀವಗೊಳಿಸುವ ಕಾರ್ಯದಲ್ಲಿ ಸಂಘಟನೆ ತೊಡಗಿದೆ.

Vijaya Karnataka 28 Dec 2018, 5:00 am
ಹೊಸದಿಲ್ಲಿ: ಸಮಾಜ ಘಾತುಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಖಲಿಸ್ತಾನ ವಿಮೋಚನಾ ಪಡೆ (ಕೆಎಲ್‌ಎಫ್‌)ಯನ್ನು ಕೇಂದ್ರ ಸರಕಾರ ನಿಷೇಧಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಈ ಕ್ರಮ ಜರುಗಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಿರುವಂತೆ, ಪಂಜಾಬ್‌ ವಿಭಜಿಸಿ ಪ್ರತ್ಯೇಕ ಖಲಿಸ್ತಾನ್‌ಗೆ ಆಗ್ರಹಿಸಿ ಈ ಸಂಘಟನೆ ಹಿಂಸಾತ್ಮಕ ಅಭಿಯಾನದಲ್ಲಿ ತೊಡಗಿದೆ. ಅಲ್ಲದೇ ಕಳೆದ ಕೆಲವು ತಿಂಗಳಿನಿಂದ ಪಂಜಾಬ್‌ನಲ್ಲಿ ಭಯೋತ್ಪದಾನೆಯನ್ನು ಪುನುರುಜ್ಜೀವಗೊಳಿಸುವ ಕಾರ್ಯದಲ್ಲಿ ಸಂಘಟನೆ ತೊಡಗಿದೆ. ಖಲಿಸ್ತಾನ ವಿಮೋಚನಾ ಪಡೆ ಮತ್ತು ಅದರ ಎಲ್ಲಾ ವಿಭಾಗಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ. ಯುಎಪಿಎ ಅಡಿ ನಿಷೇಧಗೊಳ್ಳುತ್ತಿರುವ 40ನೇ ಸಂಘಟನೆ ಇದಾಗಿದೆ.
Vijaya Karnataka Web govt bans khalistan liberation force
ಖಲಿಸ್ತಾನ ವಿಮೋಚನಾ ಪಡೆಯನ್ನು ನಿಷೇಧಿಸಿದ ಸರಕಾರ


ಅಮಾಯಕ ಜನರು ಮತ್ತು ಪೊಲೀಸ್‌ ಅಧಿಕಾರಿಗಳ ಹತ್ಯೆ, ಭಾರತದ ನಾಗರಿಕರನ್ನು ಗುರಿಯಾಗಿಸಿಕೊಂಡು ಅನೇಕ ಬಾಂಬ್‌ ದಾಳಿಗಳು ಹಾಗೂ ಸುಲಿಗೆ, ಅಪಹರಣ, ಬ್ಯಾಂಕ್‌ ದರೋಡೆ ಮೂಲಕ ಉಗ್ರ ಚಟುವಟಿಕೆಗಳಿಗೆ ಹಣ ಸಂಗ್ರಹಣೆ ಮತ್ತು ಪ್ರಮುಖ ಸರಕಾರಿ ಸಿಬ್ಬಂದಿಯ ಹತ್ಯೆಯಲ್ಲಿ ಕೆಎಲ್‌ಎಫ್‌ ತೊಡಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ